For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳನ್ನ ಮನೆಗೆ ಕರೆಸಿ ಕಿವಿಮಾತು ಹೇಳಿದ ದಾಸ

  By Pavithra
  |
  ಫ್ಯಾನ್ ಪೇಜ್‌ಗಳ ಜೊತೆ ದರ್ಶನ್ ಮಾತುಕತೆ..! | Filmibeat Kannada

  ಸ್ಟಾರ್ ಗಳು ಹೆಚ್ಚಾಗಿ ಇದ್ದಾಗ ಅಲ್ಲಿ ಸ್ಟಾರ್ ವಾರ್ ಆಗುತ್ತಲೇ ಇರುತ್ತದೆ ಅದೇ ರೀತಿ ಕನ್ನಡ ಸಿನಿಮಾರಂಗದಲ್ಲಿ ಅಭಿಮಾನಿಗಳ ಮಧ್ಯೆ ವಾರ್ ನಡೆಯುವುದು ಕಾಮನ್ ಆಗೋಗಿದೆ. ಇತ್ತೀಚಿಗಂತು ಫ್ಯಾನ್ಸ್ ವಾರ್ ಹೆಚ್ಚಾಗಿದೆ.

  ಸ್ಟಾರ್ ಗಳು ಕೂಡ ಇಂದು ಸರಿ ಹೋಗುತ್ತೆ, ನಾಳೆ ಸರಿ ಹೋಗುತ್ತೆ ಅಂತ ಸೈಲೆಂಟ್ ಆಗಿದ್ದು ಸಾಕಾಗಿ ತಮ್ಮ ಸ್ಟೈಲ್ ನಲ್ಲಿ ಅಭಿಮಾನಿಗಳಿಗೆ ವಾರ್ನ್ ಮಾಡೋದಕ್ಕೆ ಶುರು ಮಾಡಿದ್ದಾರೆ. ಈ ಹಿಂದೆ ರಾಕಿಂಗ್ ಸ್ಟಾರ್ ತಮ್ಮ ಅಭಿಮಾನಿಗಳಿಗೆ ಇವೆಲ್ಲಾ ಸರಿಯಿಲ್ಲ, ಇಲ್ಲಿಗೆ ನಿಲ್ಲಿಸಿ. ನಾವೆಲ್ಲಾ ಚೆನ್ನಾಗಿದ್ದೇವೆ ಎಂದಿದ್ದರು.

  ದರ್ಶನ್ ಸಿನಿಮಾ ಟೈಟಲ್ ಗೊಂದಲ ನಿವಾರಿಸಿದ ತರುಣ್ ಸುಧೀರ್ದರ್ಶನ್ ಸಿನಿಮಾ ಟೈಟಲ್ ಗೊಂದಲ ನಿವಾರಿಸಿದ ತರುಣ್ ಸುಧೀರ್

  ಈಗ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ತಮ್ಮ ಅಭಿಮಾನಿಗಳನ್ನು ಮನೆಗೆ ಕರೆಸಿಕೊಂಡು ಕಿವಿಮಾತನ್ನು ಹೇಳಿ ಕಳುಹಿಸಿದ್ದಾರೆ. ಹಾಗಾದರೆ ದರ್ಶನ್ ಮನೆಗೆ ಬಂದ ಅಭಿಮಾನಿಗಳು ಯಾರ್ಯಾರು? ದರ್ಶನ್ ಫ್ಯಾನ್ಸ್ ಗಳಿಗೆ ಹೇಳಿದ ಮಾತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ಅಭಿಮಾನಿಗಳಿಗೆ ಡಿ ಬಾಸ್ ಕಿವಿಮಾತು

  ಅಭಿಮಾನಿಗಳಿಗೆ ಡಿ ಬಾಸ್ ಕಿವಿಮಾತು

  ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳನ್ನು ಮನೆಗೆ ಕರೆಸಿಕೊಂಡು ಷರತ್ತು ಹಾಕಿದ್ದಾರೆ. ದರ್ಶನ್ ಫ್ಯಾನ್ಸ್ ಪೇಜ್ ಗಳು ಹಾಗೂ ಅಭಿಮಾನಿ ಸಂಘಟನೆಯನ್ನು ನಡೆಸುವ ಅಭಿಮಾನಿಗಳನ್ನು ಕಳೆದ ಶನಿವಾರ ತಮ್ಮ ಮನೆಗೆ ಕರೆಸಿಕೊಂಡಿದ್ದರು.

  ಫ್ಯಾನ್ಸ್ ಜೊತೆ ನೇರ ಮಾತು-ಕಥೆ

  ಫ್ಯಾನ್ಸ್ ಜೊತೆ ನೇರ ಮಾತು-ಕಥೆ

  ಅಭಿಮಾನಿಗಳೊಂದಿಗೆ ನೇರವಾಗಿ ಮಾತನಾಡಿದ ದರ್ಶನ್, ಬೇರೆ ಯಾವುದೇ ನಟರ ವಿರುದ್ಧ ಕಮೆಂಟ್ ಮಾಡುವುದು, ಟ್ರೋಲ್ ಮಾಡೋದು ಅಥವಾ ಅಪಪ್ರಚಾರ ಹೇಳಿಕೆಗಳನ್ನು ನೀಡಬಾರದು ಎಂದು ಬುದ್ಧಿ ಮಾತು ಹೇಳಿದ್ದಾರಂತೆ.

  ಫ್ಯಾರ್ ವಾರ್ ವಿಚಾರವಾಗಿ ಮಾತು

  ಫ್ಯಾರ್ ವಾರ್ ವಿಚಾರವಾಗಿ ಮಾತು

  ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲವು ದಿನಗಳ ಹಿಂದೆಯಿಂದ ‘ಬಾಸ್` ಯಾರು ಎಂಬುದರ ಬಗ್ಗೆ ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ನಟರ ಅಭಿಮಾನಿಗಳು ಬೇರೆ ಕಲಾವಿದರ ಬಗ್ಗೆ ಕೆಟ್ಟದಾಗಿ ಕಮೆಂಟ್, ಟ್ರೋಲ್ ಮಾಡತೊಡಗಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ತಮ್ಮ ಅಭಿಮಾನಿಗಳು ಶಿಸ್ತಿನಿಂದ ನಡೆದುಕೊಳ್ಳುವಂತೆ ಹೇಳಿದ್ದಾರೆ.

  ಸಭೆಯಲ್ಲಿ ಅನೇಕ ಅಭಿಮಾನಿಗಳು

  ಸಭೆಯಲ್ಲಿ ಅನೇಕ ಅಭಿಮಾನಿಗಳು

  ಸಭೆಯಲ್ಲಿ 40ಕ್ಕೂ ಹೆಚ್ಚು ಅಭಿಮಾನಿ ಸಂಘಟನೆಯ ಹಾಗೂ ಫೇಸ್ ಬುಕ್ ಪೇಜ್ ನವರು ಭಾಗಿ ಆಗಿದ್ದರು. ದರ್ಶನ್ ಹೇಳಿದಂತೆ ಇನ್ನು ಮುಂದೆ ನಡೆದುಕೊಳ್ಳುವುದಾಗಿ ಅಭಿಮಾನಿಗಳು ತಿಳಿಸಿದ್ದಾರೆ.

  English summary
  Kannada actor Darshan has invited his fans his home. Darshan said to his fans please stop Trolling about other actors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X