»   » ಪುಟ್ಟ ಅಭಿಮಾನಿಗೆ ಅಪಾರ ಪ್ರೀತಿ ನೀಡಿದ 'ದಾಸ'

ಪುಟ್ಟ ಅಭಿಮಾನಿಗೆ ಅಪಾರ ಪ್ರೀತಿ ನೀಡಿದ 'ದಾಸ'

Posted By:
Subscribe to Filmibeat Kannada
ಪುಟ್ಟ ಅಭಿಮಾನಿಯನ್ನ ಭೇಟಿಯಾದ ದಚ್ಚು | Filmibeat Kannada

ಸ್ಟಾರ್ ಗಳಿಗೆ ಸಾಕಷ್ಟು ಅಭಿಮಾನಿಗಳಿರುತ್ತಾರೆ. ಕೆಲ ಅಭಿಮಾನಿಗಳು ನೆಚ್ಚಿನ ಕಲಾವಿದರನ್ನ ಹುಡುಕಿಕೊಂಡು ಹೋಗಿ ಭೇಟಿ ಮಾಡಿ ಸಂತತ ವ್ಯಕ್ತ ಪಡಿಸುತ್ತಾರೆ. ಇನ್ನು ಕೆಲವರು ಸಿನಿಮಾ, ಫೋಟೋಗಳನ್ನ ನೋಡಿಕೊಂಡು ಸುಮ್ಮನಾಗುತ್ತಾರೆ. ಆದರೆ ಕೆಲ ಅಭಿಮಾನಿಗಳನ್ನ ಮಾತ್ರ ಸ್ಟಾರ್ ಗಳೇ ಕರೆಸಿಕೊಂಡು ಭೇಟಿ ಮಾಡಿ ಖುಷಿ ಪಡುತ್ತಾರೆ.

ಅಂತದ್ದೆ ಸಾಲಿಗೆ ನಿಲ್ಲುವ ಅಭಿಮಾನಿಯೊಬ್ಬರನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿದ್ದಾರೆ. ಯಜಮಾನ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ದಾಸನನ್ನ ವಿಶೇಷ ಅಭಿಮಾನಿಯೊಬ್ಬರು ಹುಡುಕಿಕೊಂಡು ಸೆಟ್ ಗೆ ಬಂದಿದ್ದಾರೆ. ಪುಟ್ಟ ಅಭಿಮಾನಿಯನ್ನ ಕಂಡ 'ಡಿ ಬಾಸ್' ಕೂಡ ಸಂತಸ ವ್ಯಕ್ತ ಪಡಿಸಿದ್ದಾರೆ.

ಇನ್ಮುಂದೆ ದರ್ಶನ್ ಕಾಲ್ ಶೀಟ್ ನಲ್ಲಿ ಮೊದಲ ಆದ್ಯತೆ ಇವರಿಗೆ

ಹಾಗಾದರೆ ಆ ಅಭಿಮಾನಿ ಯಾರು? ದರ್ಶನ್ ಭೇಟಿ ಮಾಡಲೇ ಬೇಕು ಅಂತ ಹಠ ಹಿಡಿದು ದಾಸನನ್ನ ನೋಡಿ ಖುಷಿ ಪಟ್ಟಿದ್ದು ಯಾಕೆ? ಇವೆಲ್ಲಾ ವಿಚಾರಕ್ಕಿಂತಲೂ ಈ ಪುಟ್ಟ ಅಭಿಮಾನಿ ಅನುಭವಿಸುತ್ತಿರುವ ಕಷ್ಟವಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ದರ್ಶನ್ ಭೇಟಿ ಮಾಡಿದ ಅಪರೂಪದ ಅಭಿಮಾನಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಯಜಮಾನ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಶುರುವಾಗಿದ್ದು ಶೂಟಿಂಗ್ ಸಮಯದಲ್ಲಿ ಒಬ್ಬ ಅಭಿಮಾನಿಯನ್ನ ಭೇಟಿ ಮಾಡಿದ್ದಾರೆ. ಆಕೆಯ ಹೆಸರು ಪೂರ್ವಿಕಾ

ಪೂರ್ವಿಕಾ ಎಂಬ ಅಭಿಮಾನಿ

ದರ್ಶನ್ ಭೇಟಿ ಮಾಡಿರುವ ಪೂರ್ವಿಕಾ ಎಂಬ ಬಾಲಕಿ ಸಾಕಷ್ಟು ದಿನಗಳಿಂದ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದಾರೆ. ಅಷ್ಟೇ ಅಲ್ಲದೆ ಹೊಟ್ಟೆಯಲ್ಲಿ ಕೆಟ್ಟ ನೀರು ತುಂಬಿಕೊಂಡು ನೋವು ಅನುಭವಿಸುತ್ತಿದ್ದಾಳೆ .

ಅಭಿಮಾನಿ ಕಂಡು ಖುಷಿಯಾದ ದರ್ಶನ್

11 ವರ್ಷದ ಪೂರ್ವಿಕಾ ಸುಮಾರು 5-6 ವರ್ಷದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ. ಮಂಡ್ಯ ನಿವಾಸಿ ಆಗಿರುವ ಪೂರ್ವಿಕಾ ಸದ್ಯ ಚಿಕಿತ್ಸೆಗಾಗಿ ಚಿಕ್ಕಮಗಳೂರಿನಲ್ಲೇ ಇದ್ದಾರೆ.

ಅಭಿಮಾನಿಯ ಆರೋಗ್ಯ ವಿಚಾರಿಸಿದ ದರ್ಶನ್

ದರ್ಶನ್ ಪೂರ್ವಿಕಾ ಹಾಗೂ ಅವರ ತಾಯಿಯನ್ನು ಭೇಟಿ ಮಾಡಿ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ. ಕೆಲಸ ಸಮಯ ಅವರ ಜೊತೆಯಲ್ಲಿದ್ದು ಫೋಟೋ ತೆಗೆಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಇಷ್ಟೆಲ್ಲಾ ನೋವು ಅನುಭವಿಸುತ್ತಿರುವ ಅಭಿಮಾನಿಯನ್ನು ನೋಡಿ ಅವರಿಗೆ ಧೈರ್ಯ ಹೇಳಿದ್ದಾರೆ.

'ಡಿ ಬ್ರದರ್ಸ್' ಪ್ರೀಮಿಯರ್ ಲೀಗ್ ನ ಉದ್ದೇಶವೇನು?

English summary
Kannada actor Challenging star Darshan has meet his fan Poorvikha in Chikkamangalore, Poorvika is suffering from a heart related diseases and has been a fan of Darshan since five years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X