»   » 'ಕರ್ಣ' ಅರ್ಜುನ್ ಸರ್ಜಾ ಬಗ್ಗೆ 'ದುರ್ಯೋಧನ' ದರ್ಶನ್ ಹೀಗೆ ಹೇಳಿದ್ರು!

'ಕರ್ಣ' ಅರ್ಜುನ್ ಸರ್ಜಾ ಬಗ್ಗೆ 'ದುರ್ಯೋಧನ' ದರ್ಶನ್ ಹೀಗೆ ಹೇಳಿದ್ರು!

Posted By:
Subscribe to Filmibeat Kannada

ನಟ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಸಮಾಗಮವಾಗಿದೆ. ಈ ಪೈಕಿ ನಟ ಅರ್ಜುನ್ ಸರ್ಜಾ ಕೂಡ ಒಬ್ಬರು. ಚಿತ್ರದಲ್ಲಿ 'ದುರ್ಯೋಧನ' ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡರೆ, ಕರ್ಣನ ಪಾತ್ರದಲ್ಲಿ ಅರ್ಜುನ್ ಸರ್ಜಾ ಮಿಂಚಲಿದ್ದಾರೆ.

15 ದಿನಗಳ ಶೂಟಿಂಗ್ ಮುಗಿಸಿದ 'ಕುರುಕ್ಷೇತ್ರ': ವಿಶೇಷತೆಗಳೇನು?

ಈಗ ದುರ್ಯೋಧನ ಮತ್ತು ಮತ್ತು ಕರ್ಣ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ವೇಳೆ ದರ್ಶನ್ ಮತ್ತು ಅರ್ಜುನ್ ಸರ್ಜಾ ಫೋಟೋ ತೆಗೆದುಕೊಂಡಿದ್ದು, ದರ್ಶನ್ ಈ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದಾರೆ.

Darshan has posted about Arjun Sarja in his facebook account

ಜೊತೆಗೆ ದರ್ಶನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅರ್ಜುನ್ ಸರ್ಜಾ ಬಗ್ಗೆ ಬರೆದುಕೊಂಡಿದ್ದಾರೆ. ''ನಿಮ್ಮ ಜೊತೆ ಸಿನಿಮಾ ಮಾಡುವುದು ನನಗೆ ಖುಷಿ ನೀಡಿದೆ. ಒಬ್ಬ ಖಳನಾಯಕನ ಮಗನಾಗಿ ನಾಯಕನಾಗುವ ದಿಟ್ಟ ಹೆಚ್ಚೆ ಇಟ್ಟವರಲ್ಲಿ ನೀವು ಮೊದಲಿಗರು' ಎಂದು ಅರ್ಜುನ್ ಸರ್ಜಾ ಅವರನ್ನು ದರ್ಶನ್ ಬಣ್ಣಿಸಿದ್ದಾರೆ.

Challenging Star Darshan Is Unhappy With Kurukshetra Movie | Filmibeat Kannada

ಸದ್ಯ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸತತವಾಗಿ ನಡೆಯುತ್ತಿದೆ. ಮೊದಲ 15 ದಿನಗಳ ಕಾಲದ ಶೂಟಿಂಗ್ ಈಗ ಮುಗಿದಿದೆ.

English summary
Actor Challenging Star Darshan has posted about Arjun Sarja in his facebook account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada