ವಿರೋಧಿಗಳಿಗೆ 'ಮಂಡ್ಯ ವೇದಿಕೆ'ಯಲ್ಲಿ ಸವಾಲ್ ಹಾಕಿದ ದರ್ಶನ್
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದ್ಯಾವಾಗ ಸುಮಲತಾ ಅಂಬರೀಶ್ ಹಿಂದೆ ಇದ್ದಾರೆ ಎನ್ನುವುದು ಖಾತ್ರಿಯಾಯಿತೋ, ಅಲ್ಲಿಗೆ ಡಿ ಬಾಸ್ ಕೂಡ ರಾಜಕೀಯದಲ್ಲಿ ಕೆಲವರು ವಿರೋಧವನ್ನ ಕಟ್ಟಿಕೊಳ್ಳಬೇಕಾಯಿತು. ಅದರ ಪರಿಣಾಮ ದರ್ಶನ್ ಅವರ ಕೆಲವು ವೈಯಕ್ತಿಕ ವಿಷ್ಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಣುಕುತ್ತಿದ್ದಾರೆ. ಅಂತವರಿಗೆ ದರ್ಶನ್ ಉತ್ತರ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿದ ಸುಮಲತಾ ಅಂಬರೀಶ್ ಸಿಲ್ವರ್ ಜ್ಯುಬ್ಲಿ ಪಾರ್ಕ್ ನಲ್ಲಿ ಬಹಿರಂಗ ಸಭೆ ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ದರ್ಶನ್, ಯಶ್ ಕೂಡ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ದರ್ಶನ್ ತಮ್ಮ ಮೇಲೆ ಮಾತಿನ ದಾಳಿ ಮಾಡುತ್ತಿರುವವರಿಗೆ ಬಹಿರಂಗವಾಗಿ ತಿರುಗೇಟು ನೀಡಿದ್ದಾರೆ.
ಹೈದ್ರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ದಾಸ ದರ್ಶನ್, ಸುಮಲತಾ ಅವರನ್ನ ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ಕಾರಣ, ಶೂಟಿಂಗ್ ನಿಲ್ಲಿಸಿ ಮಂಡ್ಯಕ್ಕೆ ಬಂದಿದ್ದರು. ಹಾಗಿದ್ರೆ, ದರ್ಶನ್ ಭಾಷಣ ಹೇಗಿತ್ತು? ಮುಂದೆ ಓದಿ.....

ನಾನು ನೊಂದುಕೊಳ್ಳುವುದಿಲ್ಲ
''ಎರಡು ದಿನದಿಂದ ನಾವು ನೋಡುತ್ತಿದ್ದೇವೆ, ನಮ್ಮ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ. ನಮ್ಮ ಬಗ್ಗೆ ಏನೇ ಮಾತಾಡಿ, ಬೇಜಾರು ಮಾಡಿಕೊಳ್ಳಲ್ಲ, ಕೋಪ ಮಾಡಿಕೊಳ್ಳಲ್ಲ, ನೊಂದುಕೊಳ್ಳುವುದಿಲ್ಲ. ಬಹಳ ಹೆಮ್ಮೆಯಿಂದ ತೆಗೆದುಕೊಳ್ಳುತ್ತೇವೆ'' ಎಂದು ಕೂಲ್ ಆಗಿ ಹೇಳುವ ಮೂಲಕ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಮಾಡಿದ್ದಕ್ಕೆ ಅನುಭವಿಸಿ ಆಗಿದೆ
''ಮಾಡಿದ್ದ ಕೆಲಸ.....ತಪ್ಪೇನೂ ಇಲ್ಲ. ಎಲ್ಲಾ ಮಾಡಿ ಆಯ್ತು, ಅದಕ್ಕೆ ಅನುಭವಿಸಿ ಆಯ್ತು. ಇಲ್ಲಿ ಇಳಿದಿದ್ದಕ್ಕೆ ಹಳೇ ವಿಷ್ಯಗಳು ಓಪನ್ ಆಗುತ್ತೆ ಅಂದ್ರೆ ಬಹಳ ಸಂತೋಷ ಆಗುತ್ತೆ. ಖುಷಿಯಾಗುತ್ತೆ, ತುಂಬಾ ಪ್ರೀತಿನೂ ಬರುತ್ತೆ. ಆದ್ರೂ ನಾವು ಯಾರಿಗೂ ಏನೂ ಹೇಳಲ್ಲ'' ಎಂದು ತನ್ನ ಮೇಲೆ ವೈಯಕ್ತಿಕ ದಾಳಿ ಮಾಡೋರಿಗೆ ಪ್ರತಿಕ್ರಿಯಿಸಿದ್ದಾರೆ.

23ನೇ ತಾರೀಖು ಉತ್ತರ ಕೊಡ್ಬೇಕು
''ಈಗ ಏನೇನೂ ಹೇಳ್ತಿದ್ದಾರೋ ಅದಕ್ಕೆ ಈಗ ಮಾತಾಡಲ್ಲ. ಎಲ್ಲದಕ್ಕೂ 23ನೇ ತಾರೀಖು ನಿರ್ಧಾರವಾಗುತ್ತೆ ಅಲ್ವಾ, ಆಗ ಅವರಿಗೆಲ್ಲ ಉತ್ತರ ಕೊಡಬೇಕು. ನಿಮ್ಮ ಪ್ರೀತಿ, ಬೆಂಬಲ, ಆಶೀರ್ವಾದ ಅಮ್ಮನ (ಸುಮಲತಾ) ಜೊತೆ ಇರಲಿ. ನಾನು ಇಷ್ಟೇ ಕೇಳಿಕೊಳ್ಳುವುದು'' ಎಂದು ದಾಸ ವಿನಂತಿಸಿಕೊಂಡಿದ್ದಾರೆ.

ನಮ್ಮ ಪರೇಡ್ ಶುರು
''ಮೈಯಲ್ಲಿರುವ ರಕ್ತವನ್ನ ತೆಗೆದು ನಿಮ್ಮ ಕಾಲುಗಳನ್ನು ತೊಳೆದರೂ ಅದು ಕಡಿಮೆಯೇ. ಇಷ್ಟು ಉರಿ ಬಿಸಿನಲ್ಲೂ ನಮ್ಮ ಜೊತೆ ಹೆಜ್ಜೆ ಹಾಕಿದ್ದೀರಾ. ನಾವು ಯಾರಿಗೂ ತಲಾ ಇಷ್ಟಿಷ್ಟು ಅಂತ ಕೊಟ್ಟಿಲ್ಲ. ಅಪ್ಪಾಜಿ ಮೇಲಿನ ಪ್ರೀತಿಗಾಗಿ ನೀವು ಇಲ್ಲಿಗೆ ಬಂದಿದ್ದೀರಾ. ಇಂದಿನಿಂದ 18ನೇ ತಾರೀಖಿನವರೆಗೂ ಪರೇಡ್ ಶುರು ಮಾಡೋಣ. ಆಗಿದ್ದಾಗಲಿ ಒಂದು ಸಲ ನೋಡಿಬಿಡೋಣ'' ಎಂದು ನಟ ದರ್ಶನ್ ಸವಾಲ್ ಹಾಕಿದ್ದಾರೆ. ಅಲ್ಲಿಗೆ ಉಳಿದ ಎಲ್ಲ ದಿನವೂ ಮಂಡ್ಯದಲ್ಲಿ ಸುಮಲತಾ ಅವರ ಪರವಾಗಿ ನಾವು ಪ್ರಚಾರ ಮಾಡ್ತೀವಿ ಎಂದು ಹೇಳಿದ್ರು.


Click it and Unblock the Notifications











