'ನಾನೊಬ್ಬ ಕಾಡು ಮನುಷ್ಯ' ಜಾತಿ ಚರ್ಚೆಗೆ ಡಿ-ಬಾಸ್ ಖಡಕ್ ಉತ್ತರ

ಮಂಡ್ಯ ಸಂಸದ ಶಿವರಾಮೇಗೌಡ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜಾತಿ ಬಗ್ಗೆ ಪ್ರಶ್ನೆ ಮಾಡಿದ್ದರು. ಸುಮಲತಾ ಅವರು ನಾಯ್ಡು ಕುಟುಂಬದವರು, ಮಂಡ್ಯ ಗೌಡ್ತಿ ಹೇಗಾಗ್ತಾರೆ ಎಂದು ಟೀಕಿಸಿದ್ದರು.

ಅದೇ ರೀತಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್ ಕೂಡ ನಾಯ್ಡು. ಮಂಡ್ಯವನ್ನ ನಾಯ್ಡು ಮಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದರು. ಶಿವರಾಮೇಗೌಡರ ಈ ಜಾತಿ ಹೇಳಿಕೆಗೆ ನಟ ದರ್ಶನ್ ತಿರುಗೇಟು ನೀಡಿದ್ದಾರೆ.

'ನಾನು ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ...ಅದಕ್ಕೂ ಮಿಗಿಲಾಗಿ ನಾನು ಕಾಡು ಮನುಷ್ಯ. ನಾನು ನಾಯ್ಡು ಹೌದು, ಅದ್ರಲ್ಲಿ ತಪ್ಪೇನಿದೆ? ಎಂದು ಮರುಪ್ರಶ್ನಿಸುವ ಮೂಲಕ ಶಿವರಾಮೇಗೌಡ ಅವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.

 Darshan has react on shivarame gowda statement

ಇನ್ನು ದರ್ಶನ್ ಅವರು ಪ್ರಚಾರ ಮಾಡಿದ ಕಡೆ ವೋಟ್ ಬರಲ್ಲ ಎಂದು ಜಿಟಿ ದೇವೇಗೌಡ ಅವರು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಮಾತನಾಡಿದ ದರ್ಶನ್, ''ಪರವಾಗಿಲ್ಲ, 100 ವೋಟ್ ಇಲ್ಲ ಅಂದ್ರೂ 50 ವೋಟ್ ಬರಲಿ ಖುಷಿನೇ'' ಎಂದು ಕೂಲ್ ರಿಯಾಕ್ಟ್ ಮಾಡಿದ್ರು.

ಒಟ್ನಲ್ಲಿ, ಚುನಾವಣ ಪ್ರಚಾರಕ್ಕೆ ಬಂದ ಆರಂಭದ ದಿನದಿಂದಲೂ ದರ್ಶನ್ ಅವರು ಹೇಳುತ್ತಿರುವುದು ಒಂದೇ ಮಾತು. 'ಯಾರೇ ಏನೂ ಹೇಳಿದ್ರು ನಾನು ಬೇಜಾರು ಮಾಡಿಕೊಳ್ಳಲ್ಲ, ನೊಂದುಕೊಳ್ಳಲ್ಲ, ಕೋಪ ಮಾಡಿಕೊಳ್ಳಲ್ಲ' ಅಂತ. ಹಾಗಾಗಿಯೇ ಸುಮಲತಾ ಅವರ ಪರ ವೋಟ್ ಹಾಕಿ ಎಂದು ಮನವಿ ಮಾಡುತ್ತಿದ್ದಾರೇ ಹೊರತು ಬೇರೆ ವಿಷ್ಯಗಳ ಬಗ್ಗೆ ಪ್ರಸ್ತಾಪ ಮಾಡ್ತಿಲ್ಲ.

More from Filmibeat

English summary
Kannada actor, challenging star darshan has react on Mp shivarame gowda statement. shivarame gowda questioned about sumalatha and darshan caste.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X