For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ವಿಜಯ್ ಸೇತುಪತಿಗೆ ಟಾಂಗ್ ಕೊಟ್ರಾ ಚಾಲೆಂಜಿಂಗ್ ಸ್ಟಾರ್ ದರ್ಶನ್?

  |
  ನಮ್ಮ ಕಲಾವಿದನ ಮುಂದೆ ಅವನು ಏನು ಅಲ್ಲ ಎಂದ ಡಿ ಬಾಸ್ | Darshan | Sanchari vijay | Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾನು ಬೆಳೆಯುವ ಜೊತೆಗೆ ತನ್ನ ಜೊತೆಗಾರರನ್ನು ಬೆಳೆಸುವ ದೊಡ್ಡ ಗುಣ ಹೊಂದಿರುವ ಸ್ಯಾಂಡಲ್ ವುಡ್ ನ ದೊಡ್ಡ ನಟ. ದೊಡ್ಡ ಕನಸನ್ನು ಹೊತ್ತು ಚಿತ್ರರಂಗಕ್ಕೆ ಬರುವ ಹೊಸಬರಿಗೆ ಸಾಥ್ ನೀಡಿ ಅವರ ಬೆನ್ನು ತಟ್ಟುವ ಯಜಮಾನ, ಇತ್ತೀಚಿಗೆ ಗೆಳೆಯ ಪ್ರಜ್ವಲ್ ದೇವರಾಜ್ ಹೊಸ ಸಿನಿಮಾದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದರು.

  ದರ್ಶನ್ ಹೇಳಿದ ಮಾತು ಕೇಳಿ ಭಾವುಕರಾದ ಸಂಚಾರಿ ವಿಜಯ್ದರ್ಶನ್ ಹೇಳಿದ ಮಾತು ಕೇಳಿ ಭಾವುಕರಾದ ಸಂಚಾರಿ ವಿಜಯ್

  ಈ ಸಮಯದಲ್ಲಿ ಕನ್ನಡದ ಅದ್ಭುತ ಕಲಾವಿದರ ಬಗ್ಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ. ಪರಭಾಷೆಯ ಕಲಾವಿದರನ್ನು ಬೆಂಬಲಿಸಿ, ಸಾಥ್ ನೀಡಿ, ಬೆನ್ನುತಟ್ಟುವ ಕನ್ನಡಿಗರು ನಮ್ಮ ಕಲಾವಿದರನ್ನು ಬೆಂಬಲಿಸದೆ ಇರುವುದು ಬೇಸರ ವಿಚಾರ ಎಂದಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರನ್ನು ಉದಾಹರಣೆಯಾಗಿ ಇಟ್ಟುಕೊಂಡು ಮಾತನಾಡಿದ ದರ್ಶನ್, ಸಂಚಾರಿ ವಿಜಯ್ ಗಿಂತ ತಮಿಳಿನ 'ಆ' ನಟ ದೊಡ್ಡ ಕಲಾವಿದನೇನಲ್ಲ ಎಂದು ಹೇಳಿದ್ದಾರೆ. ಹಾಗಾದರೆ ದರ್ಶನ್ ಹೇಳಿದ ಆ ನಟ ಯಾರು ಎನ್ನುವ ಚರ್ಚೆ ಶುರುವಾಗಿದೆ.

  ಸಂಚಾರಿ ವಿಜಯ್ ಬಗ್ಗೆ ದರ್ಶನ್ ಹೇಳಿದ್ದೇನು?

  ಸಂಚಾರಿ ವಿಜಯ್ ಬಗ್ಗೆ ದರ್ಶನ್ ಹೇಳಿದ್ದೇನು?

  "ಸಂಚಾರಿ ವಿಜಯ್ ಬಹಳ ದೊಡ್ಡ ನಟ ಅಂತ ಹೇಳುತ್ತೀನಿ. ನಾನು ಅವನಲ್ಲಿ ಅವಳನ್ನು ನೋಡಿದೆ. ನಾನು ಫಿದಾ ಆದೆ ಅವರ ಮೇಲೆ. ಇದೆ ಒಳ್ಳೆಯ ಸಿನಿಮಾ ಪರಭಾಷೆಯಲ್ಲಿ ಬಂದಿದ್ರೆ ಎಲ್ಲರು ಕನ್ನಡದವರು ಸೇರಿದಂತೆ ಚಪ್ಪಾಳೆ ತಟ್ಟಿ, ಬೆನ್ನುತಟ್ಟಿ, ದುಡ್ಡು ಕೊಟ್ಟು ಕಳುಹಿಸುತ್ತೇವೆ. ನಿಜಕ್ಕು ಇದು ಅಸಹ್ಯ ಎನಿಸುತ್ತೆ. ನಾವು ಹೆಮ್ಮೆಯಿಂದ ಕನ್ನಡದವರು ಅಂತ ಹೇಳುತ್ತೇವೆ. ಆದರೆ ಏನು ಮಾಡಲು ಸಾಧ್ಯವಿಲ್ಲ. ಈ ಕಡೆ, ಆಡೆಯವರನ್ನು ಚೆನ್ನಾಗಿ ನೋಡಿಕೊಂಡು ನಮ್ಮವರನ್ನೇ ನಾವು ಬಿಡುತ್ತೇವೆ" ಎಂದು ಹೇಳಿದ್ದಾರೆ.

  ತಮಿಳು ನಟನಿಗೆ ದರ್ಶನ್ ಟಾಂಗ್

  ತಮಿಳು ನಟನಿಗೆ ದರ್ಶನ್ ಟಾಂಗ್

  ಜಂಟಲ್ ಮನ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ದರ್ಶನ್, ಸಂಚಾರಿ ವಿಜಯ್ ಬಗ್ಗೆ ಮಾತನಾಡುತ್ತ ತಮಿಳಿನ ಸ್ಟಾರ್ ನಟನಿಗೆ ಟಾಂಗ್ ಕೊಟ್ಟಿದ್ದಾರೆ. "ಯಾರೋ ಒಬ್ಬ ಕಲಾವಿದ, ತಮಿಳಿನ ಕಲಾವಿದ, ನಾನಿಲ್ಲಿ ಹೆಸರು ಹೇಳಲ್ಲ. ನನಗೆ ಗೊತ್ತಿರುವ ಮಟ್ಟಿಗೆ ಸಂಚಾರಿ ವಿಜಯ್ ಗಿಂತ ಆತ ಏನು ದೊಡ್ಡ ಕಲಾವಿದನಲ್ಲ. ಆದರೆ ಹೆಸರು ಮಾತ್ರ ಇಷ್ಟು ಉದ್ದ ಇಷ್ಟು ದಪ್ಪ ಹೇಳುತ್ತಾರೆ. ನಮ್ಮವರನ್ನು ನಾವು ಬೆನ್ನು ತಟ್ಟೋಣ" ಎಂದು ಹೇಳಿದ್ದಾರೆ.

  'ಇದು ನಿಜವಾಗಲೂ ಅಸಹ್ಯ': ಜಂಟಲ್ ಮ್ಯಾನ್ ಕಾರ್ಯಕ್ರಮದಲ್ಲಿ ಡಿ-ಬಾಸ್ ಬೇಸರ'ಇದು ನಿಜವಾಗಲೂ ಅಸಹ್ಯ': ಜಂಟಲ್ ಮ್ಯಾನ್ ಕಾರ್ಯಕ್ರಮದಲ್ಲಿ ಡಿ-ಬಾಸ್ ಬೇಸರ

  ದರ್ಶನ್ ಟಾಂಗ್ ಕೊಟ್ಟಿದ್ದು ವಿಜಯ್ ಸೇತುಪತಿಗಾ?

  ದರ್ಶನ್ ಟಾಂಗ್ ಕೊಟ್ಟಿದ್ದು ವಿಜಯ್ ಸೇತುಪತಿಗಾ?

  ಸಂಚಾರಿ ವಿಜಯ್ ಕುರಿತು ಮಾತನಾಡುವ ವೇಳೆ ದರ್ಶನ್ ತಮಿಳು ನಟನನ್ನು ಹೋಲಿಸಿ ಮಾತನಾಡಿದ್ದಾರೆ. ಆದರೆ, ಆ ನಟ ಯಾರೆಂದು ಹೇಳಲಿಲ್ಲ. ಆದರೂ ಡಿ ಬಾಸ್ ಹೇಳಿದ್ದನ್ನು ನೋಡಿದ್ರೆ ಪರೋಕ್ಷವಾಗಿ ವಿಜಯ್ ಸೇತುಪತಿ ಕಡೆ ಬೆರಳು ಮಾಡಿದಂತಿದೆ. ಹೆಸರು ಹೇಳದೆ ಸೇತುಪತಿಗೆ ದರ್ಶನ್ ಟಾಂಗ್ ಕೊಟ್ಟರು ಎಂಬ ಮಾತು ಈಗ ಚರ್ಚೆಯಾಗುತ್ತಿದೆ.

  ಸೂಪರ್ ಡಿಲೆಕ್ಸ್ ಸದ್ದು

  ಸೂಪರ್ ಡಿಲೆಕ್ಸ್ ಸದ್ದು

  'ಸೂಪರ್ ಡಿಲೆಕ್ಸ್' ಚಿತ್ರದಲ್ಲಿ ವಿಜಯ್ ಸೇತುಪತಿ ಮಂಗಳಮುಖಿ ಪಾತ್ರ ಮಾಡಿದ್ದರು. ಸೇತುಪತಿ ನಟನೆ ಬಗ್ಗೆ ಸೌತ್ ಇಂಡಸ್ಟ್ರಿ ಪೂರ್ತಿ ಟಾಕ್ ಆಯ್ತು. ಕರ್ನಾಟಕದಲ್ಲೂ ಈ ಸಿನಿಮಾ ಸದ್ದು ಮಾಡಿತ್ತು. ಸೌತ್ ಮಾತ್ರವಲ್ಲ ಆ ಕಡೆ ಬಾಲಿವುಡ್ನಲ್ಲೂ ಸೇತುಪತಿ ಪರ್ಫಾಮೆನ್ಸ್ ನೋಡಿ ಶಾರೂಖ್ ಖಾನ್, ಅಮೀರ್ ಖಾನ್ ಹೊಗಳಿದ್ದರು. ಬಹುಶಃ ದರ್ಶನ್ ಅವರು ಹೇಳಿದ್ದು ಇದೇ ನಟನ ವಿಚಾರ ಇರಬಹುದು.

  ಮೋಹನ್ ಲಾಲ್ ಭೇಟಿ ಮಾಡಿದ ನಟ ಸಂಚಾರಿ ವಿಜಯ್ಮೋಹನ್ ಲಾಲ್ ಭೇಟಿ ಮಾಡಿದ ನಟ ಸಂಚಾರಿ ವಿಜಯ್

  ದರ್ಶನ್ ವಾದವೇನು?

  ದರ್ಶನ್ ವಾದವೇನು?

  'ನಾನು ಅವನಲ್ಲ ಅವಳು' ಚಿತ್ರದಲ್ಲಿ ಸಂಚಾರಿ ವಿಜಯ್ ಅದ್ಭುತ ನಟನೆ ಮಾಡಿದ್ದರು. ರಾಷ್ಟ್ರ ಪ್ರಶಸ್ತಿ ಬಂತು ಎನ್ನುವುದು ಬಿಟ್ಟರೆ ವಿಜಯ್ ನಿಜವಾದ ಪ್ರತಿಭೆಗೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎನ್ನುವುದು ದರ್ಶನ್ ಅವರ ವಾದವಾಗಿದೆ.

  English summary
  Challenging star Darshan has said that Sanchari Vijay is a better artist than that Tamil actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X