ಕ್ಯಾನ್ಸರ್ ಪೀಡಿತ ರೋಗಿಯ ಕೊನೆ ಆಸೆ ಪೂರೈಸಿದ ಡಿ ಬಾಸ್
Recommended Video

ಚಾಲೆಂಜಿಂಗ್ ಸ್ಟಾರ್ ಅವರ ಅಪ್ಪಟ ಅಭಿಮಾನಿ ರೇವಂತ್ ತನ್ನ ಜೀವನದ ಕೊನೆ ದಿನಗಳನ್ನ ಎಣಿಸುತ್ತಿದ್ದಾರೆ. ಸುಮಾರು ದಿನಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ರೇವಂತ್ ಸಾಯುವ ಮುನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಭೇಟಿ ಮಾಡಬೇಕು ಎನ್ನುವ ಆಸೆಯನ್ನ ವ್ಯಕ್ತ ಪಡಿಸಿದ್ದರು.
ಶಿವಮೊಗ್ಗ ಮೂಲದವರಾಗಿರುವ ರೇವಂತ್ ವಿಚಾರ ಅಭಿಮಾನಿಗಳಿಂದ ಚಾಲೆಂಜಿಂಗ್ ಸ್ಟಾರ್ ಗೆ ತಿಳಿದಿತ್ತು. ಅಭಿಮಾನಿಯ ಈ ಸ್ಥಿತಿಯನ್ನ ಕಂಡು ಮರುಗಿದ ದರ್ಶನ್ ರೇವಂತ್ ಅವರ ಕೊನೆಯ ಆಸೆಯನ್ನ ಪೂರ್ತಿ ಮಾಡಲು ಮುಂದಾದರು.
ರೇವಂತ್ ಆಸೆಯನ್ನ ದರ್ಶನ್ ಪೂರ್ತಿ ಮಾಡಿದ ರೀತಿ ಹೇಗೆ? ಜೀವನದ ಕೊನೆಯ ದಿನಗಳನ್ನು ಆಸ್ಪತ್ರೆಯ ಹಾಸಿಗೆ ಮೇಲೆ ಕಳೆಯುತ್ತಿರುವ ಅಭಿಮಾನಿಗೆ ದಾಸ ಹೇಳಿದ ಮಾತುಗಳೇನು? ಈ ಎಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಅಭಿಮಾನಿಯ ಕೊನೆ ಆಸೆ ಪೂರೈಸಿದ ಡಿ ಬಾಸ್
ಶಿವಮೊಗ್ಗ ಮೂಲದ ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ರೇವಂತ್ ಅವರ ಆಸೆಯನ್ನ ದರ್ಶನ್ ಪೂರೈಸಿದ್ದಾರೆ. ಸಾಯುವ ಮುನ್ನ ದಾಸನನ್ನು ಭೇಟಿ ಮಾಡಬೇಕು ಎನ್ನುವುದು ರೇವಂತ್ ಆಸೆ ಆಗಿತ್ತು. ಕೆಲಸದ ಬ್ಯುಸಿ ಆಗಿರುವ ಕಾರಣ ದರ್ಶನ್ ವಿಡಿಯೋ ಕಾಲ್ ಮಾಡಿ ರೇವಂತ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.

ಚಿಕಿತ್ಸೆ ತೆಗೆದುಕೊಳ್ಳುವಂತೆ ಹೇಳಿದ ಡಿ ಬಾಸ್
ರೇವಂತ್ ಅವರ ಬಳಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ದರ್ಶನ್ ಸರಿಯಾದ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರೆ. ವೈದ್ಯರು ಹೇಳಿದಂತೆ ಔಷಧಿಗಳನ್ನು ತಪ್ಪದೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

ತಂದೆ-ತಾಯಿ ಬಳಿಯೂ ಮಾತನಾಡಿದ ದರ್ಶನ್
ರೇವಂತ್ ಹಾಗೂ ಅವರ ಪೋಷಕರ ಬಳಿ ಮಾತನಾಡಿದ ದರ್ಶನ್ ಮಗನ ವಿಚಾರ ಪ್ರಸ್ತಾಪ ಮಾಡಿ ಧೈರ್ಯ ತುಂಬಿದ್ದಾರೆ. ಅಭಿಮಾನಿಯ ಮೇಲಿನ ಕಾಳಜಿ ಕಂಡು ರೇವಂತ್ ತಂದು ತಾಯಿಗೆ ಮಾತೇ ಬರದಂತಾಗಿದೆ.

ಭೇಟಿ ಮಾಡುವುದಾಗಿ ತಿಳಿಸಿದ ದರ್ಶನ್
ವಿಡಿಯೋ ಕಾಲ್ ನಲ್ಲಿ ಮಾತನಾಡಿರುವ ದರ್ಶನ್ ಬಿಡುವು ಮಾಡಿಕೊಂಡು ನೇರವಾಗಿ ಬಂದು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕೊನೆಯ ಆಸೆಯಂತೆ ದರ್ಶನ್ ಅವರ ಮುಖ ನೋಡಿ ಮಾತನಾಡಿರುವ ಖುಷಿಯಲ್ಲಿದ್ದಾರೆ ರೇವಂತ್.


Click it and Unblock the Notifications











