For Quick Alerts
  ALLOW NOTIFICATIONS  
  For Daily Alerts

  ನಾಗರಹೊಳೆ ಅಭಯಾರಣ್ಯದಲ್ಲಿ ಡಿ ಬಾಸ್ ಕ್ಲಿಕ್ಕಿಸಿದ ಫೋಟೋಗಳು ಇವು !

  By Pavithra
  |
  ಕಾಡಲ್ಲಿ, ರಿಲ್ಯಾಕ್ಸ್ ಮೂಡಲ್ಲಿ ಡಿ ಬಾಸ್...! | Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಹಿನ್ನಲೆಯಲ್ಲಿ ಇತ್ತೀಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಬಿನಿ ಹಿನ್ನಿರಿನ ಅರಣ್ಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಭೇಟಿ ಕೊಟ್ಟಿದ್ದರು.

  ಪ್ರಾಣಿ ಪ್ರೇಮಿ ಆಗಿರುವ ಡಿ ಬಾಸ್ ಎರಡು ಮೂರು ದಿನ ಅರಣ್ಯ ಸಂಚಾರ ಮಾಡಿ ಅಲ್ಲಿರುವ ಕೆಲಸಗಾರರನ್ನು, ಮಾವುತರನ್ನು ಭೇಟಿ ಮಾಡಿದ್ದರು ಎನ್ನುವ ವಿಚಾರ ಕೇಳಿ ಬಂದಿತ್ತು. ಆದರೆ ದರ್ಶನ್ ಕ್ಯಾಮೆರಾ ಹಿಡಿದು ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳ ಫೋಟೋ ಸೆರೆ ಹಿಡಿದಿದ್ದಾರೆ ಎನ್ನುವ ವಿಷ್ಯ ಮಾತ್ರ ಹೊಸತು.

  ಹೌದು ಚಾಲೆಂಜಿಂಗ್ ಸ್ಟಾರ್ ಕ್ಯಾಮೆರಾ ಹಿಡಿದು ಪ್ರಾಣಿ, ಪಕ್ಷಿಗಳ ಫೋಟೋ ಸೆರೆ ಹಿಡಿಯುತ್ತಾರೆ ಎನ್ನುವ ವಿಚಾರ ಬಹುತೇಕ ಜನರಿಗೆ ಗೊತ್ತೆ ಇಲ್ಲ. ಆದರೆ ಡಿ ಕಂಪನಿ ಕಡೆಯಿಂದ ಚಾಲೆಂಜಿಂಗ್ ಸ್ಟಾರ್ ಕಾಡಿನಲ್ಲಿ ಏನೆಲ್ಲಾ ಮಾಡಿದ್ರು? ಹೇಗಿತ್ತು ಕಾಡಿನಲ್ಲಿದ್ದ ಮೂರು ದಿನಗಳು ಎನ್ನುವುದರ ಸಂಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಅದರ ಜೊತೆಯಲ್ಲಿ ದರ್ಶನ್ ಸೆರೆ ಹಿಡಿದಿರುವ ಫೋಟೋಗಳು ಇಲ್ಲಿವೆ. ಮುಂದೆ ಓದಿ

  ದರ್ಶನ್ ಕ್ಯಾಮೆರಾ ಕೈಚಳಕ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗಷ್ಟೆ ಕಬಿನಿ ಹಿನ್ನಿರಿನ ಅರಣ್ಯಕ್ಕೆ ಸ್ನೇಹಿತರ ಜೊತೆ ಭೇಟಿ ನೀಡಿದ್ದರು. ಆ ವೇಳೆಯಲ್ಲಿ ದರ್ಶನ್ ಸಾಕಷ್ಟು ಪ್ರಾಣಿ-ಪಕ್ಷಿಗಳ ಫೋಟೋಗಳನ್ನು ತೆಗೆದಿದ್ದಾರೆ.

  ದರ್ಶನ್ ಕ್ಯಾಮೆರಾದಲ್ಲಿ ಪ್ರಾಣಿಗಳ ಚಿತ್ತಾರ

  ದರ್ಶನ್ ಕ್ಯಾಮೆರಾದಲ್ಲಿ ಪ್ರಾಣಿಗಳ ಚಿತ್ತಾರ

  ನಾಗರಹೊಳೆ ಕಾಡಿನಲ್ಲಿರುವ ನವಿಲು, ಗರುಡ, ಆನೆ, ಜಿಂಕೆ, ಹುಲಿ, ಚಿರತೆ ಹೀಗೆ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ದರ್ಶನ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆ ಫೋಟೋಗಳು ಮತ್ತು ಡಿ ಕಂಪನಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿದೆ.

  ಆನೆ ಕಂಡ ಸಂತಸಗೊಂಡ ಡಿ ಬಾಸ್

  ಆನೆ ಕಂಡ ಸಂತಸಗೊಂಡ ಡಿ ಬಾಸ್

  ಕಾಡಿನಲ್ಲಿ ಆನೆಗಳನ್ನು ಪಳಗಿಸುವ ಮಾವುತರನ್ನ ದರ್ಶನ್ ಭೇಟಿ ಮಾಡಿದ್ದಾರೆ. ಆನೆಯನ್ನು ಕಂಡು ಬೆಲ್ಲ ತಿನ್ನಿಸಿ ಖುಷಿ ಪಟ್ಟಿದ್ದಾರೆ. ಜೊತೆಗೆ ಸಾಕಷ್ಟು ಸಮಯ ಅದರ ಜೊತೆಯಲ್ಲಿ ಕಾಲ ಕಳೆದಿದ್ದಾರೆ.

  ಹಳ್ಳಿ ಅಭಿಮಾನಿಗಳನ್ನ ಭೆಟಿ ಮಾಡಿದ ದಾಸ

  ಹಳ್ಳಿ ಅಭಿಮಾನಿಗಳನ್ನ ಭೆಟಿ ಮಾಡಿದ ದಾಸ

  ದರ್ಶನ್ ನಾಗರಹೊಳೆ ಸುತ್ತಾ ಮುತ್ತಲಿರುವ ಹಳ್ಳಿಯ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಕೇವಲ ತೆರೆ ಮೇಲೆ ದರ್ಶನ್ ರನ್ನು ನೋಡಿ ಖುಷಿ ಆಗಿದ್ದ ಫ್ಯಾನ್ಸ್ ನೆಚ್ಚಿನ ನಟನನ್ನು ಭೇಟಿ ಮಾಡಿ ಫೋಟೋಗಳನ್ನ ತೆಗೆಸಿಕೊಂಡಿದ್ದಾರೆ.

  English summary
  Kannada actor Darshan visited Nagarahole forest with his friends. at the time Darshan has taken photos of the animals and birds in the forest .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X