ದರ್ಶನ್ ರದ್ದು ಅವತ್ತು ಅದೇ ಮಾತು, ಇವತ್ತು ಅದೇ ಮಾತು
Recommended Video

ಮಂಡ್ಯ ಚುನಾವಣಾ ಫಲಿತಾಂಶದ ಬಗ್ಗೆ ನಟ ದರ್ಶನ್ ಹಾಗೂ ಯಶ್ ಏನು ಹೇಳುತ್ತಾರೆ ಎನ್ನುವ ಕುತೂಹಲ ಇತ್ತು. ಇದೀಗ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
''ಎಲ್ಲರಿಗೂ ನಮಸ್ಕಾರ. ಮಂಡ್ಯ ಲೋಕಸಭೆಯಲ್ಲಿ ಎಷ್ಟು ಊರುಗಳು, ಸಣ್ಣ ಸಣ್ಣ ಹಳ್ಳಿಗಳು ಬರುತ್ತದೆಯೋ ಪ್ರತಿಯೋಬ್ಬರಿಗೆ ಹೃತ್ಪೂರ್ವಕ ಧನ್ಯವಾದ. ಧನ್ಯವಾದ ಎನ್ನುವುದು ತುಂಬ ಸಣ್ಣ ಪದ ಆಗುತ್ತದೆ. ನಿಮ್ಮೆಲ್ಲರಿಗೆ ಸಾಷ್ಟಾಂಗ ನಮಸ್ಕಾರ ಹೇಳುತ್ತೇನೆ.'' ಎಂದು ತಮ್ಮ ಮಾತು ಶುರು ಮಾಡಿದರು.

ದರ್ಶನ್ ಮಂಡ್ಯದಲ್ಲಿ ಸುಮಲತಾ ಪ್ರಚಾರ ಮಾಡಿದ್ದು, ಕೊನೆಗೂ ಅವರಿಗೆ ವಿಜಯ ದಕ್ಕಿದೆ. ಈ ಬಗ್ಗೆ ಮಾತನಾಡಿ ''ಅಮ್ಮನಿಗೆ ಈ ದೊಡ್ಡ ಗೆಲುವು ನೀಡಿದ್ದೀರಿ. ಇದಕ್ಕೆ ಸಾಯುವವರೆಗೆ ಚಿರಋಣಿ ಆಗಿರುತ್ತೇವೆ. ಅವತ್ತು ಅದೇ ಮಾತನ್ನು ಹೇಳಿದ್ದೆ, ಇವತ್ತು ಅದೇ ಮಾತು ಹೇಳ್ತಾ ಇದ್ದೀನಿ.'' ಎಂದರು.
''ನೀವು ತೋರಿಸಿದ ಪ್ರೀತಿಗೆ ಪದಗಳು ಬರುವುದಿಲ್ಲ. ನೀವು ಕೊಟ್ಟ ಈ ಗೆಲುವನ್ನು ಅಮ್ಮ ತುಂಬ ಜೋಪಾನವಾಗಿ ಕಾಪಾಡುತ್ತಾರೆ. ನಿಮ್ಮೆಲ್ಲರಿಗೆ ಅವರ ಕೈಲಾದ ಕೆಲವನ್ನು ಐದು ವರ್ಷದಲ್ಲಿ ಮಾಡುತ್ತಾರೆ. ಮತ ಹಾಕಿದ ಎಲ್ಲ ದೇವರಿಗೆ ಚಿರಋಣಿ. ನಿಮ್ಮೆಲ್ಲರಿಗೆ ತುಂಬ ತುಂಬ ತುಂಬ ಧನ್ಯವಾದಗಳು.'' ಎಂದು ಹೇಳುವ ಮೂಲಕ ಇಡೀ ಮಂಡ್ಯದ ಜನರಿಗೆ ದರ್ಶನ್ ನೆನೆದರು.
ಅಂದಹಾಗೆ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ 125622 ಮತಗಳ ಅಂತರದಿಂದ ಗೆದಿದ್ದಾರೆ.


Click it and Unblock the Notifications











