ಲೈಫ್ ಜೊತೆ ಒಂದು ಸೆಲ್ಫಿ ತೆಗಿಸಿಕೊಂಡ ಡಿ ಬಾಸ್ ದರ್ಶನ್

By Pavithra

ಕನ್ನಡ ಸಿನಿ ರಸಿಕರಿಂದ ಚಿತ್ರರಂಗದ ತಾಂತ್ರಿಕ ಬ್ರಹ್ಮ ಎಂದು ಕರೆಸಿಕೊಳ್ಳುವ ನಟ ನಿರ್ದೇಶಕ ದಿನಕರ್ ತೂಗುದೀಪ ಡೈರೆಕ್ಟ್ ಮಾಡುತ್ತಿರುವ 'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಮಂಗಳೂರಿನಲ್ಲಿ ಎರಡು ಹಂತಗಳ ಚಿತ್ರೀಕರಣ ಮುಗಿಸಿ ಬಂದಿರುವ ದಿನಕರ್ ಮತ್ತು ತಂಡ ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿದೆ.

'ನೀರ್ ದೋಸೆ' ಚಿತ್ರ ಖ್ಯಾತಿಯ ನಟಿ ಹರಿಪ್ರಿಯ, ಪ್ರಜ್ವಲ್ ದೇವರಾಜ್ ಹಾಗೂ ನೆನಪಿರಲಿ ಪ್ರೇಮ್ 'ಲೈಪ್ ಜೊತೆ ಒಂದ್ ಸೆಲ್ಫಿ' ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದಾರೆ. ಕೆಲ ಸಮಯ ಶೂಟಿಂಗ್ ಸೆಟ್ ನಲ್ಲಿ ಚಿತ್ರತಂಡದ ಜೊತೆ ಸಮಯ ಕಳೆದಿದ್ದಾರೆ ದರ್ಶನ್.

Darshan has visited life Jothe Ondu Selfie movie set

ಸಿನಿಮಾದ ಟೈಟಲ್ ಗೆ ತಕ್ಕಂತೆ ನಟಿ ಹರಿಪ್ರಿಯ, ದರ್ಶನ್ ಹಾಗೂ ದಿನಕರ್ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನೂ ಬರೆದುಕೊಂಡಿದ್ದಾರೆ ಹರಿಪ್ರಿಯ. 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣದ ಬ್ಯುಸಿಯಲ್ಲಿರುವ ದರ್ಶನ್ ತಮ್ಮ ಚಿತ್ರರಂಗದ ಸ್ನೇಹಿತರನ್ನ ಹಾಗೂ ಬಾಲ್ಯ ಗೆಳೆಯರನ್ನ ಭೇಟಿ ಮಾಡುತ್ತಿದ್ದಾರೆ.

Darshan has visited life Jothe Ondu Selfie movie set

ಹಲವು ದಿನಗಳ ನಂತರ ದಿನಕರ್ ತೂಗದೀಪ ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾವನ್ನ ನಿರ್ದೇಶನ ಮಾಡುವ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ.ದಿನಕರ್ ಪತ್ನಿ ಮಾನಸ ಬರೆದಿರುವ ಕಥೆಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರವನ್ನ ಉದ್ಯಮಿ ಸಮೃದ್ಧಿ ಮಂಜುನಾಥ್ ಅವರ 'ವಿರಾಟ್ ಸಾಯಿ ಕ್ರಿಯೇಷನ್ಸ್' ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Darshan has visited life Jothe Ondu Selfie movie set, a film directed by Dinakar Toogudeepa srinivas, Nenapirali Prem, Prajwal and Haripriya acting in this movie.The shooting of the movie is taking place in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X