ಆಪ್ತಮಿತ್ರರಿಗೆ 'ಆಪತ್ಬಾಂಧವ' ಈ 'ದಾಸ' ದರ್ಶನ್
Recommended Video

ಸಾಮಾನ್ಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಮಾಪಕ ನಟ. ನಿರ್ಮಾಪಕರು ಹಾಕಿದ ಬಂಡವಾಳ ವಾಪಸ್ ಬರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುವ ಕಲಾವಿದ.
ಕೇವಲ ತಮ್ಮ ಚಿತ್ರದ ನಿರ್ಮಾಪಕರ ಬಗ್ಗೆ ಮಾತ್ರವಲ್ಲ, ತಮ್ಮ ಆಪ್ತರ ಚಿತ್ರಗಳಿಗಾಗಿಯೂ ಡಿ ಬಾಸ್ ಸಹಾಯಕ್ಕೆ ನಿಲ್ಲುತ್ತಾರೆ. ಇದನ್ನ ಸಹಾಯ ಎನ್ನಬೇಕಾ ಅಥವಾ ಕರ್ತವ್ಯ ಎನ್ನಬೇಕೋ ಆದ್ರೆ, 'ಆಪ್ತಮಿತ್ರ'ರಿಗೆ ಈ 'ದಾಸ' ಯಾವಾಗಲೂ 'ಆಪತ್ಬಾಂಧವ' ಎನ್ನುವುದು ನಿಜ.
ಹೌದು, ದರ್ಶನ್ ಹೊಸಬರ ಚಿತ್ರಗಳ ಮುಹೂರ್ತಕ್ಕೆ ಹೋಗ್ತಾರೆ, ಹೊಸಬರ ಸಿನಿಮಾಗಳ ಟ್ರೈಲರ್ ಹಾಗೂ ಹಾಡುಗಳನ್ನ ರಿಲೀಸ್ ಮಾಡ್ತಾರೆ, ಸ್ನೇಹಿತರ ಚಿತ್ರಗಳಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸ್ತಾರೆ, ಒಟ್ನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭೆಗಳನ್ನ ಪ್ರೋತ್ಸಾಹಿಸುತ್ತಾರೆ. ಹಾಗಿದ್ರೆ, ಇತ್ತೀಚಿನ ದಿನಗಳಲ್ಲಿ ದರ್ಶನ್ ಬೆಂಬಲ ನೀಡಿದ್ದ ಚಿತ್ರಗಳು ಯಾವುದು ಎಂದು ಮುಂದೆ ಓದಿ....

'ಫೈಟರ್' ಗೆ ಕ್ಲಾಪ್
ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯಿಸಲಿರುವ ಹೊಸ ಸಿನಿಮಾ 'ಫೈಟರ್'ಗೆ ಚಾಲೆಂಜಿಂಗ್ ಸ್ಟಾರ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ನೂತನ್ ಉಮೇಶ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ.

'ಜಂಟಲ್ ಮ್ಯಾನ್'ಗೆ ಕ್ಲಾಪ್
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದಲ್ಲಿ ಸೆಟ್ಟೇರಿದ 'ಜಂಟಲ್ ಮ್ಯಾನ್' ಚಿತ್ರಕ್ಕೆ 'ಡಿ ಬಾಸ್' ದರ್ಶನ್ ಕ್ಲಾಪ್ ಮಾಡಿ ಸಾಥ್ ನೀಡಿದರು. ಅಷ್ಟೇ ಅಲ್ಲದೇ, ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನ ಕೂಡ ನಿರ್ವಹಿಸಲಿದ್ದಾರಂತೆ.

'ಕುಮಾರಿ 21ಎಫ್' ಟ್ರೈಲರ್ ಲಾಂಚ್
ಹಿರಿಯ ನಟ ದೇವರಾಜ್ ಅವರ ಕಿರಿಯ ಮಗ ಪ್ರಣಾಮ್ ದೇವರಾಜ್ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ 'ಕುಮಾರಿ 21ಎಫ್' ಚಿತ್ರದ ಟ್ರೈಲರ್ ಲಾಂಚ್ ಮಾಡಿದ ದರ್ಶನ್ ಜೂನಿಯರ್ ದೇವರಾಜ್ ಗೆ ಜೊತೆಯಾಗಿ ನಿಂತಿದ್ದಾರೆ.

'ಲೈಪ್ ಜೊತೆ ಸೆಲ್ಫಿ' ಟ್ರೈಲರ್
ಪ್ರಜ್ವಲ್ ದೇವರಾಜ್ ಮತ್ತು ನೆನಪಿರಲಿ ಪ್ರೇಮ್ ಒಟ್ಟಿಗೆ ಅಭಿನಯಿಸುತ್ತಿರುವ 'ಲೈಫ್ ಜೊತೆ ಸೆಲ್ಫಿ' ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದರು. ಈ ಚಿತ್ರವನ್ನ ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ನಿರ್ದೇಶನ ಮಾಡುತ್ತಿದ್ದಾರೆ.

'ವೆನಿಲ್ಲಾ' ಆಡಿಯೋ ಲಾಂಚ್
ಹೊಸಬರ 'ವೆನಿಲ್ಲಾ' ಚಿತ್ರದ ಆಡಿಯೋ ಲಾಂಚ್ ಮಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಸಿನಿಮಾ ಈಗಾಗಲೆ ಬಿಡುಗಡೆಯಾಗಿದೆ.

'ಶರಣ್' ಸಿನಿಮಾ ನೋಡಿದ ದಾಸ
ಕಾಮಿಡಿ ಕಿಂಗ್ ಶರಣ್ ಅಭಿನಯಿಸಿದ್ದ Rambo 2 ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನ ನೋಡಿದ ಚಕ್ರವರ್ತಿ ದರ್ಶನ್ ಶರಣ್ ಮತ್ತು ನಿರ್ದೇಶಕ ತರುಣ್ ಸುಧೀರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ವಿನೋದ್ ಪ್ರಭಾಕರ್ ಚಿತ್ರಕ್ಕೆ ಸಾಥ್
'ಟೈಗರ್ ಪ್ರಭಾಕರ್' ಅವರ ಮಗ ವಿನೋದ್ ಪ್ರಭಾಕರ್ ಅವರ ಪ್ರತಿಯೊಂದು ಚಿತ್ರಕ್ಕೂ ದರ್ಶನ್ ಸಾಥ್ ನೀಡುತ್ತಿದ್ದಾರೆ. ಫೈಟರ್ ಗೂ ಮುನ್ನ ಹೆಸರಿಡದ ಚಿತ್ರ ಆರಂಭವಾಗಿದೆ. ಈ ಸಿನಿಮಾಗೂ ದರ್ಶನ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದರು. ಈ ಚಿತ್ರವನ್ನ ಪೂರಿ ಜಗನ್ನಾಥ್ ಶಿಷ್ಯ ರವಿ ಗೌಡ ನಿರ್ದೇಶನ ಮಾಡುತ್ತಿದ್ದಾರೆ.

'ರಾಮಾಧಾನ್ಯ'ಕ್ಕೆ ಧ್ವನಿ ನೀಡಿದ್ದ 'ಡಿ-ಬಾಸ್'
ದರ್ಶನ್ ಅವರ ಗೆಳೆಯ ಯಶಸ್ ಸೂರ್ಯ ಅಭಿನಯಿಸಿದ್ದ 'ರಾಮಾಧಾನ್ಯ' ಚಿತ್ರದ ಟ್ರೈಲರ್ ಗೆ ದರ್ಶನ್ ಹಿನ್ನೆಲೆ ಧ್ವನಿ ನೀಡಿ ಪ್ರೋತ್ಸಾಹಿಸಿದ್ದರು. ಈ ಸಿನಿಮಾನೂ ಈಗಾಗಲೇ ಬಿಡುಗಡೆಯಾಗಿದೆ.


Click it and Unblock the Notifications











