ಸಂಕಷ್ಟದಲ್ಲಿರುವ ಗೆಳೆಯನಿಗೆ ಧೈರ್ಯ ತುಂಬಿದ ದಾಸ ದರ್ಶನ್
ಕಿರುತೆರೆ, ರಂಗಭೂಮಿ, ಮತ್ತು ಸಿನಿಮಾ ಕಲಾವಿದ ಅನಿಲ್ ಕುಮಾರ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾತು ಕೂಡ ಬಾರದ ಸ್ಥಿತಿಯಲ್ಲಿರುವ ಅನಿಲ್ ಕುಮಾರ್ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಕುಟಂಬದ ಬಳಿ ಅಗತ್ಯವಾದ ಹಣವಿಲ್ಲದೇ ನೋವು ಅನುಭವಿಸುತ್ತಿದ್ದಾರೆ.
ಈ ವಿಷ್ಯವನ್ನ ನಟ ದರ್ಶನ್ ಗೆ ತಿಳಿಸಿ ಎಂದು ಸ್ವತಃ ಕುಟುಂಬದವರೇ ಮನವಿ ಮಾಡಿದ್ದರು. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಕೂಡ ವರದಿ ಮಾಡಿತ್ತು. ಇದೀಗ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಗೆಳೆಯ ಅನಿಲ್ ಕುಮಾರ್ ಅವರ ಕಷ್ಟಕ್ಕೆ ಸ್ಪಂದಿಸಿದ್ದು, ''ನಾನು ಬರ್ತೀನಿ ಧೈರ್ಯವಾಗಿರಿ'' ಎಂದು ಫೋನ್ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅವರ ಪರವಾಗಿ ಪ್ರಚಾರ ಮಾಡುತ್ತಿರುವ ನಟ ದರ್ಶನ್ ಬ್ಯುಸಿ ಇದ್ದಾರೆ. ಜೊತೆಗೆ ಹೈದ್ರಾಬಾದ್ ನಲ್ಲಿ ಒಡೆಯ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಎರಡನ್ನ ಬ್ಯಾಲೆನ್ಸ್ ಮಾಡುತ್ತಿರುವ ದರ್ಶನ್, ಬಿಡುವು ಮಾಡಿಕೊಂಡು ಭೇಟಿ ಮಾಡುವುದಾಗಿ ಹೇಳಿದ್ದಾರಂತೆ.

ಅಂದ್ಹಾಗೆ, ನಟ ದರ್ಶನ್ ಮತ್ತು ಅನಿಲ್ ಕುಮಾರ್ ಅವರು ನೀನಾಸಂನಲ್ಲಿ ಸಹಪಾಠಿಗಳು. ದರ್ಶನ್ ನೀನಾಸಂನಲ್ಲಿ ಅಭ್ಯಾಸ ಮಾಡುತ್ತಿದ್ದ ಅನಿಲ್ ಕೂಡ ದಾಸನ ಜೊತೆಯಲ್ಲೇ ಇದ್ದರಂತೆ. ಆಗಿನಿಂದಲೂ ದರ್ಶನ್ ಜೊತೆ ಒಡನಾಟ ಮುಂದುರವರಿಸಿದ್ದರು ಅನಿಲ್ ಕುಮಾರ್.
ರಂಗಭೂಮಿ, ಕಿರುತೆರೆ ಹಾಗೂ ಅಲ್ಲೊಂದು ಇಲ್ಲೊಂದು ಸಿನಿಮಾ ಎಂದು ಜೀವನ ಮಾಡುತ್ತಿದ್ದ ಅನಿಲ್ ಈಗ ಆನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮಲಗುವಂತೆ ಆಗಿದೆ. 'ಮೂಡಲ ಮನೆ' ಧಾರವಾಹಿಯಿಂದ ಕಿರುತೆರೆ ಪಯಣ ಪ್ರಾರಂಭಿಸಿದ ಅನಿಲ್ ಕುಮಾರ್ ಸದ್ಯ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ಧಾರವಾಹಿಯಲ್ಲಿಯೂ ಅಭಿನಯಿಸುತ್ತಿದ್ದಾರೆ.


Click it and Unblock the Notifications











