For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಕರೆ ಮಾಡಿದ 1 ಗಂಟೆಯಲ್ಲಿ ಕಿಲ್ಲರ್ ವೆಂಕಟೇಶ್ ಸಹಾಯಕ್ಕೆ ಬಂದ ಡಿ ಬಾಸ್

  |
  ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್ ಹೋರಾಟ

  ಕನ್ನಡದ ಖ್ಯಾತ ಖಳ ನಟ ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿದ್ದ ಕಿಲ್ಲರ್ ವೆಂಕಟೇಶ್ ಕುಟುಂಬಕ್ಕೆ ನವರಸ ನಾಯಕ ಜಗ್ಗೇಶ್ ನೆರವಿಗೆ ಧಾವಿಸಿದ್ದರು.

  ಒಂದು ಕಾಲದಲ್ಲಿ ಕಿಲ್ಲರ್ ವೆಂಕಟೇಶ್ ಮತ್ತು ಜಗ್ಗೇಶ್ ಅವರು ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಆತ್ಮೀಯ ಸ್ನೇಹಿತನ ಕುಟುಂಬ ಇಂದು ಕಷ್ಟದಿಂದ ನೋವು ಅನುಭವಿಸುತ್ತಿರುವ ಸಂಗತಿ ಗೊತ್ತಾಗುತ್ತಿದ್ದಂತೆ ಚಿತ್ರರಂಗದ ಪರವಾಗಿ ಸಹಾಯಕ್ಕೆ ನಿಂತಿದ್ದಾರೆ.

  ಇದೀಗ, ಕಿಲ್ಲರ್ ವೆಂಕಟೇಶ್ ಸಹಾಯಕ್ಕೆ ಚಾಲೆಂಜಿಂಗ್ ದರ್ಶನ್ ಕೂಡ ಬಂದಿದ್ದಾರೆ. ಮುಂದೆ ಓದಿ...

  ಕಿಲ್ಲರ್ ಗೆ ನೆರವಾದ ಡಿ ಬಾಸ್

  ಕಿಲ್ಲರ್ ಗೆ ನೆರವಾದ ಡಿ ಬಾಸ್

  ಕಿಲ್ಲರ್ ವೆಂಕಟೇಶ್ ಅವರ ಅನಾರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿಯ ಕುರಿತು ನಟ ಜಗ್ಗೇಶ್ ಅವರು ದರ್ಶನ್ ಅವರ ಬಳಿ ತಿಳಿಸಿದ್ದಾರೆ. ಜಗ್ಗೇಶ್ ಅವರ ಒಂದು ಫೋನ್ ಗೆ ತಕ್ಷಣ ಪ್ರತಿಕ್ರಿಯಿಸಿದ ದರ್ಶನ್ ಒಂದು ಲಕ್ಷ ಹಣ ಕಳುಹಿಸಿದ್ದಾರೆ. ಈ ವಿಚಾರವನ್ನು ಸ್ವತಃ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು

  ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು

  ''ಕಿಲ್ಲರ್ ವೆಂಕಟೇಶ್ ವಿಷಯವಾಗಿ ನಾನು ಕರೆ ಮಾಡಿದ 1 ಘಂಟೆಯಲ್ಲಿ ಅವನ ಚಿಕಿತ್ಸೆ ಗೆ 1ಲಕ್ಷ ರೂ ಕಳಿಸಿದ ಕಲಾಬಂಧು..! ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು..ನಿನ್ನ ಶ್ರೇಷ್ಠಗುಣ ನನ್ನ ಹೃದಯದಲ್ಲಿ ಅಚ್ಚಾಯಿತು.. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ.. @dasadarshan god bless..'' ಎಂದು ಜಗ್ಗೇಶ್ ತಿಳಿಸಿದ್ದಾರೆ.

  ಜಗ್ಗೇಶ್ ಕೋರಿಕೆಗೆ ಸ್ಪಂದನೆ: ವಿಕ್ಟೋರಿಯಾದಲ್ಲಿ ಕಿಲ್ಲರ್ ವೆಂಕಟೇಶ್ ಚಿಕಿತ್ಸೆಜಗ್ಗೇಶ್ ಕೋರಿಕೆಗೆ ಸ್ಪಂದನೆ: ವಿಕ್ಟೋರಿಯಾದಲ್ಲಿ ಕಿಲ್ಲರ್ ವೆಂಕಟೇಶ್ ಚಿಕಿತ್ಸೆ

  ಸಾ.ರಾ ಮತ್ತು ಭಾಮಾ ಹರೀಶ್ ನೆರವು

  ಸಾ.ರಾ ಮತ್ತು ಭಾಮಾ ಹರೀಶ್ ನೆರವು

  ''ವಿಕ್ಟೋರಿಯಾ ಆಸ್ಪತ್ರೆಯ ಡಾ ಗಿರೀಶ್ ಮತ್ತು ಅವರ ವಿಶೇಷ ತಂಡ ಅದ್ಭುತವಾಗಿ ಸ್ಪಂದಿಸಿ ಚಿಕಿತ್ಸೆ ನೀಡುತ್ತಿದ್ದಾರೆ..ಧನ್ಯವಾದಗಳು #ಶ್ರೀರಾಮುಲು #ಕರ್ನಾಟಕ ಸರ್ಕಾರ #ಮಂತ್ರಿಗಳು ಹಾಗು ಇಲಾಖೆ ಸಹಾಯಕ ಅಧಿಕಾರಿಗಳಿಗೆ.. ನನ್ನ ಕರೆಗೆ ಸ್ಪಂಧಿಸಿದ ಕಲಾಬಂಧು ದರ್ಶನ ರವರಿಗೆ ಸಾ.ರಾ, ಬಾಮಾ ಹರೀಶ್ ಮಾಧ್ಯಮ ಮಿತ್ರರಿಗೆ'' ಎಂದು ಜಗ್ಗೇಶ್ ಥ್ಯಾಂಕ್ಸ್ ತಿಳಿಸಿದ್ದಾರೆ.

  ಏನಾಗಿದೆ ಕಿಲ್ಲರ್ ವೆಂಕಟೇಶ್ ಗೆ?

  ಏನಾಗಿದೆ ಕಿಲ್ಲರ್ ವೆಂಕಟೇಶ್ ಗೆ?

  ಸುಮಾರು 250ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಕಿಲ್ಲರ್ ವೆಂಕಟೇಶ್ ಅವರಿಗೆ ಲಿವರ್ ಸಮಸ್ಯೆಯಾಗಿದೆ. ಸದ್ಯದ ಆಸ್ಪತ್ರೆಗೆ ದಾಖಲಾಗಿರುವ ವೆಂಕಟೇಶ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಜಗ್ಗೇಶ್ ಅವರು ವೆಂಕಟೇಶ್ ಕುಟುಂಬದ ಜೊತೆ ಸಹಾಯಕ್ಕೆ ನಿಂತಿದ್ದು, ದಾನಿಗಳು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  English summary
  Kannada actor darshan helped killer venkatesh, who hospitalized in health problem

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X