Just In
Don't Miss!
- News
'ಮಮತಾರನ್ನು 50 ಸಾವಿರ ಮತಗಳಿಂದ ಸೋಲಿಸದಿದ್ದರೆ ರಾಜಕೀಯ ತ್ಯಜಿಸುತ್ತೇನೆ'
- Automobiles
ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಎಸ್ಎಲ್: ಚೆನ್ನೈಯಿನ್ ಎಫ್ಸಿ vs ಎಸ್ಸಿ ಈಸ್ಟ್ ಬೆಂಗಾಲ್, Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದು ದರ್ಶನ್ ಮಾತ್ರ: ಭಾವುಕರಾದ ಖ್ಯಾತ ವಿಲನ್
ಸಿನಿಮಾ ನಟರು ಬರಿ ಸಿನಿಮಾ ಮಾಡ್ತಾರೆ, ಸಂಭಾವನೆ ತಗೊಳ್ತಾರೆ. ಆಮೇಲೆ ಅವರವರ ವೈಯಕ್ತಿಕ ಜೀವನ. ಯಾರಿಗೂ ಅವರಿಂದ ಸಹಾಯನೂ ಆಗಲ್ಲ, ಯಾರಿಗೂ ನೆರವು ನೀಡಿಲ್ಲ ಅನ್ನೋ ಭಾವನೆ ಕೆಲವರಲ್ಲಿ ಇದೆ. ಅದು ಎಲ್ಲರ ವಿಷ್ಯದಲ್ಲೂ ಸತ್ಯವಲ್ಲ. ಕೆಲವು ನಟರು ಸಾಮಾನ್ಯ ಜನರಿಗೆ, ಬಡ ವಿದ್ಯಾರ್ಥಿಗಳಿ, ಸಹ ಕಲಾವಿದರ ಅವರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ.
ಅದರಲ್ಲಿ ನಟ ದರ್ಶನ್ ಕೂಡ ಒಬ್ಬರು. ದರ್ಶನ್ ಅವರಿಗೆ ಸಹಾಯ ಮಾಡಿದ್ರು, ಇವರಿಗೆ ನೆರವು ನೀಡಿದ್ರು ಎಂದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಅವರ ಅಭಿಮಾನಿ ಪೇಜ್ ಗಳು ಹಾಕಿಕೊಳ್ಳುವುದನ್ನ ನೋಡಿದ್ದೇವೆ. ಇದೀಗ, ಸ್ವತಃ ದರ್ಶನ್ ಅವರಿಂದ ನೆರವು ಪಡೆದುಕೊಂಡ ವ್ಯಕ್ತಿ ದರ್ಶನ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಅಭಿಮಾನಿಗಳ ಡಿಮ್ಯಾಂಡ್: 'ರಾಬರ್ಟ್'ಗೆ ಈ ನಟಿ ಹೀರೋಯಿನ್ ಆಗ್ಬೇಕಂತೆ
ಹೌದು, ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳ ಕಾಲ ಪೋಷಕ ನಟನಾಗಿ ಅಭಿನಯಿಸಿದ್ದ ಹಿರಿಯ ನಟ ಭರತ್ ಅವರು ಕಷ್ಟದಲ್ಲಿದ್ದಾಗ ದರ್ಶನ್ ಸಹಾಯ ಮಾಡಿದ್ರಂತೆ. ಬೇರೆ ಯಾರೂ ನನ್ನ ಕಷ್ಟಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ, ನಟ ಭರತ್ ಅವರಿಗೆ ಏನಾಗಿತ್ತು? ದರ್ಶನ್ ಮಾಡಿದ ಸಹಾಯವೇನು? ಮುಂದೆ ಓದಿ.....

ಆದಿತ್ಯ ಚಿತ್ರದ ವಿಲನ್ ಈ ಭರತ್
1996ರಲ್ಲಿ ನಟ ಶಿವರಾಜ್ ಕುಮಾರ್ ಅಭಿನಯಿಸಿದ್ದ ಆದಿತ್ಯ ಸಿನಿಮಾ ನೆನಪಿರಬಹುದು. ಈ ಸಿನಿಮಾ ಒಂದು ಫೇಮಸ್ ಹಾಡಿದೆ. ರಂಬೆ ನೀ ವೈಯಾರದ ರಂಬೆ.....ಅಂತ. ಈ ಹಾಡಿನಲ್ಲಿ ಹೆಣ್ಣಿ ವೇಷ ಹಾಕಿಕೊಂಡು ವಿಲನ್ ಆಗಿ ಕಾಣಿಸಿಕೊಂಡಿದ್ದ ನಟ ಈ ಭರತ್. ಸುಮಾರು ವರ್ಷದ ನಂತರ ಈಗ ಕನ್ನಡ ಇಂಡಸ್ಟ್ರಿಗೆ ಮತ್ತೆ ಕಂಬ್ಯಾಕ್ ಆಗ್ತಿದ್ದಾರೆ.
ಯಶ್ ನಂತರ ಗಡ್ಡಧಾರಿ ಆದ ದರ್ಶನ್: ಇದರ ಹಿಂದಿದ್ದಾರೆ ಆ ಡೈರೆಕ್ಟರ್.!

ಇಷ್ಟು ದಿನ ಎಲ್ಲಿದ್ರು, ಏನಾಗಿತ್ತು?
ಇತ್ತೀಚಿಗಷ್ಟೆ ಖಾಸಗಿ ಸುದ್ದಿವಾಹಿನಿ ಜೊತೆ ಸಿಕ್ಕಿ ಮಾತನಾಡಿದ ಭರತ್ ಅವರು, ಇಷ್ಟು ವರ್ಷಗಳ ಕಾಲ ಯಾಕೆ ಸಿನಿಮಾ ಮಾಡಿಲ್ಲ, ಎಲ್ಲೂ ಕಾಣಿಸಿಕೊಂಡಿಲ್ಲ ಎಂಬುದನ್ನ ಹೇಳಿಕೊಂಡಿದ್ದರು. ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದ ಭರತ್ ಅವರು ಸುಮಾರು ವರ್ಷಗಳ ಕಾಲ ಬಲಭಾಗದ ಅಂಗಾಗಲ್ಲಿ ಸ್ವಾಧೀನ ಕಳೆದುಕೊಂಡಿದ್ದರಂತೆ. ಹಾಗಾಗಿ, ಅದರಿಂದ ಚೇತರಿಸಿಕೊಳ್ಳಲು ಬಹಳ ಕಷ್ಟವಾಯಿತ್ತಂತೆ.
ಮಗನಿಗೆ ಹಸುವಿನ ಹಾಲು ಕರೆಯುವುದನ್ನು ಹೇಳಿಕೊಟ್ಟ ದರ್ಶನ್

ದರ್ಶನ್ ಒಬ್ಬರೇ ಸಹಾಯ ಮಾಡಿದ್ದು
''ನಾನು ಕಷ್ಟಕಾಲದಲ್ಲಿದ್ದಾಗ ನನಗೆ ಇಂಡಸ್ಟ್ರಿಯಿಂದ ಆಗಲಿ, ಬೇರೇ ಯಾರೂ ಸಹಾಯ ಮಾಡಿಲ್ಲ. ನನಗೆ ಸಹಾಯ ಮಾಡಿದ್ದು ದರ್ಶನ್ ಅವರು ಮಾತ್ರ. ಅವರು ನಮ್ಮ ಪಾಲಿಗೆ ದೇವರು. ಅವರು ಮಾಡಿದ ಸಹಾಯದಿಂದ ಇಂದು ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ'' ಎಂದು ಭಾವುಕರಾದರು.

ಚಿಕಿತ್ಸೆಗೆ ಸಹಾಯ ಮಾಡಿದ್ದ ದಾಸ
ಹಿರಿಯ ನಟ, ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದ ಭರತ್ ಅವರು ನೆರವಿಗಾಗಿ ತುಂಬಾ ಜನರ ಬಳಿ ಕೇಳಿಕೊಂಡರಂತೆ. ಆದ್ರೆ, ಯಾರೂ ಸಹಾಯ ಮಾಡಿಲ್ಲ ಎಂಬ ಬೇಸರ ಅವರನ್ನ ಕಾಡಿದೆ. ಇಂತಹ ಸಂದರ್ಭದಲ್ಲಿ ಅದ್ಯಾಗೋ ದರ್ಶನ್ ಅವರಿಗೆ ಮಾಹಿತಿ ಸಿಕ್ಕಿದೆ. ನಂತರ ಅವರ ಕಡೆಯುವರಿಂದ ಒಂದಿಷ್ಟು ಹಣ ಅಂತ ನೀಡಿದ್ರು. ಅವರು ನೀಡಿದ ಹಣದಿಂದಲೇ ನಾನು ಚಿಕಿತ್ಸೆ ಪಡೆದೆ. ಚೇತರಿಸಿಕೊಂಡು ಈಗ ಆರೋಗ್ಯವಾಗಿದ್ದೀನಿ. ಮತ್ತೆ ಸಿನಿಮಾ ಮಾಡ್ತಿದ್ದೀನಿ'' ಎಂದು ಹೇಳಿಕೊಂಡರು.

'ಜಲ್ಲಿಕಟ್ಟು' ಚಿತ್ರದಲ್ಲಿ ಅಭಿನಯ
ಪಾರ್ಶ್ವವಾಯುಗೆ ತುತ್ತಾಗಿದ್ದ ಭರತ್ ಈಗ ಚೇತರಿಸಿಕೊಂಡು ಮತ್ತೆ ನಟನೆಗೆ ಮರಳಿದ್ದಾರೆ. ಜಲ್ಲಿಕಟ್ಟು ಎಂಬ ಸಿನಿಮಾದಲ್ಲಿ ಒಂದು ಪಾತ್ರ ಮಾಡುತ್ತಿದ್ದಾರೆ. ಇದು ನಿಜಕ್ಕೂ ಖುಷಿಯ ಸಂಗತಿ. ಸಿನಿಮಾ ಇಂಡಸ್ಟ್ರಿ ಒಂದು ಕುಟುಂಬವಿದ್ದಂತೆ ಎಂದು ಬರಿ ಬಾಯಿ ಮಾತಿನಲ್ಲಿ ಹೇಳುವವರ ಮಧ್ಯೆ ತಮ್ಮ ಸಹಕಲಾವಿದರು ಕಷ್ಟದಲ್ಲಿದ್ದಾಗ ಈ ರೀತಿ ಸಹಾಯ ಮಾಡುವುದು ನಿಜಕ್ಕೂ ಮೆಚ್ಚುವ ಕೆಲಸ.