For Quick Alerts
  ALLOW NOTIFICATIONS  
  For Daily Alerts

  ಅನಾರೋಗ್ಯದಿಂದ ಬಳಲುತ್ತಿದ್ದ ಬಸವನ ಚಿಕಿತ್ಸೆಗೆ ನಟ ದರ್ಶನ್ ನೆರವು

  |

  ಮೈಸೂರು ಜಿಲ್ಲೆಯ ಕೆ.ಆರ್ ನಗರದ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬಸವನ ಚಿಕಿತ್ಸೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವಾಗಿದ್ದಾರೆ.

  ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಪ್ರಚಾರ ಮಾಡಿರುವ ಪರಿ ಎಲ್ಲರಿಗೂ ಗೊತ್ತಿದೆ. ಕೆ.ಆರ್ ನಗರದ ಕಾಳಮ್ಮನ ಕೊಪ್ಪಲು ಗ್ರಾಮದ ಬಸವ ಎಲ್ಲರ ಗಮನ ಸೆಳೆದಿತ್ತು.

  'ರಾಬರ್ಟ್' ಹೊಸ ರಿಲೀಸ್ ಡೇಟ್': ವಿಶೇಷ ದಿನದಂದು ಬಿಡುಗಡೆಯಾಗುತ್ತಾ ಸಿನಿಮಾ?'ರಾಬರ್ಟ್' ಹೊಸ ರಿಲೀಸ್ ಡೇಟ್': ವಿಶೇಷ ದಿನದಂದು ಬಿಡುಗಡೆಯಾಗುತ್ತಾ ಸಿನಿಮಾ?

  ದರ್ಶನ್ ಪ್ರಚಾರಕ್ಕೆ ಬಂದ ವೇಳೆ ಬಸವ ಗ್ರಾಮದ ನಡುರಸ್ತೆಯಲ್ಲಿ ನಿಂತು ಯಾರಿಗೂ ಮುಂದೆ ಹೋಗದಂತೆ ತಡೆದಿತ್ತು. ಆ ನಂತರ ದರ್ಶನ್ ಪ್ರಚಾರ ವಾಹನದಿಂದ ಇಳಿದು ಬಂದು ಮೈ ಸವರಿದ ಕೂಡಲೆ ದಾರಿ ಬಿಟ್ಟಿತ್ತು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  ಈ ಬಸವ ಈಗ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದೆ. ಹಲ್ಲು ತಿನ್ನದೆ, ನೀರು ಕುಡಿಯದೆ ದೇವಸ್ಥಾನದ ಆವರಣದಲ್ಲಿ ಮಲಗಿದೆ. ಈ ವಿಷಯವನ್ನು ಗ್ರಾಮಸ್ಥರು ಮತ್ತು ಸ್ನೇಹಿತರು ದರ್ಶನ್ ಗೆ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೆ ದರ್ಶನ್ ಸ್ನೇಹಿತರೊಂದಿಗೆ ಮೈಸೂರಿನ ಪಶು ವೈದ್ಯರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ.

  ಲಾಕ್ ಡೌನ್ ಕಾರಣ ದರ್ಶನ್ ಬರಲು ಸಾಧ್ಯವಾಗಿಲ್ಲ. ಎಷ್ಟು ಖರ್ಚಾದರು ಪರವಾಗಿಲ್ಲ, ಆದರೆ ಬಸವ ಗುಣಮುಖವಾಬೇಕು ಎನ್ನುವುದು ದರ್ಶನ್ ಆಸೆ ಎಂದು ಸ್ನೇಹಿತರು ತಿಳಿಸಿದ್ದಾರೆ. ಬಸವನ ಚಿಕಿತ್ಸೆಗೆ ನೆರವಾದ ದರ್ಶನ್ ಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

  English summary
  Kannada Actor Darshan helps to treatment of K.R Nagar Basava

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X