For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್: ಹುಟ್ಟುಹಬ್ಬದ ಸಂಭ್ರಮದಲ್ಲಿ ಬೌನ್ಸರ್ ತಲೆಗೆ ಹೊಡೆದ ದರ್ಶನ್

  |
  ಕಾರ್ಪೊರೇಷನ್ ಸ್ಕೂಲ್ ಅಲ್ಲಿ ಓದಿದ್ದು ನಂಗೆ ಇಂಗ್ಲೀಷ್ ಬರಲ್ಲ

  43ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದರ್ಶನ್ ಗೆ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು ದರ್ಶನ್ ಭೇಟಿಯಾಗಿ ಶುಭಾಶಯ ಕೋರುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಬಂದ ಅಭಿಮಾನಿಗಳು ದರ್ಶನ್ ನಿವಾಸದ ಮುಂದೆ ಕ್ಯೂ ನಿಂತು ಡಿ ಬಾಸ್ ಗೆ ಶೇಕ್ ಹ್ಯಾಂಡ್ ಮಾಡಿ ವಿಶ್ ಮಾಡಿದ್ದಾರೆ.

  ಅಭಿಮಾನಿಗಳು ಸರದಿ ಸಾಲಲ್ಲಿ ನಿಂತು ದಚ್ಚುಗೆ ಶುಭಾಶಯ ಕೋರುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಅಭಿಮಾನಿಗಳು ಒಬ್ಬೊಬ್ಬರಾಗಿ ಬಂದು ದರ್ಶನ್ ಗೆ ಶೇಕ್ ಹ್ಯಾಂಡ್ ನೀಡಿ ವಿಶ್ ಮಾಡಿ ಮುಂದಕ್ಕೆ ಹೋಗುತ್ತಿದ್ದಾರೆ. ಸಾಗರೋಪಾದಿಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ದರ್ಶನ್ ಸಾಮಾಧಾನದಿಂದ ಮಾತನಾಡಿಸಿ ಕಳುಹಿಸುತ್ತಿದ್ದಾರೆ. ಈ ಸಮಯದಲ್ಲಿ ಕೋಪಗೊಂಡ ದರ್ಶನ್ ಬೌನ್ಸರ್ ತೆಲೆಗೆ ಬಾರಿಸಿದ್ದಾರೆ.ಮುಂದೆ ಓದಿ...

  ದರ್ಶನ್ ಬರ್ತಡೇಗೆ ಶುಭಕೋರಿದ ಅಪ್ಪುಗೆ ಡಿಬಾಸ್ ಅಭಿಮಾನಿ ಹೀಗಾ ಬರೆಯೋದು?ದರ್ಶನ್ ಬರ್ತಡೇಗೆ ಶುಭಕೋರಿದ ಅಪ್ಪುಗೆ ಡಿಬಾಸ್ ಅಭಿಮಾನಿ ಹೀಗಾ ಬರೆಯೋದು?

  ಬೌನ್ಸರ್ ತಲೆಗೆ ದರ್ಶನ್ ಬಾರಿಸಿದ್ದೇಕೆ?

  ಬೌನ್ಸರ್ ತಲೆಗೆ ದರ್ಶನ್ ಬಾರಿಸಿದ್ದೇಕೆ?

  ಅಭಿಮಾನಿಗಳು ಸರದಿ ಸಾಲಲ್ಲಿ ನಿಂತು ದರ್ಶನ್ ಗೆ ವಿಶ್ ಮಾಡಿ ಹೋಗುವಾಗ, ಪಕ್ಕದಲ್ಲೆ ನಿಂತಿದ್ದ ಬೌನ್ಸರ್ ಅಭಿಮಾನಿಯೊಬ್ಬರನ್ನು ಎಳೆದು ಜೋರಾಗಿ ತಳ್ಳುತ್ತಾರೆ. ಇದನ್ನು ನೋಡಿದ ದರ್ಶನ್ ಕೋಪಗೊಂಡು ಬೌನ್ಸರ್ ತಲೆಗೆ ಬಾರಿಸಿದ್ದಾರೆ.

  ಬೌನ್ಸರ್ ಗೆ ಎಚ್ಚರಿಕೆ ನೀಡಿದ ಡಿ ಬಾಸ್

  ಬೌನ್ಸರ್ ಗೆ ಎಚ್ಚರಿಕೆ ನೀಡಿದ ಡಿ ಬಾಸ್

  ದರ್ಶನ್ ಹೊಡೆಯುತ್ತಿದಂತೆ ಬೌನ್ಸರ್ ಒಮ್ಮ ಗಾಬರಿಯಾಗಿದ್ದಾರೆ. ಯಾಕೆ ಅಂತ ಯೋಚಿಸುವುದರೊಳಗೆ ದರ್ಶನ್ ಎಚ್ಚರಿಕೆ ನೀಡುತ್ತಾರೆ. "ದೂರದ ಊರಿಂದ ಬರುವ ಅಭಿಮಾನಿಗಳ ಜೊತೆ ಹೀಗೆ ನಡೆದುಕೊಳ್ಳಬಾರದು" ಎಂದು ವಾರ್ನ್ ಹೇಳಿದ್ದಾರೆ.

  ವಿಡಿಯೋ ವೈರಲ್

  ಅಭಿಮಾನಿಯನ್ನು ತಳ್ಳಿದ ಬೌನ್ಸರ್ ಗೆ ದರ್ಶನ್ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಕಷ್ಟು ಕಮೆಂಟ್ ಗಳು ಹರಿದು ಬರುತ್ತಿವೆ. ಈ ವಿಡಿಯೋ ಅಭಿಮಾನಿ ಬಳಗದಲ್ಲಿ ಸಿಕ್ಕಾಪಟ್ಟೆ ಶೇರ್ ಆಗಿದೆ.

  ದವಸ-ಧಾನ್ಯಗಳನ್ನು ತಂದಿರುವ ಅಭಿಮಾನಿಗಳು

  ದವಸ-ಧಾನ್ಯಗಳನ್ನು ತಂದಿರುವ ಅಭಿಮಾನಿಗಳು

  ದೂರದ ಊರುಗಳಿಂದ ಬಂದ ಅಭಿಮಾನಿಗಳು ನೆಚ್ಚಿನ ನಟನ ಮನವಿಯಂತೆ ದವಸ-ಧಾನ್ಯಗಳನ್ನು ಹೊತ್ತು ತಂದಿದ್ದಾರೆ. ಈಗಾಗಲೆ ಸಾಕಷ್ಟು ದವಸ-ಧಾನ್ಯಗಳ ಮೂಟೆ ದರ್ಶನ್ ಮನೆ ಸೇರಿದೆ. ಅಭಿಮಾನಿಗಳು ಪ್ರೀತಿಯಿಂದ ಹೊತ್ತುತಂದ ದವಸ-ಧಾನ್ಯಗಳನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸುವ ಕೆಲಸ ದರ್ಶನ್ ಮಾಡುತ್ತಿದ್ದಾರೆ.

  English summary
  Kannada Actor Darshan hitting bouncer head during celebrating his birthday video viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X