For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಕಂಚಿನ ಪುತ್ಥಳಿ ಅನಾವರಣ ಮಾಡಿದ ಡಿ-ಬಾಸ್

  |

  ರೆಬೆಲ್ ಸ್ಟಾರ್ ಅಂಬರೀಶ್ ಅವರ ಎರಡನೇ ವರ್ಷದ ಪುಣ್ಯ ತಿಥಿ ಹಿನ್ನೆಲೆ ಮಂಡ್ಯದಲ್ಲಿ ಅಂಬರೀಶ ಅವರ ಕಂಚಿನ ಪುತ್ಥಳಿ ನಿರ್ಮಿಸಲಾಗಿದೆ. ಈ ಕಂಚಿನ ಪುತ್ಥಳಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಂಬರೀಶ್ ಮಗ ಅಭಿಷೇಕ್ ಹಾಗೂ ಸುಮಲತಾ ಅಂಬರೀಶ್ ಅನಾವರಣಗೊಳಿಸಿದ್ದಾರೆ.

  ಅಂಬಿ ಅಪ್ಪಾಜಿ ಬಯ್ಯೋದನ್ನ ತುಂಬಾ ಮಿಸ್ ಮಾಡ್ಕೋತಾ ಇದ್ದೀನಿ ಎಂದ ದರ್ಶನ್ | Filmibeat Kannada

  ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಅಂಬರೀಶ ಅವರ ಕಂಚಿನ ಪುತ್ಥಳಿ ನಿರ್ಮಿಸಲಾಗಿದೆ. ಪುತ್ಥಳಿ ಅನಾವರಣಕ್ಕಾಗಿ ಗ್ರಾಮಕ್ಕೆ ಬಂದ ದರ್ಶನ್, ಅಭಿಷೇಕ್ ಅವರನ್ನು ಭರ್ಜರಿಯಾಗಿ ಸ್ವಾಗತ ಮಾಡಲಾಗಿದೆ.

  ಅಂಬರೀಶ್ ಪುಣ್ಯಸ್ಮರಣೆ; ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ, ಅಭಿಷೇಕ್, ದರ್ಶನ್ ಮತ್ತು ಗಣ್ಯರುಅಂಬರೀಶ್ ಪುಣ್ಯಸ್ಮರಣೆ; ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ, ಅಭಿಷೇಕ್, ದರ್ಶನ್ ಮತ್ತು ಗಣ್ಯರು

  ರಸ್ತೆಯುದ್ದಕ್ಕೂ ದರ್ಶನ್, ಸುಮಲತಾ ಹಾಗು ಅಭಿಷೇಕ ಅವರ ಮೇಲೆ ಹೂವಿನ ಮಳೆ ಸುರಿಸಿ ಅದ್ಧೂರಿಯಾಗಿ ಕರೆದುಕೊಂಡು ಬರಲಾಯಿತು. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ದರ್ಶನ್, ಅಭಿಷೇಕ್ ಅವರನ್ನು ನೋಡಲು ಜನಸಾಗರವೇ ಸೇರಿತ್ತು. ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

  ಕಂಚಿನ ಪುತ್ಥಳಿ ಅನಾವರಣಕ್ಕೂ ಮುಂಚೆ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿ ಬಳಿ ಭೇಟಿ ನೀಡಿದ ದರ್ಶನ್, ಸುಮಲತಾ ಹಾಗೂ ಅಭಿಷೇಕ್ ಅಂಬರೀಷ್ ಜೊತೆ ಪೂಜೆ ಸಲ್ಲಿಸಿದರು ಪೂಜೆ ಸಲ್ಲಿಸಿದರು.

  English summary
  Ambarish 2nd Death Anniversary: Challenging star Darshan, abhishek ambareesh has inaugurated rebel star Ambarish Bronze Statue at Mandya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X