ದರ್ಶನ್ ನ ನೋಡಲು ಅಭಿಮಾನಿಗಳ ನೂಕುನುಗ್ಗಲು, ಲಘು ಲಾಠಿ ಪ್ರಹಾರ.!

By ರಾಮನಗರ ಪ್ರತಿನಿಧಿ

Recommended Video

ದರ್ಶನ್‌ರನ್ನು ನೋಡಲು ಮುಗಿ ಬಿದ್ದ ಅಭಿಮಾನಿಗಳಿಗೆ ಲಾಟಿ ರುಚಿ ತೋರಿಸಿದ ಪೊಲೀಸರು..! | Filmibeat Kannada

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಆಭರಣ ಮಳಿಗೆಯ ಉದ್ಘಾಟನೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಇಂದು 'ದಾಸ' ದರ್ಶನ್ ಭಾಗವಹಿಸಿದರು. ರೇಷ್ಮೆ ನಗರಿ ರಾಮನಗರದಲ್ಲಿ ಎಂ.ಎಸ್.ಗೋಲ್ಡ್ ಅಂಡ್ ಡೈಮಂಡ್ಸ್ ನೂತನ ಆಭರಣ ಮಳಿಗೆಯನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ಘಾಟಿಸಿದರು.

ನೆಚ್ಚಿನ ನಟನನ್ನ ನೋಡಲು ಜಿಲ್ಲೆಯ ಮೂಲೆ ಮೂಲೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳು ದರ್ಶನ್ ನ ನೋಡಲು ಮುಗಿಬಿದ್ದಿದ್ರಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಇದೇ ವೇಳೆ ಹೆದ್ದಾರಿಗೆ ನುಗ್ಗಿದ ಅಭಿಮಾನಿಗಳನ್ನು ತಡೆಯಲು ಹರಸಾಹಸ ಪಟ್ಟ ಪೊಲೀಸರು ಕಡೆಗೆ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನ ನಿಭಾಯಿಸಿದರು.

Darshan inaugurates MS Gold and Diamond store at Ramanagar

ರಾಮನಗರದಲ್ಲಿ ದರ್ಶನ್ ನೋಡಲು ಜನವೋ ಜನ, ಲಾಠಿ ರುಚಿ ಕಂಡ ಅಭಿಮಾನಿಗಳು

ಇನ್ನೂ ಆಭರಣ ಮಳಿಗೆ ಉದ್ಘಾಟನೆಯನ್ನ ಕೆಲ ಕ್ಷಣಗಳಲೇ ಮುಗಿಸಿದ ದರ್ಶನ್ ಅಲ್ಲಿಂದ ತೆರಳಿದ ಬಳಿಕ ಕೂಪನ್ ಹಾಕಿದ್ದ ಸಾರ್ವಜನಿಕರಿಗೆ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಲಾಯಿತು. ವಿಜೇತ ಮೂರು ಜನರಿಗೆ ಡೈಮಂಡ್ ನೆಕ್ಲೇಸ್, ಐಫೋನ್ ಹಾಗೂ ಚಿನ್ನದ ನಾಣ್ಯವನ್ನ ನೀಡಲಾಯಿತು.

ಇದೇ ವೇಳೆ ಮಾತನಾಡಿದ ಆಭರಣ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ಮುನೀರ್, ''ರಾಮನಗರದಲ್ಲಿ ಹೆಚ್ಚು ದರ್ಶನ್ ಅಭಿಮಾನಿಗಳಿರುವ ಕಾರಣ ಅವರನ್ನ ಆಹ್ವಾನ ಮಾಡಲಾಯಿತು. ಇನ್ನೂ ಒಂದು ತಿಂಗಳ ಕಾಲ ಹಲವು ವಿಶೇಷ ಆಫರ್ ಗಳನ್ನು ಗ್ರಾಹಕರಿಗೆ ನೀಡಲಾಗುವುದು'' ಎಂದು ತಿಳಿಸಿದರು.

More from Filmibeat

English summary
Kannada Actor Darshan inaugurates MS Gold and Diamond store at Ramanagar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X