For Quick Alerts
  ALLOW NOTIFICATIONS  
  For Daily Alerts

  ದರ್ಶನ್ ವಿವಾದ: ಇಂದ್ರಜಿತ್ ನಂತರ ಜೆಡಿಎಸ್‌ನಿಂದಲೂ ದೂರು ದಾಖಲು

  |

  ನಟ ದರ್ಶನ್ ವಿರುದ್ಧ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಷ್ಟೆಲ್ಲಾ ಆರೋಪ ಮಾಡಲು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಾರಣ. ಇದರ ಹಿಂದೆ ಕುಮಾರಸ್ವಾಮಿ ಇದ್ದಾರೆ ಎಂಬ ಮಾತುಗಳು ಕೇಳಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿವೆ. ಇದಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಮತ್ತು ಕುಮಾರಸ್ವಾಮಿ ಭೇಟಿಯಾಗಿದ್ದ ಫೋಟೋಗಳು ವೈರಲ್ ಆಗಿದ್ದವು. ಆಮೇಲೆ 'ಆ ಫೋಟೋ ಹಳೆಯದ್ದು, ಈ ಘಟನೆಗೆ ನನಗೂ ಸಂಬಂಧವೇ ಇಲ್ಲ' ಎಂದು ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟರು.

  ಇದೀಗ, ಕುಮಾರಸ್ವಾಮಿ ಹೆಸರು ಮತ್ತು ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ದರ್ಶನ್-ಇಂದ್ರಜಿತ್ ವಿವಾದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಟ್ರೋಲ್ ಅಡ್ಮಿನ್‌ಗಳ ವಿರುದ್ಧ ಜೆಡಿಎಸ್ ಕಾನೂನು ಘಟಕ ನಗರ ಪೋಲಿಸ್ ಆಯುಕ್ತರಿಗೆ ದೂರು ನೀಡಿದೆ. ಮುಂದೆ ಓದಿ...

  ಟ್ರೋಲ್ ಅಡ್ಮಿನ್ ವಿರುದ್ಧ ಜೆಡಿಎಸ್ ದೂರು

  ಟ್ರೋಲ್ ಅಡ್ಮಿನ್ ವಿರುದ್ಧ ಜೆಡಿಎಸ್ ದೂರು

  ಇಂದ್ರಜಿತ್ ಲಂಕೇಶ್ ಮತ್ತು ಎಚ್‌ಡಿ ಕುಮಾರಸ್ವಾಮಿ ಭೇಟಿಯಾಗಿರುವ ಫೋಟೋಗಳನ್ನು ಬಳಸಿಕೊಂಡು ಅವಾಚ್ಯ ಶಬ್ದಗಳಿಂದ ಟ್ರೋಲ್ ಮಾಡಲಾಗುತ್ತದೆ. ಟ್ರೋಲ್ ಮಗ ಪೇಜ್ ಅಡ್ಮಿನ್ ವಿರುದ್ಧ ಕ್ರಮ ಜರುಗಿಸಿ ಎಂದು ಜೆಡಿಎಸ್ ಕಾನೂನು ಘಟಕದ ಕಾರ್ಯದರ್ಶಿ ಪ್ರದೀಪ್ ಕುಮಾರ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ದರ್ಶನ್ ಹಿಂಬಾಲಕರು, ರೌಡಿಗಳಿಂದ ಕೊಲೆ ಬೆದರಿಕೆ: ಇಂದ್ರಜಿತ್ ದೂರುದರ್ಶನ್ ಹಿಂಬಾಲಕರು, ರೌಡಿಗಳಿಂದ ಕೊಲೆ ಬೆದರಿಕೆ: ಇಂದ್ರಜಿತ್ ದೂರು

  ಕುಮಾರಸ್ವಾಮಿ ತೇಜೋವಧೆ ಮಾಡಲಾಗುತ್ತಿದೆ

  ಕುಮಾರಸ್ವಾಮಿ ತೇಜೋವಧೆ ಮಾಡಲಾಗುತ್ತಿದೆ

  ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಇಂದ್ರಜಿತ್ ಫೋಟೋ ವೈರಲ್ ಮಾಡಿ ಅವಾಚ್ಯ ಪದ ಬಳಕೆ ಮಾಡಿ ನಿಂದಿಸಿದ್ದಾರೆ. ಸೂತ್ರಧಾರಿ ಮತ್ತು ಪಾತ್ರಧಾರಿ ಎಂಬ ಪದದ ಜೊತೆಗೆ ಅವಾಚ್ಯ ಪದ ಬಳಕೆ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಕುಮಾರಸ್ವಾಮಿ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರನ್ನ ತೇಜೋವಧೆ ಮಾಡಲಾಗಿದೆ. ಟ್ರೋಲ್ ಮಗ ಪೇಜ್ ಅಡ್ಮಿನ್ ವಿರುದ್ಧ ಕ್ರಮ ಜರುಗಿಸುವಂತೆ ಜೆಡಿಎಸ್ ಕಾನೂನು ಘಟಕ ದೂರು ನೀಡಿದೆ.

  ದರ್ಶನ್ ಬೆಂಬಲಿಗರ ವಿರುದ್ಧ ಇಂದ್ರಜಿತ್ ದೂರು

  ದರ್ಶನ್ ಬೆಂಬಲಿಗರ ವಿರುದ್ಧ ಇಂದ್ರಜಿತ್ ದೂರು

  ''ದರ್ಶನ್ ಬೆಂಬಲಿಗರು ಹಾಗೂ ರೌಡಿಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ವಾಟ್ಸ್‌ಆಪ್‌ ಸಂದೇಶಗಳು ಬರುತ್ತಲೇ ಇವೆ. 20-30 ಮೊಬೈಲ್ ಸಂಖ್ಯೆಗಳಿಂದ ಕೊಲೆ ಬೆದರಿಕೆಗಳು ಬಂದಿವೆ'' ಎಂದು ಸೈಬರ್ ಪೊಲೀಸರಿಗೆ ಇಂದ್ರಜಿತ್ ಲಂಕೇಶ್ ದೂರು ನೀಡಿದ್ದಾರೆ.

  ಇಂದ್ರಜಿತ್ ಭೇಟಿಯ ಫೋಟೋ ವೈರಲ್ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?ಇಂದ್ರಜಿತ್ ಭೇಟಿಯ ಫೋಟೋ ವೈರಲ್ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?

  ಅಶ್ಲೀಲ ಚಿತ್ರ ಶೂಟಿಂಗ್ & ಮಾರಾಟ: ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ | Filmibeat Kannada
  ಇಂದ್ರಜಿತ್-ಎಚ್‌ಡಿಕೆ ಫೋಟೋ ಹಳೆಯದು

  ಇಂದ್ರಜಿತ್-ಎಚ್‌ಡಿಕೆ ಫೋಟೋ ಹಳೆಯದು

  "ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ತಳುಕುಹಾಕಿಕೊಂಡಿದ್ದೀರಾ? ನಾನು ರಾಜಕಾರಣ ಮಾಡಿದ್ರೆ ನೇರವಾಗಿ ಮಾಡುತ್ತೇನೆ. ಹಲವಾರು ಬಾರಿ ಇಂದ್ರಜಿತ್ ಭೇಟಿ ಮಾಡಿದ್ದಾರೆ ಸಂದರ್ಶನ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಭೇಟಿ ಮಾಡಿಲ್ಲ" ಎಂದು ಎಚ್‌ಡಿಕೆ ಸ್ಪಷ್ಟನೆ ನೀಡಿದ್ದರು.

  English summary
  Darshan-Indrajit Controversy: Compliant filed for using HD Kumaraswamy name in the case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X