ಮತ್ತೆ ಕ್ಯಾಮರಾ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿದ ದರ್ಶನ್: ಡಿ ಬಾಸ್ ಈಗ ಎಲ್ಲಿದ್ದಾರೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯ ಎನ್ನುವುದು ಎಲ್ಲರಿಗೂ ಎಲ್ಲರಿಗೂ ಗೊತ್ತಿರುವ ವಿಚಾರ. ಸಿನಿಮಾ ಕೆಲಸಗಳ ನಡುವೆಯು ದಚ್ಚು ಪ್ರಾಣಿಗಳ ಜೊತೆ ಹೆಚ್ಚು ಕಾಲಕಳೆಯುತ್ತಾರೆ. ಬಿಡುವಿನ ವೇಳೆಯಲ್ಲಿ ದರ್ಶನ್ ಮೈಸೂರಿನ ತೋಟದ ಮನೆಯಲ್ಲಿ ಕುದುರೆ ಸವಾರಿ, ತೋಟ ನೋಡಿಕೊಳ್ಳುವ ಕೆಲಸ ಮಾಡುತ್ತಿರುತ್ತಾರೆ.

ಇದರ ಜೊತೆಗೆ ದರ್ಶನ್ ಅವರಿಗೆ ವೈಲ್ಡ್ ಲೈಫ್ ಫೋಟೋಗ್ರಫಿ ಅಂದರೆ ತುಂಬ ಇಷ್ಟ. ಆಗಾಗ ಬಿಡುವಿದ್ದಾಗಲೆಲ್ಲ ದರ್ಶನ್ ಕ್ಯಾಮರಾ ಹೆಗಲೇರಿಸಿಕೊಂಡು ಪ್ರಾಣಿ, ಪಕ್ಷಿಗಳನ್ನು ಸೆರೆಹಿಡಿಯಲು ಕಾಡಿಗೆ ಹೋಗುತ್ತಾರೆ. ಇತ್ತೀಚಿಗೆ ಕೀನ್ಯಾಗೆ ಭೇಟಿ ನೀಡಿದ್ದ ದರ್ಶನ್ ಈಗ ಮತ್ತೊಂದು ಸುಂದರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಉತ್ತರಾಖಂಡದಲ್ಲಿ ದರ್ಶನ್

ಉತ್ತರಾಖಂಡದಲ್ಲಿ ದರ್ಶನ್

ದರ್ಶನ್ ಈ ಬಾರಿ ಕ್ಯಾಮರಾ ಹೆಗಲಿಗೇರಿಸಿಕೊಂಡು ಹೋಗಿದ್ದು ಉತ್ತರಾಖಂಡ ರಾಜ್ಯದ ಸತ್ತಾಲ್ ಕಡೆ ಹೊರಟಿದ್ದಾರೆ. ಸತ್ತಾಲ್ ನ ಸುಂದರ ತಾಣಗಳಲ್ಲಿ ಕ್ಯಾಮರಾ ಜೊತೆ ಸುತ್ತಾಡುತ್ತಿರುವ ದರ್ಶನ್ ಪಕ್ಷಿಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಖ್ಯಾತ ಫೋಟೋಗ್ರಾಫರ್ ಲೀಲಾ ಅಪ್ಪಾಜಿ ಜೊತೆ ದರ್ಶನ್ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಿದ್ದಾರೆ.

ಭಾರತದ ಸುಂದರ ತಾಣಗಳಲ್ಲೊಂದು ಸತ್ತಾಲ್

ಭಾರತದ ಸುಂದರ ತಾಣಗಳಲ್ಲೊಂದು ಸತ್ತಾಲ್

ಸತ್ತಾಲ್ ಭಾರತದ ಸುಂದರ ತಾಣಗಳಲ್ಲಿ ಒಂದು. ಓಕ್ ಮತ್ತು ಪೈನ್ ಮರಗಳ ದಡ್ಡ ಕಾಡುಗಳ ನಡುವೆ ಸರೋವರಗಳ ಗುಂಪು ಇದೆ. ಭಾರತದ ಕೆಲವು ಹಾಳಾಗದ ಸುಂದರ ಶುದ್ಧ ಜಲಮೂಲಗಳಲ್ಲಿ ಸತ್ತಾಲ್ ಕೂಡ ಒಂದು. ಏಳು ಸರೋವರಗಳ ನಾಡು ಎಂದೆ ಖ್ಯಾತಿಗಳಿಸಿರುವ ಸತ್ತಾಲ್ ವಲಸೆ ಹಕ್ಕಿಗಳಿಗೆ ಸ್ವರ್ಗವಾಗಿದೆ. ವೈವಿಧ್ಯಮಯವಾದ ಪಕ್ಷಿಗಳನ್ನು ಈ ಕಾಡಿನಲ್ಲಿ ನೋಡಬಹುದು. ಭಾರತದ ಈ ಸುಂದರ ತಾಣದಲ್ಲಿ ಇದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

ವೈಲ್ಡ್ ಲೈಫ್ ಫೋಟೋಗ್ರಾಫರ್ ಜೊತೆ ದಚ್ಚು

ವೈಲ್ಡ್ ಲೈಫ್ ಫೋಟೋಗ್ರಾಫರ್ ಜೊತೆ ದಚ್ಚು

ನಿವೃತ್ತ ಕನ್ನಡ ಪ್ರಾಧ್ಯಾಪಕಿಯಾಗಿ, ವೈಲ್ಡ್ ಲೈಫ್ ಫೋಟೋಗ್ರಾಫರ್ ಲೀಲಾ ಅಪ್ಪಾಜಿ ಅವರು ಕೂಡ ದರ್ಶನ್ ಜೊತೆಯಾಗಿದ್ದಾರೆ. ದರ್ಶನ್ ಫೋಟೋಗ್ರಫಿ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಖ್ಯಾತ ಪಕ್ಷಿ ಫೋಟೋಗ್ರಾಫರ್ ರಾಹುಲ್ ಶರ್ಮಾ, ಸತ್ತಾಲ್ ನ ಇನ್ ಕ್ರೆಡಿಬಲ್ ಬರ್ಡಿಂಗ್ ಕ್ಯಾಂಪ್ ನ ಗೈಡ್ ಶುಭಂ ಕುಮಾರ್ ಕೂಡ ಜೊತೆಯಲ್ಲಿದ್ದಾರೆ.

ಈ ಹಿಂದೆ ಕೀನ್ಯಾ ಪ್ರವಾಸ ಹೋಗಿದ್ದ ದರ್ಶನ್

ಈ ಹಿಂದೆ ಕೀನ್ಯಾ ಪ್ರವಾಸ ಹೋಗಿದ್ದ ದರ್ಶನ್

ಕಳೆದ ಕೆಲವು ತಿಂಗಳ ಹಿಂದೆ ದರ್ಶನ್ ಕೀನ್ಯಾದ Maasai Mara ಎಂಬ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ, ಅಲ್ಲಿನ ಪ್ರಾಣಿಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿದು ತಂದಿದ್ದರು. ದರ್ಶನ್ ಫೋಟೋಗ್ರಫಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸ್ನೇಹಿತರ ಜೊತೆ ತೆರಳಿದ್ದ ದರ್ಶನ್ ಫೋಟೋ ಕ್ಲಿಕ್ಕಿಸುವ ಜೊತೆಗೆ ಸಖತ್ ಎಂಜಾಯ್ ಮಾಡಿದ್ದರು.

ರಾಬರ್ಟ್ ಚಿತ್ರೀಕರಣ ಮುಗಿಸಿರುವ ದರ್ಶನ್

ರಾಬರ್ಟ್ ಚಿತ್ರೀಕರಣ ಮುಗಿಸಿರುವ ದರ್ಶನ್

ದರ್ಶನ್ ಸದ್ಯ ಬಹುನಿರೀಕ್ಷೆಯ ರಾಬರ್ಟ್ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ದರ್ಶನ್ ಕೈಯಲ್ಲಿ ಸದ್ಯ ರಾಜವೀರ ಮದಕರಿ ನಾಯಕ ಚಿತ್ರವಿದೆ. ಈಗಾಗಲೆ ಚಿತ್ರಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಚಿತ್ರೀಕರಣ ಮುಂದಿನ ತಿಂಗಲು 15ರ ನಂತರ ಪ್ರಾರಂಭವಾಗುವ ಸಾಧ್ಯತೆ ಇದೆ. ಹಾಗಾಗಿ ಸದ್ಯ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡಿರುವ ದಚ್ಚು ಕ್ಯಾಮರಾ ಹೆಗಲೇರಿಸಿಕೊಂಡು ಕಾಡಿನ ಕಡೆ ಹೊರಟಿದ್ದಾರೆ.

More from Filmibeat

English summary
Kannada Actor Darshan is capturing beautiful Birds in Uttarakhand at Sattal.
Read more about: darshan ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X