For Quick Alerts
  ALLOW NOTIFICATIONS  
  For Daily Alerts

  ಅಂದು ರಸ್ತೆಯಲ್ಲಿ ನಿಂತು ದರ್ಶನ್ ಸನ್ಮಾನ ನೋಡಿದ ಬಾಲಕ ಈಗ ಸ್ಟಾರ್

  |
  ದರ್ಶನ್ ಏನು ಅನ್ನೋದನ್ನ ರಿವೀಲ್ ಮಾಡಿದ ನಟ | Darshan | Promod | Filmibeat Kannada

  ಪ್ರತಿಯೊಬ್ಬ ನಟನಿಗೂ ಮತ್ತೊಬ್ಬ ನಟ ಸ್ಫೂರ್ತಿ ಆಗಿರ್ತಾರೆ. ಅವರನ್ನು ನೋಡಿದ ಯಾವುದೋ ಒಂದು ಸಂದರ್ಭದಲ್ಲಿ ನಾನು ಕೂಡ ಅವರಂತೆ ನಟ ಆಗ್ಬೇಕು ಎಂಬ ಆಸೆ ಮನದಲ್ಲಿ ಚಿಗುರೊಡೆಯುತ್ತೆ. ಇಂತಹದ್ದೇ ಒಂದು ಸನ್ನಿವೇಶ ಈ ನಟನ ಬಾಳಲ್ಲಿ ಬೆಳಕಾಯಿತು ಎನ್ನಬಹುದು.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ತಮ್ಮ ಊರ ಜನ ಸನ್ಮಾನ ಮಾಡುತ್ತಿದ್ದ ಕ್ಷಣವನ್ನು ನೋಡಿದ, ಈ ಬಾಲಕನಿಗೆ ಸಿನಿಮಾ ನಟ ಆಗಬೇಕು ಎಂಬ ಆಸೆ ಹುಟ್ಟಿತ್ತಂತೆ. ಅದು ಈಗ ನೆರವೇರಿದ್ದು, ಸ್ವತಃ ದರ್ಶನ್ ಅವರ ಸಮ್ಮುಖದಲ್ಲಿ ಈ ಸಂತಸವನ್ನು ಹಂಚಿಕೊಂಡಿದ್ದಾರೆ.

  ಮಂಡ್ಯದಲ್ಲಿ ಮತ್ತೆ ಜೋಡೆತ್ತುಗಳ ಸದ್ದು: ಗೋಶಾಲೆಯ ನೆರವಿಗೆ ನಿಂತ ಯಶ್-ದರ್ಶನ್ ಮಂಡ್ಯದಲ್ಲಿ ಮತ್ತೆ ಜೋಡೆತ್ತುಗಳ ಸದ್ದು: ಗೋಶಾಲೆಯ ನೆರವಿಗೆ ನಿಂತ ಯಶ್-ದರ್ಶನ್

  ಅಷ್ಟಕ್ಕೂ, ಆ ನಟ ಯಾರು? ಅಂದು ಯಾವ ಕಾರಣಕ್ಕೆ ದರ್ಶನ್ ಗೆ ಸನ್ಮಾನ ಮಾಡಿದ್ರು? ಮುಂದೆ ಓದಿ...

  ಪ್ರಮೋದ್ ಗೆ ದರ್ಶನ್ ಸ್ಫೂರ್ತಿ

  ಪ್ರಮೋದ್ ಗೆ ದರ್ಶನ್ ಸ್ಫೂರ್ತಿ

  ಮತ್ತೆ ಉದ್ಬವ ಸಿನಿಮಾದ ನಾಯಕ ನಟ ಪ್ರಮೋದ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. 'ಅಂದು ಕರಿಯ ಸಿನಿಮಾ ಬಿಡುಗಡೆಯಾಗಿದ್ದ ಸಂದರ್ಭ. ನಾನು 7ನೇ ತರಗತಿ. ಟಾಟಾ ಎಸ್ಟೇಟ್ ಕಾರಿನಲ್ಲಿ ದರ್ಶನ್ ಅವರು ಮೈಸೂರಿಗೆ ಹೋಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಕಾರು ಅಡ್ಡ ಹಾಕಿದ ನಮ್ಮ ಊರ ಜನ, ದರ್ಶನ್ ಅವರಿಗೆ ಸನ್ಮಾನ ಮಾಡಿದರು. ಆ ದೃಶ್ಯವನ್ನು ನಾನು ದೂರದಲ್ಲಿ ನಿಂತು ನೋಡುತ್ತಿದ್ದೆ. ಆಗಲೇ ನನ್ನ ಮನಸ್ಸಿನಲ್ಲೂ ನಾನು ಅವರಂತೆ ಆಗ್ಬೇಕು ಎಂಬ ಆಸೆ ಹುಟ್ಟಿಕೊಂಡಿತ್ತು'' ಎಂದು ಪ್ರಮೋದ್ ಘಟನೆಯನ್ನ ಸ್ಮರಿಸಿದ್ದಾರೆ.

  ಪ್ರೀತಿಯ ಅಭಿಮಾನಿಗಳಲ್ಲಿ 'ದಾಸ' ದರ್ಶನ್ ಮಾಡಿದ ಮನವಿ ಏನು.?ಪ್ರೀತಿಯ ಅಭಿಮಾನಿಗಳಲ್ಲಿ 'ದಾಸ' ದರ್ಶನ್ ಮಾಡಿದ ಮನವಿ ಏನು.?

  ಸೆಟ್ ಗೆ ಹೋದಾಗಲೂ ಆ ಪ್ರೀತಿ ಸಿಕ್ಕಿತ್ತು

  ಸೆಟ್ ಗೆ ಹೋದಾಗಲೂ ಆ ಪ್ರೀತಿ ಸಿಕ್ಕಿತ್ತು

  'ಮತ್ತೆ ಉದ್ಬವ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿಕೊಡಿ ಎಂದು ಕೇಳಲು ಅವರ ಸೆಟ್ ಗೆ ಹೋಗಿದ್ವಿ. ಬಹುಶಃ ಅವರ ಸೆಟ್ ನಲ್ಲಿ ಸುಮಾರು ಸಾವಿರ ಜನ ಇರ್ತಾರೆ. ನಮ್ಮಂತವರು ಸಹಾಯ ಕೇಳುವುದಕ್ಕೆ ಹೋಗಿರುತ್ತೇವೆ. ನಮ್ಮನ್ನು ಕರೆದು, ಸ್ವತಃ ಕೈಯಾರೆ ಊಟ ಬಿಡಿಸದರು. ಸರ್ ಈ ರೀತಿ ಟ್ರೈಲರ್ ಒಂದು ಲಾಂಚ್ ಮಾಡಬೇಕಿತ್ತು ಎಂದು ಕೇಳಿದ್ದಕ್ಕೆ ಒಂದೇ ಮಾತಿನಲ್ಲಿ ಬರ್ತೀನಿ ಅಂತ ಹೇಳಿದ್ರು'

  'ರಾಬರ್ಟ್' ಪೋಸ್ಟರ್ ನಲ್ಲಿ ಕಣ್ಣಿಗೆ ಬಿದ್ದ ಮತ್ತೊಬ್ಬ ಸ್ಟಾರ್ ನಟ: ಯಾರು ಗುರುತಿಸಿ?'ರಾಬರ್ಟ್' ಪೋಸ್ಟರ್ ನಲ್ಲಿ ಕಣ್ಣಿಗೆ ಬಿದ್ದ ಮತ್ತೊಬ್ಬ ಸ್ಟಾರ್ ನಟ: ಯಾರು ಗುರುತಿಸಿ?

  ಅತಿ ಹೆಚ್ಚು ಜನ ಪ್ರೀತಿಸುವ ನಟ

  ಅತಿ ಹೆಚ್ಚು ಜನ ಪ್ರೀತಿಸುವ ನಟ

  'ಕರ್ನಾಟಕದಲ್ಲಿ ಅತಿ ಹೆಚ್ಚು ಜನರು ಪ್ರೀತಿಸುವ ವ್ಯಕ್ತಿಯೊಬ್ಬ ಇದ್ದರೆ ಅದು ದರ್ಶನ್ ಸರ್' ಎಂದು ಪ್ರಮೋದ್ ಸಂತಸ ಹಂಚಿಕೊಂಡರು. ಅಂದ್ಹಾಗೆ, ಪ್ರಮೋದ್ ಮೂಲತಃ ಮದ್ದೂರಿನ ಯುವಕ. ರಸ್ತಯ ಪಕ್ಕದಲ್ಲಿ ಪ್ರಮೋದ್ ಅವರದ್ದೊಂದು ಎಳನೀರು ಮಂಡಿ ಇದೆ.

  ಪ್ರಮೋದ್ ಕುರಿತು

  ಪ್ರಮೋದ್ ಕುರಿತು

  ಪ್ರಮೋದ್ ಅವರು ಪುನರ್ ವಿವಾಹ, ಚುಕ್ಕಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪಂಜು ಎಂದು ಖ್ಯಾತಿ ಗಳಿಸಿಕೊಂಡಿದ್ದರು. 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ನಾಯಕ ನಟನಾದ ಪ್ರಮೋದ್ ನಂತರ ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು. ಈಗ ಮತ್ತೆ ಉದ್ಬವ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Challenging star darshan is inspiration for young actor promod. he is acting in matte udbhava movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X