For Quick Alerts
  ALLOW NOTIFICATIONS  
  For Daily Alerts

  ''ದರ್ಶನ್ ಕನ್ನಡದ ರಜನಿಕಾಂತ್'' ಎಂದ ಸ್ಟಾರ್ ನಟ

  By Bharath Kumar
  |
  ದರ್ಶನ್ ಕನ್ನಡದ ರಜನಿಕಾಂತ್'' ಎಂದ ಸ್ಟಾರ್ ನಟ | Filmibeat Kannada

  ಕನ್ನಡ ಇಂಡಸ್ಟ್ರಿಯ ಮಾರುಕಟ್ಟೆ ದಿನೇ ದಿನೇ ಹೆಚ್ಚುತಿದೆ. ಕನ್ನಡ ನಟರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಕೇವಲ ತೆಲುಗು, ತಮಿಳು, ಹಿಂದಿ ನಟರು ಮಾತ್ರವಲ್ಲ ಕನ್ನಡದಲ್ಲೂ ಸೂಪರ್ ನಟರಿದ್ದಾರೆ ಎಂಬುದು ಸಾಬೀತಾಗಿದೆ.

  ಸುದೀಪ್, ದರ್ಶನ್, ಪುನೀತ್, ಯಶ್ ಸೇರಿದಂತೆ ಹಲವು ಸ್ಟಾರ್ ನಟರು ಬೇರೆ ಬೇರೆ ಭಾಷೆಯ ಜನರನ್ನ ನಮ್ಮ ಸ್ಯಾಂಡಲ್ ವುಡ್ ಇಂಡಸ್ಟ್ರಿ ಕಡೆ ನೋಡುವಂತೆ ಮಾಡುತ್ತಿದ್ದಾರೆ.

  ಇತ್ತೀಚಿನ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ನವರಸ ನಾಯಕ ಜಗ್ಗೇಶ್ ಕನ್ನಡ ಕಲಾವಿದರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ 'ದರ್ಶನ್ ಕನ್ನಡದ ರಜನಿಕಾಂತ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಈಗ ಡಿ ಬಾಸ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

  ಅಷ್ಟಕ್ಕೂ, ಜಗ್ಗೇಶ್ ಅವರು ಈ ಹೇಳಿಕೆ ನೀಡುವುದಕ್ಕೂ ಒಂದು ಕಾರಣ ಇದೆ. ದರ್ಶನ್ ಅವರನ್ನ ರಜನಿಕಾಂತ್ ಗೆ ಹೋಲಿಸಿದ್ದೇಕೆ.? ಎಂದು ತಿಳಿಯಲು ಮುಂದೆ ಓದಿ....

  ದರ್ಶನ್ ಕನ್ನಡದ ರಜನಿಕಾಂತ್.!

  ದರ್ಶನ್ ಕನ್ನಡದ ರಜನಿಕಾಂತ್.!

  ರಜನಿಕಾಂತ್ ಭಾರತ ಚಿತ್ರರಂಗದ ಸೂಪರ್ ಸ್ಟಾರ್. ಅಪಾರ ಅಭಿಮಾನಿಗಳನ್ನ ಹೊಂದಿರುವ ನಟ. ಈ ನಟನಿಗೆ ಕನ್ನಡದ ನವರಸ ನಾಯಕ ಜಗ್ಗೇಶ್ ಕೂಡ ಅಭಿಮಾನಿ ಎಂಬುದು ಗಮನಿಸಬೇಕು. ರಜನಿಕಾಂತ್ ಅವರ ಬಗ್ಗೆ ಅಪಾರ ಅಭಿಮಾನಿ ಹೊಂದಿರುವ ಜಗ್ಗೇಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ರಜನಿಕಾಂತ್ ಗೆ ಹೋಲಿಸಿದ್ದಾರೆ. ''ದರ್ಶನ್ ಕನ್ನಡದ ರಜನಿಕಾಂತ್'' ಎಂದಿದ್ದಾರೆ.

  ದರ್ಶನ್ ಒಪನ್ ಅಪ್ ಆಗ್ಬೇಕು

  ದರ್ಶನ್ ಒಪನ್ ಅಪ್ ಆಗ್ಬೇಕು

  ''ದರ್ಶನ್ ಒಂದು ರೀತಿಯಲ್ಲಿ ನನ್ನ ಕ್ಯಾರೆಕ್ಟರ್. ನಾನಾದ್ರು ಸ್ವಲ್ಪ ನೇರ ನುಡಿ ಅಂದು ಬಿಡುತ್ತೇನೆ. ಆದ್ರೆ, ಅವನು ಯಾರಿಗೂ ಏನೂ ಅನ್ನಲ್ಲ. ಒಬ್ಬನೇ ನೋವು ತಿಂತಾನೆ ಒಳಗೆ ಇಟ್ಕೊಂಡು. ನನ್ನ ಪ್ರಕಾರ ಅವನು ಒಪನ್ ಅಪ್ ಆದ್ರೆ, ಅವನು ಕನ್ನಡದ ರಜನಿಕಾಂತ್'' ಎಂದು ಜಗ್ಗೇಶ್ ಅವರು ಹೇಳಿದ್ದಾರೆ.

  'ನಟ ಸಾರ್ವಭೌಮ' ಪುನೀತ್ ಗೆ ಶುಭಕೋರಿದ ಜಗ್ಗೇಶ್

  ಕನ್ನಡದಲ್ಲಿ 100 ಕೋಟಿ ಕ್ಲಬ್ ಸೇರೋ ತಾಕತ್ ಇದೆ

  ಕನ್ನಡದಲ್ಲಿ 100 ಕೋಟಿ ಕ್ಲಬ್ ಸೇರೋ ತಾಕತ್ ಇದೆ

  ''ಕರೆಕ್ಟ್ ಆಗಿ ದರ್ಶನ್ ನ ಹಾಕ್ಕೊಂಡು ಸಿನಿಮಾ ಮಾಡಿದ್ರೆ, ಕನ್ನಡದಲ್ಲಿ ಸಲ್ಮಾನ್ ಖಾನ್ ರೇಂಜ್ ಗೆ, 100 ಕೋಟಿ ಕ್ಲಬ್ ಗೆ ದರ್ಶನ್ ಹೋಗ್ತಾರೆ'' ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಜಗ್ಗೇಶ್ ಅವರ ಈ ಮಾತುಗಳು ಕನ್ನಡ ನಟರಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ಶಕ್ತಿ ತುಂಬಿದಂತಾಗಿದೆ. ಇದುವರೆಗೂ 100 ಕೋಟಿ ಕ್ಲಬ್ ಗೆ ಕನ್ನಡ ಸಿನಿಮಾಗಳು ಸೇರಿಲ್ಲ. ಮುಂದಿನ ದಿನಗಳಲ್ಲಿ ಇದು ಸಾಧ್ಯ ಎಂದು ಜಗ್ಗೇಶ್ ಭವಿಷ್ಯ ನುಡಿದಿದ್ದಾರೆ.

  'ದೊಡ್ಮನೆ ಹುಡುಗ'ನ ಬೆನ್ನಿಗೆ ನಿಂತಿರುವ 'ಯಜಮಾನ' ದರ್ಶನ್

  ದರ್ಶನ್ ಏನು ಬದಲಾವಣೆ ಮಾಡ್ಬೇಕು.?

  ದರ್ಶನ್ ಏನು ಬದಲಾವಣೆ ಮಾಡ್ಬೇಕು.?

  ಇನ್ನು ದರ್ಶನ್ ಅವರು ಏನಾದರೂ ಬದಲಾವಣೆ ಮಾಡಿಕೊಳ್ಳಬೇಕಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಗ್ಗೇಶ್ ''ದರ್ಶನ್ ಸ್ವಲ್ಪ ಬೆರಿಯಬೇಕು. ಹಿಂಜರಿಯುತ್ತಾರೆ. ಯಾಕಂದ್ರೆ, ನನಗೆ ಅನಿಸಿದ್ದೇನಂದ್ರೆ, ಅವರ ನಡೆಯನ್ನ ಕಾಂಟ್ರವರ್ಸಿ ಮಾಡಿಬಿಡ್ತಾರೆ ಎಂಬ ಬೇಜಾರು ಅವರಲ್ಲಿದೆ'' ಎಂದರು.

  English summary
  Kannada actor jaggesh says ''Challening star darshan is like Karnataka rajinikanth'' in tv interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X