ವನ್ಯ ಜೀವಿಗಳ ಸಂರಕ್ಷಣೆಗೆ ಮುಂದಾದ ಡಿ ಬಾಸ್
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೇವಲ ಸಿನಿಮಾಗಳಲ್ಲಿ ಉತ್ತಮ ಸಂದೇಶ ನೀಡುವುದಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಜೋಪಾನ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಡು, ವನ್ಯಜೀವಿಗಳನ್ನು ರಕ್ಷಣೆ ಮಾಡಿ ಎಂದು ತಮ್ಮದೇ ರೀತಿಯಲ್ಲಿ ಜನರಿಗೆ ಸಂದೇಶ ಸಾರುತ್ತಿದ್ದಾರೆ.
ಈಗಾಗಲೇ ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ಡಿ ಬಾಸ್, ವನ್ಯ ಜೀವಿಗಳ ಸಂರಕ್ಷಣೆ ಹಾಗೂ ಅವುಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಸಿನಿಮಾ ಚಿತ್ರೀಕರಣದಲ್ಲಿ ಬಿಡುವು ಮಾಡಿಕೊಂಡು ಕಾಡುಗಳಲ್ಲಿ ಸಂಚಾರ ಮಾಡಲು ಆರಂಭಿಸಿದ್ದಾರೆ.
ಕೈ ನಲ್ಲೊಂದು ಕ್ಯಾಮೆರಾ ಹಿಡಿದು ಕಾಡು ಸುತ್ತುತ್ತಿರುವ ದರ್ಶನ್ ಒಂದೊಳ್ಳೆ ಕೆಲಸಕ್ಕಾಗಿ ತಮ್ಮ ಸಮಯವನ್ನು ಮೀಸಲಿಡುತ್ತಿದ್ದಾರೆ. ದರ್ಶನ್ ಕ್ಯಾಮೆರಾ ದಲ್ಲಿ ಕ್ಲಿಕ್ಕಿಸಿದ ಪ್ರತಿ ಫೋಟೋಗಳಿಂದಲೂ ಪ್ರಾಣಿಗಳ ಸಂರಕ್ಷಣೆಗೆ ಸಹಾಯವಾಗುತ್ತಿದೆ. ಹಾಗಾದರೆ ದರ್ಶನ್ ಕ್ಲಿಕ್ಕಿಸಿದ ಫೋಟೋಗಳಿಂದ ಆಗುತ್ತಿರುವ ಉಪಯೋಗವಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ದರ್ಶನ್ ಅವರಿಂದ ವನ್ಯ ಜೀವಿ ಸಂರಕ್ಷಣೆ ಅಭಿಯಾನ
ಚಾಲೆಂಜಿಂಗ್ ಸ್ಟಾರ್ ದರ್ಶನ್ ವನ್ಯ ಜೀವಿ ಸಂರಕ್ಷಣೆಗೆ ಮುಂದಾಗಿದ್ದಾರೆ. ಚಿತ್ರೀಕರಣದಲ್ಲಿ ಬಿಡುವಿದ್ದಾಗ ಕಾಡುಗಳಿಗೆ ಭೇಟಿ ಕೊಟ್ಟು ಪ್ರಾಣಿಗಳ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾರೆ.

ಮಾರಾಟದಿಂದ ಬಂದ ಹಣ ವನ್ಯಜೀವಿ ಸಂರಕ್ಷಣೆಗೆ
ದರ್ಶನ್ ತಮ್ಮ ಕ್ಯಾಮೆರಾದಲ್ಲಿ ಪ್ರಾಣಿಗಳ ಚಿತ್ರವನ್ನು ಸೆರೆ ಹಿಡಿಯುತ್ತಿದ್ದಾರೆ. ಆ ಫೋಟೋಗಳ ಮಾರಾಟವನ್ನು ಏರ್ಪಡಿಸಿ ಅದರಿಂದ ಬರುವ ಹಣವನ್ನು ವನ್ಯಜೀವಿ ಸಂರಕ್ಷಣೆಗೆ ಉಪಯೋಗ ಮಾಡುವ ಆಲೋಚನೆ ಮಾಡಿದ್ದಾರೆ ಚಾಲೆಂಜಿಂಗ್ ಸ್ಟಾರ್.

ಹೊಸ ಕ್ಯಾಮೆರಾ ಖರೀದಿ ಮಾಡಿದ ದರ್ಶನ್
ಇದೇ ಉದ್ದೇಶಕ್ಕಾಗಿ ದರ್ಶನ್ ಹೊಸ ಕ್ಯಾಮೆರಾ ಗಳನ್ನು ಖರೀದಿ ಮಾಡಿದ್ದಾರೆ. ಬಿಡುವಿದ್ದಾಗ ಕ್ಯಾಮೆರಾ ತೆಗೆದುಕೊಂಡು ಜೀಪ್ ಹತ್ತಿ ವೈಲ್ಡ್ ಲೈಫ್ ಸಫಾರಿಗೆ ಹೋಗುವ ಅಭ್ಯಾಸ ಮಾಡಿಕೊಂಡಿದ್ದಾರೆ.

ಹೊಸ ಅಭಿಯಾನ ಆರಂಭಿಸಿದ ದರ್ಶನ್
ದರ್ಶನ್ ಅವರ ಕ್ಯಾಮೆರಾ ಕಣ್ಣಿಗೆ ಕಾಡಿನ ಸಾಕಷ್ಟು ಪ್ರಾಣಿಗಳು ಸೆರೆಸಿಕ್ಕಿವೆ. ಇದೇ ಸಮಯದಲ್ಲಿ ಡಿ ಬಾಸ್ ಕಾಡೆಮ್ಮೆ ಸಂರಕ್ಷಿಸಿ ಎನ್ನುವ ಅಭಿಯಾನವನ್ನು ಆರಂಭಿಸಿದ್ದಾರೆ.

ಮಕ್ಕಳ ಜೊತೆ ಸಮಯ ಕಳೆದ ದರ್ಶನ್
ಕಾಡಿನಲ್ಲಿ ಪ್ರಾಣಿಗಳ ಫೋಟೋ ತೆಗೆದುಕೊಂಡು ಸಂಚಾರ ಮಾಡುವ ಸಮಯದಲ್ಲಿ ಕಾಡಿನಲ್ಲಿ ವಾಸವಿರುವ ಜನರನ್ನು ಹಾಗೂ ಮಕ್ಕಳನ್ನು ದರ್ಶನ್ ಭೇಟಿ ಮಾಡಿದ್ದಾರೆ. ಮಕ್ಕಳ ಜೊತೆ ಕಾಲ ಕಳೆದು ಮಕ್ಕಳಿಗೆ ತಿಂಡಿ ತಿನಿಸುಗಳನ್ನು ಹಂಚಿದ್ದಾರೆ.


Click it and Unblock the Notifications