Don't Miss!
- Sports
ಶತಕದ ಮೇಲೆ ಶತಕ ಬಾರಿಸುತ್ತಿರುವ ಪೂಜಾರ: ಇಂಗ್ಲೆಂಡ್ನಲ್ಲಿ ತನ್ನ ಮತ್ತೊಂದು ಮುಖ ತೋರಿಸಿದ ಭಾರತೀಯ!
- News
ಮಂಗೇಶ್, ಲೀಲಾಬಾಯಿ, ವೆಂಕಣ್ಣ, ಸುಬ್ಬಯ್ಯ- ಉ.ಕ. ಸ್ವಾತಂತ್ರ್ಯ ಹೋರಾಟಗಾರರ ರೋಚಕ ಕಥೆಗಳು
- Technology
ಭಾರತದಲ್ಲಿ ರಿಯಲ್ಮಿ 9i 5G ಫೋನ್ ಬಿಡುಗಡೆ ದಿನಾಂಕ ಬಹಿರಂಗ!
- Finance
ಉದ್ಯಮಿ ರಾಕೇಶ್ ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ? ಮೌಲ್ಯ ಎಷ್ಟು?
- Automobiles
ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಸಿಬಿ300ಎಫ್ ಬೈಕ್ ರಿವ್ಯೂ
- Lifestyle
ಆಗಸ್ಟ 14ರಿಂದ ಆಗಸ್ಟ 20ರ ವಾರ ಭವಿಷ್ಯ: ಮಿಥುನ, ಕರ್ಕ, ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಚಾರ್ಲಿಯ ಹಳೆ ಗೆಳೆಯ ದರ್ಶನ್: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್!
ನಿಧಾನವಾಗಿ ಆದರೂ ಕನ್ನಡದ ಸಿನಿಮಾ ದೇಶದೆಲ್ಲೆಡೆ ಸದ್ದು ಮಾಡುವುದಕ್ಕೆ ಆರಂಭ ಮಾಡಿದೆ. '777 ಚಾರ್ಲಿ' ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆಯುತ್ತಿದೆ. ಮೌತ್ ಪಬ್ಲಿಸಿಟಿಯಿಂದ ಸಿನಿಮಾ ನೋಡಲು ಜನರು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ.
'777 ಚಾರ್ಲಿ' ಸಿನಿಮಾ ನೋಡಿದವರು ಥಿಯೇಟರ್ನಿಂದ ಸುಮ್ಮನೆ ಹೊರಬರುತ್ತಿಲ್ಲ. ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರ ಕಣ್ಣುಗಳು ಒದ್ದೆಯಾಗುತ್ತಿವೆ. ಮಕ್ಕಳೊಂದಿಗೆ ಕುಟುಂಬ ಸಮೇತ ಚಾರ್ಲಿಯನ್ನು ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ನಡುವಿನ ಬಾಂಧವ್ಯದ ಕಂಡು ಮೆಚ್ಚಿಕೊಳ್ಳುತ್ತಿದ್ದಾರೆ.
'777
ಚಾರ್ಲಿ'
ಸಿನಿಮಾಗೆ
ಶ್ವಾನ
ಪಡೆದ
ಸಂಭಾವನೆ
ಯಾವ
ಸ್ಟಾರ್
ನಟನಿಗೂ
ಕಮ್ಮಿಯಿಲ್ಲ!
ಒಂದ್ಕಡೆ ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಬಗ್ಗೆ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದರೆ, ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಶ್ವಾನದ ವಿಡಿಯೋವೊಂದು ಸದ್ದು ಮಾಡುತ್ತಿದೆ. ದರ್ಶನ್ ಅಭಿಮಾನಿಗಳು ಚಾರ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಳೆ ಗೆಳೆಯ ಎಂದು ವೈರಲ್ ಮಾಡುತ್ತಿದೆ. ಅಸಲಿಗೆ ಆ ವಿಡಿಯೋ ದಲ್ಲಿ ಅಂತಹದ್ದೇನಿದೆ? ಅನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ದರ್ಶನ್ ಹಳೆ ಗೆಳೆಯ 'ಚಾರ್ಲಿ'
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಪ್ರಾಣಿಗಳೆಂದರೆ ಅದೆಷ್ಟು ಪ್ರೀತಿ ಅನ್ನುವುದು ಗೊತ್ತಿರುವ ವಿಚಾರವೇ. ಆದರೆ, ಚಾರ್ಲಿಗೂ ದರ್ಶನ್ಗೂ ಏನು ಸಂಬಂಧ ಅನ್ನುವ ಕುತೂಹಲ ಮೂಡದೆ ಇರುವುದಿಲ್ಲ. ಅಂದ್ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಚಾರ್ಲಿ ಚಾಲೆಂಜಿಂಗ್ಸ್ಟಾರ್ ದರ್ಶನ್ ಅವರ ಹಳೆಯ ಗೆಳೆಯ ಎಂದು ಹೇಳುತ್ತಿದ್ದಾರೆ.
ವೀಕೆಂಡ್
ಬಾಕ್ಸಾಫೀಸ್ನಲ್ಲಿ
'777
ಚಾರ್ಲಿ'
ಜೊತೆ
ಗೆದ್ದು
ಬೀಗಿದ
ಸಿನಿಮಾಗಳ
ಕಲೆಕ್ಷನ್
ಎಷ್ಟು?

ಶ್ವಾನದೊಂದಿಗೆ ದರ್ಶನ್ ಆಟ
ಹಲವು ವರ್ಷಗಳ ಹಿಂದೆ ವಿಡಿಯೋವೊಂದು ದರ್ಶನ್ ಅಭಿಮಾನಿಗಳಿಗೆ ಇಷ್ಟ ಆಗಿತ್ತು. ಅದೇ ವಿಡಿಯೋ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. '777 ಚಾರ್ಲಿ' ಸದ್ದು ಮಾಡುತ್ತಿರುವ ಬೆನ್ನಲ್ಲೇ ಹಳೆ ವಿಡಿಯೋ ಕೂಡ ಸದ್ದು ಮಾಡುತ್ತಿದೆ. ಐರಾವತ ಸಿನಿಮಾದ ಶೂಟಿಂಗ್ ವೇಳೆ ದರ್ಶನ್ ಶ್ವಾನಕ್ಕೆ ಪಾಠ ಹೇಳಿಕೊಟ್ಟ ವಿಡಿಯೋ ವೈರಲ್ ನಾಲ್ಕೈದು ವರ್ಷಗಳ ಹಿಂದೆನೇ ಸದ್ದು ಮಾಡಿತ್ತು. ಈ ಚಾರ್ಲಿ ಹವಾ ಹೆಚ್ಚಾದಂತೆ ಮತ್ತೆ ಈ ವಿಡಿಯೋ ವೈರಲ್ ಆಗುತ್ತಿದೆ.
|
ಶ್ವಾನಕ್ಕೆ ಚಾರ್ಲಿ ಬಿಸ್ಕೆಟ್
ಈ ವಿಡಿಯೋದಲ್ಲಿ ದರ್ಶನ್ ಚಾರ್ಲಿಯಂತಿರುವ ಶ್ವಾನಕ್ಕೆ ಬಿಸ್ಕೆಟ್ ತಿನ್ನಿಸುತ್ತಾ ಪಾಠ ಹೇಳಿಕೊಡುವ ವಿಡಿಯೋ ಅದು. ನಾಯಿಯೊಂದಿಗೆ ತಾನೂ ಕೆಲ ಹೊತ್ತು ಫ್ರಿಯಾಗಿ ಕಾಲ ಕಳೆದ ವಿಡಿಯೋ. ಶ್ವಾನಕ್ಕೆ ತಮಾಷೆ ಮಾಡುವ ದರ್ಶನ್ ವಿಡಿಯೋ ಕಂಡ ಫ್ಯಾನ್ಸ್ ಖುಷಿಯಾಗಿದ್ದಾರೆ. ಚಾರ್ಲಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ನೊಂದಿಗೆ ಕನೆಕ್ಟ್ ಮಾಡುತ್ತಿದ್ದಾರೆ. ಇದೇ ವಿಡಿಯೋ ಈ ವೈರಲ್ ಆಗಿದೆ.
ರಕ್ಷಿತ್
ಶೆಟ್ಟಿಯ
'777
ಚಾರ್ಲಿ'
ನೋಡಿ
ಶ್ವಾನ
ಪ್ರಿಯೆ
ರಮ್ಯಾ
ಭಾವನಾತ್ಮಕವಾಗಿ
ಹೇಳಿದ್ದೇನು?

ಚಾರ್ಲಿ 5ನೇ ದಿನದ ಕಲೆಕ್ಷನ್ ಎಷ್ಟು?
'777 ಚಾರ್ಲಿ' ಸಿನಿಮಾ ಬಾಕ್ಸಾಫೀಸ್ನಲ್ಲಿ ಕ್ಲಾಸಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ 5 ದಿನಗಳಲ್ಲಿ 4 ಕೋಟಿ ರೂ. ಲೂಟಿ ಮಾಡಿದ್ದು, ಸಿನಿಮಾ 32.7 ಕೋಟಿ ರೂ. ಗಳಿಸಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ನಲ್ಲೂ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಕೂಡ '777 ಚಾರ್ಲಿ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಕಾರಣಕ್ಕೆ ಸಿನಿಮಾ ಮುಂದಿನ ದಿನಗಳಲ್ಲಿ ಬಾಕ್ಸಾಫೀಸ್ನಲ್ಲಿ ಯಾವ ರೀತಿ ಪ್ರತಿಕ್ರಿಯೆ ನೋಡಿತ್ತೆ ಎನ್ನುವುದು ಕುತೂಹಲ ಕೆರಳಿಸಿದೆ.