ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ದರ್ಶನ್ ರೆಡಿ.!
Recommended Video

ಮಂಡ್ಯ ಲೋಕಸಭೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಸ್ಯಾಂಡಲ್ ವುಡ್ ಸ್ಟಾರ್ ಗಳು ಎಂಟ್ರಿ ಕೊಟ್ಟ ಮೇಲಂತೂ ಸುಮಲತಾ ವರ್ಸಸ್ ನಿಖಿಲ್ ಕುಮಾರ್ ನಡುವಿನ ಫೈಟ್ ಹೆಚ್ಚಾಗುವ ಸೂಚನೆ ಸಿಕ್ಕಿದೆ.
ಯಾಕಂದ್ರೆ, ಸುಮಲತಾ ಪರ ಪ್ರಚಾರ ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ಬರ್ತಿದ್ದಾರೆ. ಹಾಗಾಗಿ, ಸಿಎಂ ಪುತ್ರನ ಎದುರು ಸ್ಯಾಂಡಲ್ ವುಡ್ ನ ಇಬ್ಬರು ಬಿಗ್ ಸ್ಟಾರ್ ಪ್ರಚಾರ ಮಾಡಲಿದ್ದಾರೆ.
ಅರೇ, ನಿಖಿಲ್ ಕುಮಾರ್ ಕೂಡ ಸಿನಿಮಾ ಇಂಡಸ್ಟ್ರಿಯವರೇ. ಅವರ ಪರವಾಗಿ ಯಾಕೆ ಪ್ರಚಾರ ಮಾಡಲ್ಲ ಎಂದು ನಟ ದರ್ಶನ್ ಅವರಿಗೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಎದುರಾಯ್ತು. ಇದಕ್ಕೆ ಉತ್ತರಿಸುವ ವೇಳೆ ಬೇಕು ಅಂದ್ರೆ ಪ್ರಜ್ವಲ್ ಪರ ಪ್ರಚಾರ ಮಾಡ್ತೀನಿ ಅಂದ್ರು. ಮುಂದೆ ಓದಿ.....

ಒಂದು ಕ್ಷೇತ್ರದಲ್ಲಿ ಒಬ್ಬರ ಪರ ಮಾತ್ರ ಪ್ರಚಾರ
ನಟ ದರ್ಶನ್ ಈ ಹಿಂದಿನ ಚುನಾವಣೆಗಳಲ್ಲೂ ಪ್ರಚಾರ ಮಾಡಿದ್ದಾರೆ. ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ರೆ, ಇನ್ನೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ರೆ. ಯಾಕೆ ಹೀಗೆ ಅಂತ ಕೇಳಿದ್ರೆ, ''ನನಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ಒಳ್ಳೆಯ ವ್ಯಕ್ತಿಗಳ ಪರ ನಾನು ಪ್ರಚಾರ ಮಾಡ್ತೀನಿ'' ಎಂದಿದ್ದರು. ಹಾಗೆ, 'ಮಂಡ್ಯದಲ್ಲೂ ಒಬ್ಬರ ಪರವಾಗಿಯೇ ಪ್ರಚಾರ ಮಾಡೋಕೆ ಆಗೋದು' ಎಂದು ದರ್ಶನ್ ತಿಳಿಸಿದರು.

ಪ್ರಜ್ವಲ್ ಪರ ಬೇಕಾದ್ರೆ ಪ್ರಚಾರ ಮಾಡ್ತೀನಿ
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ''ಒಂದು ವೇಳೆ ಪ್ರಜ್ವಲ್ ಕರೆದರೇ ಹಾಸನದಲ್ಲಿ ಅವರ ಪರ ನಾನು ಪ್ರಚಾರ ಮಾಡ್ತೀನಿ'' ಎಂದು ದರ್ಶನ್ ಹೇಳಿದ್ರು. ಅಲ್ಲಿಗೆ ದರ್ಶನ್ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಎಂಬುದು ಖಾತ್ರಿಯಾಯಿತು.

ದಾಸನ ಆಫರ್ ಗೆ ಪ್ರಜ್ವಲ್ ಏನಂತಾರೆ
ಇಂದು ಸುಮಲತಾ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ಈ ಹೇಳಿಕೆ ನೀಡಿದ್ರು. ದಾಸನ ಈ ಮಾತು ಕೇಳಿ ಪ್ರಜ್ವಲ್ ರೇವಣ್ಣ ಏನು ಹೇಳಬಹುದು ಎಂಬ ಕುತೂಹಲ ಈಗ ಕಾಡುತ್ತಿದೆ. ದರ್ಶನ್ ಜೊತೆಗಿನ ಸ್ನೇಹವನ್ನ ಪರಿಗಣಿಸಿ ಆಹ್ವಾನ ಕೊಡ್ತಾರಾ ಅಥವಾ ಮಂಡ್ಯದಲ್ಲಿ ಸಹೋದರ ವಿರುದ್ಧ ನಿಂತಿರುವ ಕಾರಣ 'ಬೇಡ' ಎಂದು ಹೇಳ್ತಾರಾ ಕಾದು ನೋಡೋಣ.

ಮಂಡ್ಯ ಫಲಿತಾಂಶವೇನು?
ಇದೆಲ್ಲದರ ನಡುವೆ ಮಂಡ್ಯ ಲೋಕಸಭೆ ಕ್ಷೇತ್ರ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಸ್ಯಾಂಡಲ್ ವುಡ್ ಸ್ಟಾರ್ ಗಳು ಒಂದು ಕಡೆಯಾದ್ರೆ, ಇನ್ನೊಂದು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು. ಇವರಿಬ್ಬರ ಜಟಾಪಟಿಯಲ್ಲಿ ನಿಖಿಲ್ ಕುಮಾರ್ ಮತ್ತು ಸುಮಲತಾ ಇಬ್ಬರಲ್ಲಿ ಯಾರಿಗೆ ಗೆಲುವು?


Click it and Unblock the Notifications











