ದರ್ಶನ್ ಕನ್ನಡದ 'ಸಲ್ಮಾನ್ ಖಾನ್' ಎಂದ ದಕ್ಷಿಣದ ಖ್ಯಾತ ಖಳನಟ

ಸ್ಯಾಂಡಲ್ ವುಡ್ ಪಾಲಿಗೆ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರುನಾಡ ರತ್ನ ಹೀಗೆಲ್ಲಾ ಅಭಿಮಾನಿಗಳಿಂದ ಕರೆಸಿಕೊಳ್ಳುವ ದರ್ಶನ್ ಅಪ್ಪಟ ಕನ್ನಡದ ಕಲಾವಿದ. ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ 'ದಾಸ' ಪರಭಾಷೆಯ ಕಡೆ ಮುಖ ಮಾಡಿಲ್ಲ. ಆದ್ರೂ ಬೇರೆ ಇಂಡಸ್ಟ್ರಿಯವರು ಇಷ್ಟಪಡುವ ನಟ.

ದರ್ಶನ್ ಅವರನ್ನ ಬೇರೆ ಇಂಡಸ್ಟ್ರಿಯ ನಟರೊಂದಿಗೆ ಹೋಲಿಸುವುದು ಸಾಮಾನ್ಯ. ದರ್ಶನ್ ಕನ್ನಡದ ಪ್ರಭಾಸ್, ದರ್ಶನ್ ಕನ್ನಡದ ರಜನಿಕಾಂತ್, ದರ್ಶನ್ ಕನ್ನಡದ ಸಲ್ಮಾನ್ ಖಾನ್.....ಹೀಗೆ, ದಾಸನ ವ್ಯಕ್ತಿತ್ವ ಮತ್ತು ನಟನೆಯನ್ನ ಕಂಡು ಹೋಲಿಕೆ ಮಾಡಿರುವ ಉದಾಹರಣೆ ಸಾಕಷ್ಟಿದೆ.

ಈಗ ಲೇಟೆಸ್ಟ್ ಆಗಿ ದರ್ಶನ್ ಅವರನ್ನ ಬಾಲಿವುಡ್ ಬಾಕ್ಸ್ ಅಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಗೆ ಹೋಲಿಕೆ ಮಾಡಿದ್ದಾರೆ ದಕ್ಷಿಣ ಭಾರತದ ಖ್ಯಾತ ಖಳನಟ. ಡಿ ಬಾಸ್ ಗೆ ಸಲ್ಲುನ ಹೋಲಿಕೆ ಮಾಡಿದ್ದೇಕೆ.? ಅಷ್ಟಕ್ಕೂ ಹೋಲಿಕೆ ಮಾಡಿದ ಆ ನಟ ಯಾರು.? ಮುಂದೆ ಓದಿ.....

ಕನ್ನಡದ ಸಲ್ಮಾನ್ ಖಾನ್ ಅಂತೆ ದರ್ಶನ್

ಕನ್ನಡದ ಸಲ್ಮಾನ್ ಖಾನ್ ಅಂತೆ ದರ್ಶನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಹೋಲಿಕೆ ಮಾಡಿದ್ದ ಖ್ಯಾತ ಖಳನಟ ಠಾಕೂಲ್ ಅನೂಪ್ ಸಿಂಗ್. ಬಾಲಿವುಡ್ ನಲ್ಲಿ ಸಲ್ಮಾನ್ ಸಿನಿಮಾಗಳ ಹವಾ ಮತ್ತು ಕ್ರೇಜ್ ಹೇಗಿರುತ್ತೋ ಅದೇ ರೀತಿ ಇಲ್ಲಿ ದರ್ಶನ್ ಚಿತ್ರಗಳ ಹವಾ ಇದೆ ಎಂದು ಹೇಳಿದ್ದಾರೆ.

ಅಲ್ಲಿ ಅವರು ಸಲ್ತಾನ್, ಇಲ್ಲಿ ಇವರು ಸುಲ್ತಾನ್

ಅಲ್ಲಿ ಅವರು ಸಲ್ತಾನ್, ಇಲ್ಲಿ ಇವರು ಸುಲ್ತಾನ್

ಬಾಲಿವುಡ್ ನಲ್ಲಿ ಬಾಕ್ಸ್ ಅಫೀಸ್ ಸುಲ್ತಾನ್ ಎಂದು ಗುರುತಿಸಿಕೊಂಡಿರುವುದು ನಟ ಸಲ್ಮಾನ್ ಖಾನ್. ಅದೇ ರೀತಿ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆಸಿಕೊಳ್ಳುವುದು ನಟ ದರ್ಶನ್. ಠಾಕೂರ್ ಹೇಳಿದ್ರಲ್ಲಿ ನಿಜಕ್ಕೂ ಅರ್ಥವಿದೆ. ಯಾಕಂದ್ರೆ, ಹಿಂದಿಯಲ್ಲಿ ಸಲ್ಮಾನ್ ಖಾನ್ ಚಿತ್ರಗಳಂತೆ, ಕನ್ನಡದಲ್ಲಿ ದರ್ಶನ್ ಸಿನಿಮಾಗಳು ಅಬ್ಬರಿಸುತ್ತೆ.

ದರ್ಶನ್ ಕನ್ನಡದ ರಜನಿಕಾಂತ್ ಎಂದಿದ್ರು ಜಗ್ಗೇಶ್

ದರ್ಶನ್ ಕನ್ನಡದ ರಜನಿಕಾಂತ್ ಎಂದಿದ್ರು ಜಗ್ಗೇಶ್

''ದರ್ಶನ್ ಒಂದು ರೀತಿಯಲ್ಲಿ ನನ್ನ ಕ್ಯಾರೆಕ್ಟರ್. ನಾನಾದ್ರು ಸ್ವಲ್ಪ ನೇರ ನುಡಿ ಅಂದು ಬಿಡುತ್ತೇನೆ. ಆದ್ರೆ, ಅವನು ಯಾರಿಗೂ ಏನೂ ಅನ್ನಲ್ಲ. ಒಬ್ಬನೇ ನೋವು ತಿಂತಾನೆ ಒಳಗೆ ಇಟ್ಕೊಂಡು. ನನ್ನ ಪ್ರಕಾರ ಅವನು ಒಪನ್ ಅಪ್ ಆದ್ರೆ, ಅವನು ಕನ್ನಡದ ರಜನಿಕಾಂತ್'' ಎಂದು ಜಗ್ಗೇಶ್ ಅವರು ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು.

ದಚ್ಚುಗೆ ಸಲ್ಮಾನ್ ರೇಂಜ್ ಇದೆ ಎಂದಿದ್ದರು

ದಚ್ಚುಗೆ ಸಲ್ಮಾನ್ ರೇಂಜ್ ಇದೆ ಎಂದಿದ್ದರು

''ಕರೆಕ್ಟ್ ಆಗಿ ದರ್ಶನ್ ನ ಹಾಕ್ಕೊಂಡು ಸಿನಿಮಾ ಮಾಡಿದ್ರೆ, ಕನ್ನಡದಲ್ಲಿ ಸಲ್ಮಾನ್ ಖಾನ್ ರೇಂಜ್ ಗೆ, 100 ಕೋಟಿ ಕ್ಲಬ್ ಗೆ ದರ್ಶನ್ ಹೋಗ್ತಾರೆ'' ಎಂದು ಜಗ್ಗೇಶ್ ಈ ಹಿಂದೆ ಹೇಳಿದ್ದರು. ಇದುವರೆಗೂ 100 ಕೋಟಿ ಕ್ಲಬ್ ಗೆ ಕನ್ನಡ ಸಿನಿಮಾಗಳು ಸೇರಿಲ್ಲ. ಈಗ ದಿ ವಿಲನ್, ಕೆಜಿಎಫ್ ಹಾಗೂ ಕುರುಕ್ಷೇತ್ರ ಚಿತ್ರಗಳ ಮೇಲೆ ಈ ಭರವಸೆ ಹುಟ್ಟಿದೆ.

'ಯಜಮಾನ' ಚಿತ್ರದಲ್ಲಿ ಠಾಕೂರ್

'ಯಜಮಾನ' ಚಿತ್ರದಲ್ಲಿ ಠಾಕೂರ್

ಅಂದ್ಹಾಗೆ, ಠಾಕೂರ್ ಅನೂಪ್ ಸಿಂಗ್ ಈ ಮಾತನ್ನ ಹೇಳಿದ್ದು, ಉದ್ಘರ್ಷ ಚಿತ್ರದ ಪ್ರೆಸ್ ಮೀಟ್ ನಲ್ಲಿ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಈ ಚಿತ್ರದಲ್ಲಿ ಠಾಕೂರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ದರ್ಶನ್ ಜೊತೆ 'ಯಜಮಾನ' ಚಿತ್ರದಲ್ಲಿ ನಟಿಸಿದ್ದರು. ಹಾಗಾಗಿ, ದರ್ಶನ್ ಬಗ್ಗೆ ಇಂತಹದೊಂದು ಮಾತು ಹೇಳಿದ್ದಾರೆ.

ಠಾಕೂರ್ ಅನೂಪ್ ಸಿಂಗ್ ಬಗ್ಗೆ....

ಠಾಕೂರ್ ಅನೂಪ್ ಸಿಂಗ್ ಬಗ್ಗೆ....

ಬಾಲಿವುಡ್ ಮೂಲದ ಠಾಕೂರ್ ಅನೂಪ್ ಸಿಂಗ್ ಯಶಸ್ಸು ಕಂಡಿದ್ದು ಮಾತ್ರ ಸೌತ್ ಸಿನಿರಂಗದಲ್ಲಿ. ತಮಿಳಿನ 'ಸಿಂಗಂ-3' ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡಿದ ಠಾಕೂರ್, ತೆಲುಗಿನಲ್ಲಿ ವಿನ್ನರ್, ನಾ ಪೇರು ಸೂರ್ಯ ನಾ ಇಲ್ಲು ಪೇರು ಇಂಡಿಯಾ, ಕನ್ನಡದಲ್ಲಿ ರೋಗ್, ಉದ್ಘರ್ಷ, ಈಗ 'ಯಜಮಾನ' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹಿಂದಿಯಲ್ಲಿ 'ಕಮಾಂಡೋ-2' ಸಿನಿಮಾದಲ್ಲಿ ಮಾತ್ರ ನಟಿಸಿದ್ದಾರೆ.

More from Filmibeat

English summary
Challenging star Darshan Tugudeep is 'Salman Khan' of the Kannada film industry said thakur anoop singh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X