ವಿಡಿಯೋ ವೈರಲ್: ಕುದುರೆ ಆರೈಕೆಯಲ್ಲಿ ಡಿ ಬಾಸ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಮನೆಯಲ್ಲಿಯೇ ಇದ್ದಾರೆ. ಲಾಕ್ ಡೌನ್ ನಲ್ಲಿ ಡಿ ಬಾಸ್ ಹೆಚ್ಚಾಗಿ ಮೈಸೂರಿನ ಫಾರ್ಮ್ ಹೌಸ್ ನಲ್ಲಿ, ಪ್ರಾಣಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ನೆಚ್ಚಿನ ಪ್ರಾಣಿಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

Recommended Video

ಕುದುರೆ ಹೇರ್ ಕಟ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ | Darshan Grooming his Horse | Filmibeat Kannada

ಇತ್ತೀಚಿಗಷ್ಟೆ ನಟ ದೇವರಾಜ್ ಕುಟುಂಬ ದರ್ಶನ್ ತೋಟದ ಮನೆಗೆ ಭೇಟಿ ಮಾಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೀಗ ದರ್ಶನ್ ಕುದುರೆಯ ಆರೈಕೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ...

ತೋಟದ ಮನೆಯಲ್ಲಿ ದರ್ಶನ್

ತೋಟದ ಮನೆಯಲ್ಲಿ ದರ್ಶನ್

ದರ್ಶನ್ ಮೈಸೂರಿನ ತೋಟದ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಚಿತ್ರೀಕರಣ ಇಲ್ಲದ ಕಾರಣ ದರ್ಶನ್ ತೋಟದ ಮನೆಯಲ್ಲಿಯೆ, ಪ್ರಾಣಿ ಪಕ್ಷಿಗಳ ಜೊತೆ ಇದ್ದಾರೆ. ನೆಚ್ಚಿನ ಪ್ರಾಣಿಗಳನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದಾರೆ. ದರ್ಶನ್ ಗೆ ಕುದುರೆ ಎಂದರೆ ತುಂಬ ಇಷ್ಟ. ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಕುದುರೆಗಳನ್ನು ಸಾಕಿದ್ದಾರೆ.

ಕುದುರೆ ಆರೈಕೆಯಲ್ಲಿ ದರ್ಶನ್

ಕುದುರೆ ಆರೈಕೆಯಲ್ಲಿ ದರ್ಶನ್

ದರ್ಶನ್ ತೋಟದ ಮನೆಯಲ್ಲಿರುವ ಕುದುರೆಗಳ ಆರೈಕೆ ಮಾಡುತ್ತಿದ್ದಾರೆ. ದರ್ಶನ್ ಮತ್ತು ತೋಟದ ಮನೆಯಲ್ಲಿರುವ ಸ್ನೇಹಿತರು ಕುದುರೆಯನ್ನು ಆರೈಕೆ ಮಾಡುತ್ತಿದ್ದಾರೆ. ಕುದುರೆ ಜೊತೆ ಕಾಲಕಳೆಯುತ್ತಿರುವ ದರ್ಶನ್ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ದರ್ಶನ್ ಕುದುರೆ ಪ್ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ದರ್ಶನ್ ತೋಟದ ಮನೆಯಲ್ಲಿ ದೇವರಾಜ್

ದರ್ಶನ್ ತೋಟದ ಮನೆಯಲ್ಲಿ ದೇವರಾಜ್

ಇತ್ತೀಚಿಗೆ ದೇವರಾಜ್ ಕುಟುಂಬ ದರ್ಶನ್ ಫಾರ್ಮ್ ಹೌಸ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ದೇವರಾಜ್ ಮತ್ತು ಮಕ್ಕಳು ಪ್ರಜ್ವಲ್ ಹಾಗೂ ಪ್ರಣವ್ ದೇವರಾಜ್ ಜೊತೆಗೆ ಯಶಸ್ ಸೂರ್ಯ ಮತ್ತು ಚಿಕ್ಕಣ್ಣ ತೋಟದ ಮನೆಗೆ ಭೇಟಿ ನೀಡಿದ್ದಾರೆ. ದೇವರಾಜ್ ಕುಟುಂಬದ ಜೊತೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ರಾಬರ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ಮುಂದಕ್ಕೆ ಹೋಗಿದೆ. ಇನ್ನೂ ದರ್ಶನ್ ಮದಕರಿನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ದರ್ಶನ್ ಚಿತ್ರೀಕರಣಕ್ಕೆ ಹೊರಡುವ ಸಾಧ್ಯತೆ ಇದೆ.

More from Filmibeat

English summary
Challenging Star Darshan is Taking care of horse in his farmhouse video viral. Darshan is spending time in his Farmhouse.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X