ಪುನೀತ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಟಾರ್ಸ್: ಯಾರ್ಯಾರ ವಿಶ್ ಹೇಗಿದೆ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಇಂದು ಹುಟ್ಟಹಬ್ಬದ ಸಂಭ್ರಮ. 45ನೇ ವರ್ಷದ ಜನ್ಮದಿನಾಜರಣೆಯನ್ನು ಆಚರಿಸಿಕೊಳ್ಳುತ್ತಿರುವ ಅಪ್ಪುಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ವಿಶ್ ಮಾಡುತ್ತಿದ್ದಾರೆ.
Recommended Video
ಈ ಬಾರಿ ಪವರ್ ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕೊರೊನಾ ವೈರಸ್ ಪರಿಣಾಮ ಜನ್ಮದಿನಾಚರಣೆ ರದ್ದು ಮಾಡಿರುವ ಅಪ್ಪುಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳು ಹರಿದು ಬರುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಜಗ್ಗೇಶ್, ನೆನಪಿರಲಿ ಪ್ರೇಮ್, ಯುವರತ್ನ ನಾಯಕಿ ಸಯೇಶಾ, ಪ್ರಶಾಂತ್ ನೀಲ್ ಸೇರಿದಂತೆ ಸಾಕಷ್ಟು ಗಣ್ಯರು ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ..
ಪುನೀತ್ ಗೆ ವಿಶ್ ಮಾಡಿದ ದರ್ಶನ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭಕೋರಿದ್ದಾರೆ. ದರ್ಶನ್ ಟ್ವಿಟ್ಟರ್ ಮೂಲಕ "ಹುಟ್ಟುಹಬ್ಬದ ಶುಭಾಶಯಗಳು ಪುನೀತ್ ರಾಜ್ ಕುಮಾರ್" ಎಂದು ಹೇಳಿದ್ದಾರೆ. ಅಂದ್ಹಾಗೆ ದರ್ಶನ್ ಮತ್ತು ಪುನೀತ್ ಇಬ್ಬರು ಉತ್ತಮ ಸ್ನೇಹಿತರು. ಪುನೀತ್ ಅಭಿನಯದ ಅರಸು ಸಿನಿನಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಲ್ಮೆಯ ಸಹೋದರಿಗೆ ಶುಭಾಶಯ
ನವರಸ ನಾಯಕ ಜಗ್ಗೇಶ್ ಸಹ ಪುನೀತ್ ರಾಜ್ ಕುಮಾರ್ ಅವರಿಗೆ ಶುಭಕೋರಿದ್ದಾರೆ. ವಿಶೇಷ ಅಂದರೆ ಇಂದು ಜಗ್ಗೇಶ್ ಅವರು ಸಹ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪುನೀತ್ ಜನ್ಮದಿನಕ್ಕೂ ವಿಶ್ ಮಾಡಿದ್ದಾರೆ. "ನಲ್ಮೆಯ ಸಹೋದರ ಪುನೀತ್ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಶುಭಾಶಯಗಳು ಆಯು ಆರೋಗ್ಯ ಯಶ್ ಪ್ರಾಪ್ತಿರಸ್ತು. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ" ಎಂದು ಹೇಳಿದ್ದಾರೆ.
ನಟ ನೆನಪಿರಲಿ ಪ್ರೇಮ್
ನಟ ನೆನಪಿರಲಿ ಪ್ರೇಮ್ ಸಹ ಅಪ್ಪು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರೇಮ್ "ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಪ್ಪು ಸರ್" ಎಂದು ಹೇಳಿದ್ದಾರೆ. ಜೊತೆಗೆ ಪುನೀತ್ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ತಮಿಳು ನಟ ಆರ್ಯ
ತಮಿಳು ನಟ ಆರ್ಯ ಮತ್ತು ಪುನೀತ್ ರಾಜ್ ಕುಮಾರ್ ಇಬ್ಬರು ಉತ್ತಮ ಸ್ನೇಹಿತರು. ಆರ್ಯ ಪತ್ನಿ ಸಯೇಶಾ ಯುವರತ್ನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ಗೆ ವಿಶ್ ಮಾಡಿರುವ ಆರ್ಯ "ಹುಟ್ಟುಹಬ್ಬ ಹಬ್ಬದ ಶುಭಾಶಯಗಳು ಪುನೀತ್ ಸರ್. ಯುವರತ್ನ ಸಿನಿಮಾ ದೊಡ್ಡ ಯಶಸ್ಸು ತಂದುಕೊಡಲಿ. ನಿಮ್ಮ ಸಿನಿಮಾ ಮೂಲಕ ನನ್ನ ಪತ್ನಿ ಸಯೇಶಾ ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಪುನೀತ್ ಹುಟ್ಟುಹಬ್ಬಕ್ಕೆ ಮುಂಚಿತವಾಗಿಯೆ ವಿಶ್ ಮಾಡಿದ್ದಾರೆ. ಜೊತೆಗೆ ಯುವರತ್ನ ತಂಡಕ್ಕೂ ಶುಭಕೋರಿ ಟೀಸರ್ ಹಂಚಿಕೊಂಡಿದ್ದಾರೆ.
ನಟಿ ಸಯೇಶಾ
ಯುವರತ್ನ ಚಿತ್ರದ ನಾಯಕಿ ಸಯೇಶಾ ಕೂಡ ಪುನೀತ್ ರಾಜ್ ಕುಮಾರ್ ಗೆ ಶುಭಕೋರಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ಪುನೀತ್ ಸರ್. ನಿಮ್ಮ ಜೊತೆ ಅಭಿನಯಿಸಿದ್ದು ಅದ್ಭುತವಾದ ಅನುಭವ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











