'ಕಲಾಸಿಪಾಳ್ಯ'ಕ್ಕೆ 16 ವರ್ಷ: ಸೋಶಿಯಲ್ ಮೀಡಿಯಾದಲ್ಲಿ ಡಿ-ಬಾಸ್ ಭಕ್ತರ ಸಂಭ್ರಮ

ಮೆಜಿಸ್ಟಿಕ್, ಕರಿಯ, ದಾಸ ಚಿತ್ರಗಳ ಬಳಿಕ ನಟ ದರ್ಶನ್‌ ಅಷ್ಟು ದೊಡ್ಡ ಸಕ್ಸಸ್ ಸಿಕ್ಕಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ಮಾಸ್ ಇಮೇಜ್‌ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋದ ಚಿತ್ರ ಕಲಾಸಿಪಾಳ್ಯ.

2004ರಲ್ಲಿ ತೆರೆಕಂಡ ಕಲಾಸಿಪಾಳ್ಯ ಸಿನಿಮಾ ದರ್ಶನ್ ಅವರನ್ನು ಗಾಂಧಿನಗರಕ್ಕೆ ಮತ್ತೆ ಬಾಸ್ ಆಗಿ ಮಾಡಿತು. ಇಲ್ಲಿಂದ ಕೆಂಚನ ಕರಾಮತ್ತು ಸಂಪೂರ್ಣವಾಗಿ ಬದಲಾಯಿತು. ಮಾಸ್ ಸಿನಿಮಾಗಳ ಸರದಾರ ಎನಿಸಿಕೊಂಡರು. ಕಲಾಸಿಪಾಳ್ಯ ಸಿನಿಮಾ ತೆರೆಕಂಡ ಇಂದಿಗೆ 16 ವರ್ಷ ಆಗಿವೆ. ಈ ವಿಶೇಷ ದಿನದಂದು ಕೆಂಚನ ಅಭಿಮಾನಿಗಳು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಸಂಭ್ರಮಿಸುತ್ತಿದ್ದಾರೆ. ಮುಂದೆ ಓದಿ....

ರಾಮು ಬ್ಯಾನರ್, ಓಂ ಪ್ರಕಾಶ್ ರಾವ್ ನಿರ್ದೇಶನ

ರಾಮು ಬ್ಯಾನರ್, ಓಂ ಪ್ರಕಾಶ್ ರಾವ್ ನಿರ್ದೇಶನ

ಕನ್ನಡದ ಶ್ರೀಮಂತ ನಿರ್ಮಾಪಕರಲ್ಲಿ ಒಬ್ಬರಾದ ರಾಮು ಈ ಚಿತ್ರ ನಿರ್ಮಿಸಿದ್ದರು. ಮಾಸ್ ಚಿತ್ರಗಳ ಸ್ಟಾರ್ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಿದ್ದರು. 2004ರಲ್ಲಿ ತೆರೆಕಂಡ ಈ ಸಿನಿಮಾ ಶತದಿನ ಆಚರಿಸಿಕೊಂಡಿತ್ತು.

ದರ್ಶನ್-ರಕ್ಷಿತಾ ಜೋಡಿ ಸೂಪರ್

ದರ್ಶನ್-ರಕ್ಷಿತಾ ಜೋಡಿ ಸೂಪರ್

ದರ್ಶನ್ ಸಿನಿಮಾದಲ್ಲಿ ರಕ್ಷಿತಾ ಮೊದಲ ಸಲ ನಾಯಕಿಯಾಗಿ ನಟಿಸಿದ್ದರು. ಈ ಜೋಡಿಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದರು. ಕಲಾಸಿಪಾಳ್ಯ ಹಿಟ್ ಕಾಂಬಿನೇಷನ್ ಮುಂದೆ ಸ್ಯಾಂಡಲ್‌ವುಡ್ನ ಅತ್ಯುತ್ತಮ ಜೋಡಿಗಳಲ್ಲಿ ಒಂದಾಯಿತು. ಅಯ್ಯ, ಮಂಡ್ಯ, ಸುಂಟರಗಾಳಿ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ದರ್ಶನ್-ರಕ್ಷಿತಾ ನಟಿಸಿದರು.

ಸಾಂಗ್ಸ್ ಸೂಪರ್ ಡೂಪರ್

ಸಾಂಗ್ಸ್ ಸೂಪರ್ ಡೂಪರ್

ಕಲಾಸಿಪಾಳ್ಯ ಸಿನಿಮಾದ ಪ್ರಮುಖ ಹೈಲೈಟ್ ಅಂದ್ರೆ ಹಾಡುಗಳು. ಮಾಸ್ ಪ್ರೇಕ್ಷಕರಿಗೆ ಹಾಗೂ ಯುವ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಹಾಡುಗಳು ಈ ಚಿತ್ರದಲ್ಲಿದ್ದವು. ಸಾಧು ಕೋಕಿಲಾ ಮತ್ತು ವೆಂಕಟ್ ನಾರಾಯಣ್ ಸಂಗೀತ ನಿರ್ದೇಶನ ನೀಡಿದ್ದರು.

Recommended Video

ಪ್ರೇಮ್, ರಚಿತಾ ರಾಮ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಾಣಾ | Filmibeat Kannada
ಎಂದಿಗೂ ಮರೆಯಲಾಗದ ಕಲಾಸಿಪಾಳ್ಯ ಕೆಂಚ

ಎಂದಿಗೂ ಮರೆಯಲಾಗದ ಕಲಾಸಿಪಾಳ್ಯ ಕೆಂಚ

ನಟ ದರ್ಶನ್ ಅವರ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಯಶಸ್ಸು ಹಾಗೂ ಖ್ಯಾತಿ ತಂದು ಕೊಟ್ಟ ಚಿತ್ರಗಳ ಪೈಕಿ ಕಲಾಸಿಪಾಳ್ಯ ಸಹ ಇದೆ. ದರ್ಶನ್ ಅವರಿಗೆ ಮಾತ್ರವಲ್ಲ ಕನ್ನಡ ಇಂಡಸ್ಟ್ರಿಯಲ್ಲಿ ಮಾರ್ಕೆಟ್ ವಿಸ್ತರಣೆಗೂ ಈ ಸಿನಿಮಾ ಕಾರಣವಾಗಿತ್ತು.

More from Filmibeat

English summary
Challenging star darshan Kalasipalya Movie Completed 16th year. so, D Boss fans are celebrated Kalasipalya 16th anniversary in Social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X