»   » ವಿಡಿಯೋ: 'ಕುರುಕ್ಷೇತ್ರ' ಚಿತ್ರದ ಎಕ್ಸ್ ಕ್ಲೂಸಿವ್ ಮೇಕಿಂಗ್

ವಿಡಿಯೋ: 'ಕುರುಕ್ಷೇತ್ರ' ಚಿತ್ರದ ಎಕ್ಸ್ ಕ್ಲೂಸಿವ್ ಮೇಕಿಂಗ್

Posted By:
Subscribe to Filmibeat Kannada
ಕುರುಕ್ಷೇತ್ರ ತಂಡದಿಂದ ಮತ್ತೊಂದು ಸರ್ಪ್ರೈಸ್ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 50ನೇ ಸಿನಿಮಾ 'ಕುರುಕ್ಷೇತ್ರ' ಆಡಿಯೋ ಬಿಡುಗಡೆಗೆ ವೇದಿಕೆ ಸಜ್ಜಾಗುತ್ತಿದೆ. ಹೀಗಿರುವಾಗ, ಕುರುಕ್ಷೇತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.

ಹೈದ್ರಾಬಾದ್ ನ ರಾಮೋಜಿ ಫಿಲ್ಮಿ ಸಿಟಿಯಲ್ಲಿ ಇಡೀ ಸಿನಿಮಾ ಚಿತ್ರೀಕರಣ ಮಾಡಿದ್ದು, ಶೂಟಿಂಗ್ ಅನುಭವ ಹೇಗಿತ್ತು, ಕಲಾವಿದರು ಸೆಟ್ ನಲ್ಲಿ ಹೇಗಿದ್ದರು, ಮೇಕಪ್ ಗೆ ಎಷ್ಟು ಸಮಯ ಬೇಕಾಗುತ್ತಿತ್ತು, ನಿರ್ಮಾಪಕರ ಕೆಲಸ ಚಿತ್ರೀಕರಣದಲ್ಲಿ ಹೇಗಿತ್ತು ಎಂಬ ತುಣುಕುಗಳನ್ನ ಈಗ ಚಿತ್ರತಂಡ ಎಕ್ಸ್ ಕ್ಲೂಸಿವ್ ಆಗಿ ಬಿಡುಗಡೆ ಮಾಡಿದೆ.

Darshan kurukshetra making Video

ದರ್ಶನ್, ಅಂಬರೀಷ್, ಅರ್ಜುನ್ ಸರ್ಜಾ, ರವಿಚಂದ್ರನ್ ಸೇರಿದಂತೆ ಇತರೆ ಕಲಾವಿದರ ಮೇಕಿಂಗ್ ಹೇಗಿತ್ತು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ರಾಮೋಜಿ ಫಿಲ್ಮ್ ಸಿಟಿಗೆ ಹೋಗುವುದು 'ಶಾಪ'ವೆಂದ ದರ್ಶನ್

ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸವೂ ಪೂರ್ತಿಯಾಗಿದ್ದು, ಚಿತ್ರದ ಪೈನಲ್ ಕಾಪಿ ಸಿದ್ದವಾಗಿದೆಯಂತೆ. ಈಗೇನಿದ್ರು ಸೆನ್ಸಾರ್ ಮಂಡಳಿ ಎದುರು ಸಿನಿಮಾ ಹೋಗಲಿದ್ದು, ಆದಷ್ಟೂ ಬೇಗ ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ.

ಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡಕ್ಕಾಗಿ 'ಡಿ-ಬಾಸ್' ಜಗಳ

ಇನ್ನುಳಿದಂತೆ ನಾಗಣ್ಣ ಈ ಚಿತ್ರಕ್ಕೆ ಆಕ್ಷನ್ ಹೇಳುತ್ತಿದ್ದು, ಮುನಿರತ್ನ ಅವರ ಬಂಡವಾಳ ಹಾಕಿದ್ದಾರೆ. ವಿ ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ತಕ್ಕಂತೆ ಹಾಡುಗಳು ಮತ್ತು ಶ್ಲೋಕ, ಪದ್ಯಗಳು ಚಿತ್ರದಲ್ಲಿದೆಯಂತೆ.

'ಕುರುಕ್ಷೇತ್ರ' ಆಡಿಯೋ ಬಿಡುಗಡೆಗೆ ಮುಹೂರ್ತ ನಿಗದಿ

ದರ್ಶನ್ (ದುರ್ಯೋಧನ) ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಸೋನು ಸೂದ್ (ಅರ್ಜುನ), ನಿಖಿಲ್ ಕುಮಾರ್ (ಅಭಿಮನ್ಯು), ಮೇಘನಾ ರಾಜ್ (ಭಾನುಮತಿ), ಸ್ನೇಹಾ (ದ್ರೌಪದಿ) ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

English summary
Challenging star darshan starrer Muniratna Kurukshetra movies making Video released. the Mythological drama has been sold to Lahari audio company for a huge price and audio will be on month end of april.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X