ವಿಡಿಯೋ: 'ತಾರಕ್' ಜೊತೆ 'ಕುರುಕ್ಷೇತ್ರ' ಟೀಸರ್ ಬಂತು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ಇಂದು (ಸೆಪ್ಟೆಂಬರ್ 29) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ತಾರಕ್ ಸಿನಿಮಾ ನೋಡೋಕೆ ಚಿತ್ರಮಂದಿರಕ್ಕೆ ಹೋಗಿದ್ದ ಚಿತ್ರಪ್ರೇಮಿಗಳಿಗೆ ಡಬಲ್ ಖುಷಿ ಸಿಕ್ಕಿದೆ.
ಹೌದು, ದರ್ಶನ್ ಅಭಿನಯಿಸುತ್ತಿರುವ 50ನೇ ಚಿತ್ರ 'ಕುರುಕ್ಷೇತ್ರ' ಹೊಸ ಟೀಸರ್ ತಾರಕ್ ಜೊತೆಯಲ್ಲಿ ಬಿಡುಗಡೆಯಾಗಿದೆ. ಈ ಮೊದಲು ಅಧಿಕೃತವಾಗಿ ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರತಂಡ, ನಂತರ ಟೈಟಲ್ ಟೀಸರ್ ಬಿಡುಗಡೆ ಮಾಡಿತ್ತು. ಈಗ ಕುರುಕ್ಷೇತ್ರ ಚಿತ್ರದ ಮೊದಲ ಡೈಲಾಗ್ ಟೀಸರ್ ಲಾಂಚ್ ಮಾಡಿದೆ.

ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ನಾಗಣ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಶಾಸಕ ಮುನಿರತ್ನ ಅವರು ನಿರ್ಮಾಣ ಮಾಡುತ್ತಿದ್ದು, ಹರಿಕೃಷ್ಣ ಅವರು ಸಂಗೀತ ಒದಗಿಸುತ್ತಿದ್ದಾರೆ.
ಕುರುಕ್ಷೇತ್ರ ಚಿತ್ರದ ಟೀಸರ್ ಇಲ್ಲಿದೆ ನೋಡಿ.....
ದರ್ಶನ್ 'ದುರ್ಯೋಧನ', ಅಂಬರೀಷ್ 'ಭೀಷ್ಮ', ರವಿಚಂದ್ರನ್ 'ಕೃಷ್ಣ', ಅರ್ಜುನ್ ಸರ್ಜಾ 'ಕರ್ಣ', ಸೋನು ಸೂದ್ 'ಅರ್ಜುನ', ಬಹುಭಾಷಾ ನಟಿ ಸ್ನೇಹಾ 'ದ್ರೌಪದಿ', ಡ್ಯಾನಿಶ್ ಅಖ್ತರ್ ಸೈಫಿ 'ಭೀಮ', ರವಿಶಂಕರ್ 'ಶಕುನಿ', ಶ್ರೀನಾಥ್ 'ಧೃತರಾಷ್ಟ್ರ', ಶ್ರೀನಿವಾಸ ಮೂರ್ತಿ 'ದ್ರೋಣಚಾರ್ಯ', ಶಶಿಕುಮಾರ್ 'ಧರ್ಮರಾಯ', ನಿಖಿಲ್ ಕುಮಾರ್ ಅಭಿಮನ್ಯು, ಸೇರಿದಂತೆ ಹಲವರು ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











