ಅಪ್ಪು ಹಾಗೂ ಸುದೀಪ್ ಫ್ಯಾನ್ಸ್ ಕ್ಷಮೆ ಕೇಳಿದ ದರ್ಶನ್ ಡಬಲ್ ಡಿಗ್ರಿ ಲೇಡಿ ಫ್ಯಾನ್

By ಫಿಲ್ಮಿಬೀಟ್ ಡೆಸ್ಕ್

ಸೋಶಿಯಲ್ ಮೀಡಿಯಾದಲ್ಲಿ ವಾಸ್ತವಕ್ಕಿಂತ ಸುಳ್ಳು ಸುದ್ದಿಗಳೇ ಹೆಚ್ಚಾಗುತ್ತಿದೆ. ಕೆಲವರು ಇದನ್ನೇ ನಿಜ ಎಂದು ನಂಬಿ ಏನೇನೋ ಕಲ್ಪಿಸಿಕೊಳ್ಳುವುದು ಇದೆ. ಇತ್ತೀಚಿಗೆ ದರ್ಶನ್ ಮಹಿಳಾ ಅಭಿಮಾನಿಯೊಬ್ಬರು ಸುದೀಪ್ ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ ಬಗ್ಗೆ ತಪ್ಪಾಗಿ ಮಾತನಾಡಿದ್ದರು. ಬಳಿಕ ಸತ್ಯಾಂಶ ತಿಳಿದು ಕ್ಷಮೆ ಕೇಳಿದ್ದಾರೆ. ಇದು ಸಖತ್ ವೈರಲ್ ಆಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಫ್ಯಾನ್ಸ್ ವಾರ್ ಹೆಚ್ಚಾಗುತ್ತಿದೆ. ಅದಕ್ಕೆ ಸೋಶಿಯಲ್ ಮೀಡಿಯಾ ಕತ್ತಿ, ಗುರಾಣಿಯಾಗುತ್ತಿದೆ. ಟ್ರೋಲ್‌ ಹೆಚ್ಚಾಗುತ್ತಿದೆ. ತನ್ನ ನೆಚ್ಚಿನ ನಟನೇ ಗ್ರೇಟ್ ಎಂದು ಬಿಂಬಿಸಲು, ಕೊಚ್ಚಿಕೊಳ್ಳಲು ಮತ್ತೊಬ್ಬ ನಟನನ್ನು, ಆತನ ಸಿನಿಮಾಗಳನ್ನು ಟ್ರೋಲ್ ಮಾಡುವುದು ಹೆಚ್ಚುತ್ತಿದೆ. ಇಂತಹ ಕೆಟ್ಟ ಟ್ರೋಲ್ ವಾರ್‌ಗೆ ಫೇಕ್ ಅಕೌಂಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮುಖ ತೋರಿಸದೇ ಇನ್‌ಸ್ಟಾ, ಫೇಸ್‌ಬುಕ್, ಟ್ವಿಟ್ಟರ್ ಅಕೌಂಟ್‌ಗಳನ್ನು ಕ್ರಿಯೇಟ್ ಮಾಡಿಕೊಂಡು ಯಾವುದೋ ಮೂಲೆಯಲ್ಲಿ ಕೂತು ಕೆಲವರು ಕಾಮೆಂಟ್ ಮಾಡುತ್ತಿರುತ್ತಾರೆ. ಇಂತಹ ಸುಳ್ಳು ಟ್ರೋಲ್, ಕೊಳಲು ಟ್ರೋಲ್‌ಗಳು ಫ್ಯಾನ್ಸ್ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.

Darshan Lady Fan s False Statement on Sudeep amp amp Puneeth Fans Goes Viral Later Issues Apology

ಇತ್ತೀಚೆಗೆ ನಟ ದರ್ಶನ್ ಮಹಿಳಾ ಅಭಿಮಾನಿ ಒಬ್ಬರು R. ಕನ್ನಡ ವಾಹಿನಿ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. 'ಡಿ ಬಾಸ್ vs ಅಂಧಾಭಿಮಾನ' ಶೀರ್ಷಿಕೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಶೋನಲ್ಲಿ ಮಾತನಾಡುತ್ತಾ ಆ ಮಹಿಳಾ ಅಭಿಮಾನಿ ನೀಡಿದ್ದ ಕೆಲ ಹೇಳಿಕೆಗಳು ಪುನೀತ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ಕೆರಳುವಂತೆ ಮಾಡಿದೆ. ದರ್ಶನ್ ಅಭಿಮಾನಿಗಳನ್ನು ಅವಿದ್ಯಾವಂತರು ಎಂದು ಟ್ರೋಲ್ ಮಾಡುತ್ತಾರೆ. ನಾನು ಡಬಲ್ ಡಿಗ್ರಿ ಮಾಡಿದ್ದೀನಿ. ಚಿಕ್ಕಂದಿನಿಂದಲೂ ದರ್ಶನ್ ಸರ್ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ಯಾಕೆ ದರ್ಶನ್ ಜಾಮೀನು ರದ್ದು ಮಾಡಿತು? ಅದಕ್ಕೆ ಕಾರಣ ಏನು? ಎನ್ನುವ ಪ್ರಶ್ನೆಗೆ ಆಕೆ ನೀಡಿದ್ದ ಉತ್ತರ ವೈರಲ್ ಆಗ್ತಿದೆ. "ದರ್ಶನ್ ಫ್ಯಾನ್ಸ್ ಪ್ರಮುಖ ಕಾರಣ. ನೆಗೆಟಿವ್ ಆಗಿ ಸಮಾಜಕ್ಕೆ ಕೆಟ್ಟದು ಮಾಡ್ತಿದ್ದಾರೆ ಎನ್ನುವ ಕಾರಣಕ್ಕೆ ದರ್ಶನ್ ಸರ್ ಜಾಮೀನು ರದ್ದು ಮಾಡಿದ್ದಾರೆ" ಎಂದು ಹೇಳಿದ್ದಾರೆ.

ನಟಿ ರಮ್ಯಾ ತಮಗೆ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಾರೆ ಎಂದು ದೂರು ನೀಡಿದ್ದರು. ಈ ಬಗ್ಗೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ದರ್ಶನ್ ಮಹಿಳಾ ಅಭಿಮಾನಿ ಮಾತನಾಡಿ "ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಸುದೀಪ್ ಫ್ಯಾನ್ಸ್ ಹಾಗೂ ಪುನೀತ್ ಫ್ಯಾನ್ಸ್ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ರಮ್ಯಾ ಅವರಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆ" ಎಂದು ಹೇಳಿದ್ದಾರೆ. ಇದು ಸಹಜವಾಗಿಯೇ ದರ್ಶನ್ ಫ್ಯಾನ್ಸ್ ಕೆರಳುವಂತೆ ಮಾಡಿದೆ. ಇದಕ್ಕೆ ಯಾವ ಆಧಾರ ಇದೆ ಎಂದು ಆಕೆಯನ್ನು ಪ್ರಶ್ನಿಸಿದ್ದಾರೆ.

ತನ್ನ ತಪ್ಪಿನ ಅರಿವಾಗಿ ದರ್ಶನ್ ಅಭಿಮಾನಿ ವೀಡಿಯೋ ಮಾಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನಾನು ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ನೋಡಿದೆ. ಅದರಲ್ಲಿ ಸುದ್ದಿ ಮಾಡಿದ್ದರು. ಅದು ನಿಜ ಎಂದೇ ನಂಬಿ ಮಾತನಾಡಿಬಿಟ್ಟೆ. ಅದು ಫೇಕ್ ನ್ಯೂಸ್ ಎನ್ನುವುದು ನನಗೆ ಗೊತ್ತಿರಲಿಲ್ಲ. ನನ್ನ ಮಾತಿನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ" ಎಂದು ಕೇಳಿಕೊಂಡಿದ್ದಾರೆ.

ಒಟ್ಟಾರೆ ಯಾವುದು ಸತ್ಯ, ಯಾವುದು ಸುಳ್ಳು ಎಂದು ತಿಳಿದುಕೊಳ್ಳದೇ ಬಾಯಿಗೆ ಬಂದಂತೆ ಮಾತನಾಡುವುದು, ಬಳಿಕ ಕ್ಷಮೆ ಕೇಳುವುದು ಸರಿಯಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಯಾರ್ಯಾರೋ ನಾವು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ವೀಡಿಯೋ ಮಾಡುವುದು, ಮಾಧ್ಯಮಗಳಲ್ಲಿ ಕುಳಿತು ಮಾತನಾಡುವುದು ಸರಿಯಲ್ಲ, ಅಂತವರ ಮಾತುಗಳಿಗೆ ಯಾರು ತಲೆ ಕೆಡಿಸಿಕೊಳ್ಳಬೇಡಿ ಎಂದು ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

More from Filmibeat

English summary
Darshan lady Fan Issues Apology
Read more about: darshan devil fan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X