For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಲಂಬೋರ್ಗಿನಿ' ಮೇಲೆ ಆರ್.ಟಿ.ಓ ಕಣ್ಣು: ಕಾರಣ ಏನು?

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಲಂಬೋರ್ಗಿನಿ' ಕಾರು ಖರೀದಿಸಿದ್ದು, ಕಳೆದ ಒಂದು ವಾರದಿಂದ ದೊಡ್ಡ ಸುದ್ದಿಯಾಗಿತ್ತು. ದುಬಾರಿ ಕಾರಿನಲ್ಲಿ ದರ್ಶನ್ ಸುತ್ತಾಡಿದ್ದನ್ನ ನೇರವಾಗಿ ನೋಡಿದ ಅಭಿಮಾನಿಗಳು, ಖುಷಿ ಪಟ್ಟಿದ್ದರು. ಈಗ ಈ ಕಾರು ಎಲ್ಲೇ ಕಾಣಿಸಿಕೊಂಡ್ರು, ದರ್ಶನ್ ಅವರದ್ದೇ ಎಂಬ ಭಾವನೆ ಜನರಲ್ಲಿ ಇದೆ. ಅಷ್ಟರ ಮಟ್ಟಿಗೆ ಲಂಬೋರ್ಗಿನಿ ಕಾರು ಸದ್ದು ಮಾಡಿದೆ.

  ಇದೀಗ, ದಾಸನ ಈ ಕಾರು ಬೇರೆಯದ್ದೇ ವಿಚಾರಕ್ಕೆ ಸುದ್ದಿಯಾಗಿದೆ. ಚಕ್ರವರ್ತಿಯ ಕಾರಿನ ಮೇಲೆ ಕರ್ನಾಟಕ ಆರ್.ಟಿ.ಓ ಅಧಿಕಾರಿಗಳು ಗಮನ ನೆಟ್ಟಿದ್ದಾರೆ. ಇದಕ್ಕೆ ಕಾರಣ ದರ್ಶನ್ ಅವರ ಕಾರಿನ ಸಂಖ್ಯೆ.

  ಚಕ್ರವರ್ತಿ' ದರ್ಶನ್ ಬಳಿ ಇದೆ 'ವರ್ಲ್ಡ್ ಕ್ಲಾಸ್' ಕಾರ್ ಗಳು.!

  ಹೌದು, ದರ್ಶನ್ ಅವರ ಲಂಬೋರ್ಗಿನಿ ಕಾರು ಪಾಂಡಿಚೇರಿಯ ಆರ್.ಟಿ.ಓ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ಇದು ಸಾಮಾನ್ಯವಾಗಿ ಚರ್ಚೆಗೆ ಕಾರಣವಾಗಿದೆ. ನಮ್ಮಲ್ಲಿ ನೋಂದಣೆ ಮಾಡುವ ಬದಲು, ಅಲ್ಲಿ ಯಾಕೆ ನೋಂದಣಿ ಮಾಡಲಾಗಿದೆ ಎಂಬ ಕುತೂಹಲ ಕಾಡುತ್ತಿದೆ. ಅಷ್ಟಕ್ಕೂ, ದರ್ಶನ್ ಕಾರು ಪುದುಚೇರಿಯಲ್ಲಿ ನೋಂದಣಿಯಾಗಿರುವುದು ಯಾಕೆ? ಮುಂದೆ ಓದಿ.....

  ದರ್ಶನ್ ಕಾರಿನ ಸಂಖ್ಯೆ

  ದರ್ಶನ್ ಕಾರಿನ ಸಂಖ್ಯೆ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಿರುವ ಲಂಬೋರ್ಗಿನಿ ಕಾರಿನ ನೋಂದಣಿ ಸಂಖ್ಯೆ ಹೀಗಿದೆ. (PY01 CD 5008)....ಇದು ಪಾಂಡಿಚೇರಿ ನೋಂದಣಿ ಹೊಂದಿರುವ ಕಾರು.

  ತೆರಿಗೆ ಕಡಿಮೆ

  ತೆರಿಗೆ ಕಡಿಮೆ

  ಕರ್ನಾಟಕಕ್ಕೆ ಹೋಲಿಸಿಕೊಂಡ್ರೆ ಪುದುಚೇರಿಯಲ್ಲಿ ಕಡಿಮೆ ತೆರಿಗೆ ಹೊಂದಿದೆ. ಶೇಕಡಾ 20ರಷ್ಟು ತೆರಿಗೆ ಕಡಿಮೆ ಇರಲಿದೆ. ಹೀಗಾಗಿ, ಬಹುತೇಕ ದುಬಾರಿ ಕಾರುಗಳು ಇಲ್ಲಿಯೇ ನೋಂದಣಿ ಮಾಡಿಸುವ ಪ್ರಕ್ರಿಯೆ ದೇಶದಲ್ಲಿದೆ. ದರ್ಶನ್ ಕೊಂಡುಕೊಂಡಿರುವ ಕಾರಿನ ಬೆಲೆ ಸುಮಾರು 6 ಕೋಟಿ ಇದೆ ಎನ್ನಲಾಗಿದೆ.

  ದರ್ಶನ್ ಹೊಸ ಕಾರಿಗೆ ಅಡ್ಡ ಹಾಕಿದ ಪೊಲೀಸರು

  ಯಾವುದೇ ಅಪರಾಧವಿಲ್ಲ

  ಯಾವುದೇ ಅಪರಾಧವಿಲ್ಲ

  ಕರ್ನಾಟಕ ಬಿಟ್ಟು ಪುದುಚೇರಿಯಲ್ಲಿ ದರ್ಶನ್ ಕಾರಿನ ನೋಂದಣಿ ಮಾಡಿಸಿರುವುದು ಯಾವುದೇ ಅಪರಾಧವಿಲ್ಲ. ಒಂದು ವೇಳೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬೇರೆ ನೋಂದಣಿ ವಾಹನ ಕರ್ನಾಟಕದಲ್ಲಿ ಸಂಚರಿಸಿದ್ರೆ, ಸ್ಥಳೀಯ ಆರ್.ಟಿ.ಓ ದಲ್ಲಿ ದಂಡ ಕಟ್ಟಬೇಕಾಗುತ್ತೆ. ಹೀಗಾಗಿ, ಲಂಬೋರ್ಗಿನಿ ಕಾರಿನ ಮೇಲೆ ಆರ್.ಟಿ.ಓ ಅಧಿಕಾರಿಗಳು ಗಮನವಿಟ್ಟಿದ್ದಾರೆ.

  ಅಮಲಾ ಮೇಲೆ ಕೇಸ್ ದಾಖಲಾಗಿತ್ತು

  ಅಮಲಾ ಮೇಲೆ ಕೇಸ್ ದಾಖಲಾಗಿತ್ತು

  ಈ ಹಿಂದೆ ಬಹುಭಾಷಾ ನಟಿ ಅಮಲಾ ಪೌಲ್ ಮತ್ತು ಫಾವದ್ ಫಾಸಿಲ್ ತಮ್ಮ ದುಬಾರಿ ಕಾರ್ ನ್ನ ತೆರಿಗೆಯಿಂದ ತಪ್ಪಿಸಿಕೊಳ್ಳಲು ಪುದುಚೇರಿಯಲ್ಲಿ ನೋಂದಣಿ ಮಾಡಿಸಿದ್ದರು. ಇಬ್ಬರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.

  ದರ್ಶನ್ ಮನೆಗೆ ಸುಗ್ಗಿ ಹಬ್ಬಕ್ಕೆ ಬಂದ ವಿಶೇಷ ಅತಿಥಿ

  English summary
  Kannada actor darshan under rto lens for registering his lamborghini car in pondicherry. recently Challenging Star Darshan bought a new Lamborghini car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X