ನಟ ಪ್ರೇಮ್ 25ನೇ ಸಿನಿಮಾಗೆ ದರ್ಶನ್ ಕ್ಲಾಪ್

ನಟ ನೆನಪಿರಲಿ ಪ್ರೇಮ್ 25ನೇ ಸಿನಿಮಾ ಇಂದು ಲಾಂಚ್ ಆಗಿದೆ. 'ಪ್ರೇಮಂ ಪೂಜ್ಯಂ' ಸಿನಿಮಾದ ಮುಹೂರ್ತಕ್ಕೆ ನಟ ದರ್ಶನ್ ಆಗಮಿಸಿ ಶುಭಾಶಯ ಕೋರಿದ್ದಾರೆ.

'ಪ್ರೇಮಂ ಪೂಜ್ಯಂ' ಪ್ರೇಮ್ ನಟನೆಯ 25ನೇ ಸಿನಿಮಾವಾಗಿದ್ದು, ಚಾಲೆಂಜಿಂಗ್ ಸ್ಟಾರ್ ಸಿನಿಮಾಗೆ ಕ್ಲಾಪ್ ಮಾಡಿದ್ದಾರೆ. ಪ್ರೇಮ್ ರನ್ನು ತಬ್ಬಿಕೊಂಡು ಸಿನಿಮಾಗೆ ಒಳ್ಳೆಯದಾಗಲಿ ಎಂದು ಡಿ ಬಾಸ್ ವಿಶ್ ಮಾಡಿದ್ದಾರೆ.

ಪ್ರೇಮ್ ಹಾಗೂ ದರ್ಶನ್ ನಡುವೆ ಬಹಳ ವರ್ಷಗಳಿಂದ ಒಳ್ಳೆಯ ಒಡನಾಟ ಇದೆ. ದರ್ಶನ್ ಅವರ ತೂಗುದೀಪ ಬ್ಯಾನರ್ ನ ಮೊದಲ ಸಿನಿಮಾ 'ಜೊತೆ ಜೊತೆಯಲಿ' ಚಿತ್ರಕ್ಕೆ ಸಹ ಪ್ರೇಮ್ ನಾಯಕನಾಗಿದ್ದರು.

darshan launched actor prem 25th movie prem poojyam

ಅಂದಹಾಗೆ, 'ಪ್ರೇಮಂ ಪೂಜ್ಯಂ' ಸಿನಿಮಾದಲ್ಲಿ ಪ್ರೇಮ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಸ್ಟೈಲಿಶ್ ಆಗಿ ಚಿತ್ರದಲ್ಲಿ ಅವರು ಇರಲಿದ್ದಾರೆ. ಈ ಚಿತ್ರವನ್ನು ಡಾ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರದಲ್ಲಿ ನಾಲ್ಕು ಶೇಡ್ ನಲ್ಲಿ ಪ್ರೇಮ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರ ಲುಕ್ ಗಮನ ಸೆಳೆದಿದೆ. ಚಿತ್ರಕ್ಕೆ ಐಂದ್ರಿತಾ ರೇ ನಾಯಕಿಯಾಗಿದ್ದು, ಇಂದಿನಿಂದ ಶೂಟಿಂಗ್ ಶುರು ಆಗಿದೆ.

More from Filmibeat

English summary
Kannada actor, challenging star Darshan launched Nenapirali Prem's 25th movie title 'prem poojyam'. This movie is directed by Raghavendra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X