For Quick Alerts
  ALLOW NOTIFICATIONS  
  For Daily Alerts

  ರಾಮನ ಕಥೆ ಕಂಡು ಧನ್ಯನಾದ ಚಾಲೆಂಜಿಂಗ್ ಸ್ಟಾರ್

  By Pavithra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ನೇಹ ಜೀವಿ ಎನ್ನುವುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಸಿನಿಮಾರಂಗ ಹಾಗೂ ಅವರ ಸುತ್ತ ಮುತ್ತಲಿನವರ ಒಳಿತಿಗಾಗಿ ಸದಾ ಸಿದ್ದರಿರುವ ನಾಯಕ ನಟರಲ್ಲಿ ಡಿ ಬಾಸ್ ಕೂಡ ಒಬ್ಬರು. ಇತ್ತೀಚಿಗಷ್ಟೇ ದರ್ಶನ್ ಸ್ನೇಹಿತನ ಚಿತ್ರಕ್ಕೆ ಧ್ವನಿ ನೀಡುತ್ತಾರೆ ಎಂದು ಸುದ್ದಿ ಆಗಿತ್ತು.

  ಅದಂತೆಯೇ ಬ್ಯುಸಿ ಶೆಡ್ಯೂಲ್ ನಲ್ಲಿ ದರ್ಶನ್ ಬಿಡುವು ಮಾಡಿಕೊಂಡು ಗೆಳೆಯ ಯಶಸ್ ಸೂರ್ಯ ಅವರ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಯಶಸ್ ಸೂರ್ಯ ದರ್ಶನ್ ಅವರ ಆಪ್ತ ಸ್ನೇಹಿತರು. ದರ್ಶನ್ ಭಾಗಿ ಆಗುವ ಬಹಳಷ್ಟು ಕಾರ್ಯಕ್ರಮಗಳಲ್ಲಿ ಯಶಸ್ ಕಾಣಿಸಿಕೊಳ್ಳುತ್ತಾರೆ.

  ಫಲಿಸಲಿಲ್ಲ ದರ್ಶನ್ ಪ್ರಚಾರ: ಚಾಮುಂಡೇಶ್ವರಿಯಲ್ಲಿ ಸಿದ್ದು ಗೆಲ್ಲಲಿಲ್ಲ.!ಫಲಿಸಲಿಲ್ಲ ದರ್ಶನ್ ಪ್ರಚಾರ: ಚಾಮುಂಡೇಶ್ವರಿಯಲ್ಲಿ ಸಿದ್ದು ಗೆಲ್ಲಲಿಲ್ಲ.!

  ಧ್ವನಿ ನೀಡುವ ಮುನ್ನ ಚಿತ್ರದ ಟ್ರೇಲರ್ ನೋಡಿದ ತಕ್ಷಣವೇ ಚಾಲೆಂಜಿಂಗ್ ಸಿನಿಮಾಗೆ ಧ್ವನಿ ನೀಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದಾ ಕಮರ್ಷಿಯಲ್ ,ಮಾಸ್ ಡೈಲಾಗ್ ಹೊಡೆಯುತ್ತಿದ್ದ ಡಿ ಬಾಸ್ ಈ ಬಾರಿ ದರ್ಶನ್ ಅವರ ಧ್ವನಿಯಲ್ಲಿ ಬೇರೆಯದ್ದೇ ಸಂಭಾಷಣೆ ಕೇಳುವ ಅವಕಾಶ ಸಿಕ್ಕಿದೆ. ಹಾಗಾದರೆ ದರ್ಶನ್ ಹೇಳಿದ ಸಂಭಾಷಣೆ ಯಾವುದು? ರಾಮಧಾನ್ಯ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

  ರಾಮನನ್ನು ಕಂಡು ಧನ್ಯರಾದ ಡಿ ಬಾಸ್

  ರಾಮನನ್ನು ಕಂಡು ಧನ್ಯರಾದ ಡಿ ಬಾಸ್

  ಸಂತ ಕವಿ ಕನಕದಾಸರ ಜೀವನ ಸಾಧನೆ ಆಧಾರಿತ ರಾಮಧಾನ್ಯ ಚಿತ್ರಕ್ಕೆ ದರ್ಶನ್ ಹಿನ್ನಲೆ ಧ್ವನಿ ನೀಡಿದ್ದಾರೆ. ನಟ ಯಶಸ್ ಸೂರ್ಯ ಸಿನಿಮಾದಲ್ಲಿ ನಾಯಕನಾಗಿ ಅಭಿನಯ ಮಾಡಿದ್ದು ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಮೂರು ಕಥೆಯನ್ನು ಹೊಂದಿರುವ ಚಿತ್ರವಾಗಿದೆ.

  ಕನಕದಾಸರ ಆಶಯ ಡಿ ಬಾಸ್ ಧ್ವನಿಯಲ್ಲಿ

  ಕನಕದಾಸರ ಆಶಯ ಡಿ ಬಾಸ್ ಧ್ವನಿಯಲ್ಲಿ

  ರಾಮಧಾನ್ಯ ಚಿತ್ರ ಶುರುವಾಗುವ ಮೊದಲು ಮತ್ತು ಚಿತ್ರದ ಕೊನೆಯಲ್ಲಿ ಕನಕದಾಸರ ಆಶಯವನ್ನು ಡಿ ಬಾಸ್ ಧ್ವನಿಯಲ್ಲಿ ಕೇಳಬಹುದಾಗಿದೆ. ಚಿತ್ರ ನೋಡುವ ಪ್ರೇಕ್ಷಕರಿಗೆ ದಾಸ ಆಶಯವನ್ನು ತಿಳಿಸಿ ಹೇಳಲಿದ್ದಾರೆ ದರ್ಶನ್.

  ಉತ್ತಮ ಪ್ರಯತ್ನಕ್ಕೆ ಬೆಂಬಲ ನೀಡಿ

  ಉತ್ತಮ ಪ್ರಯತ್ನಕ್ಕೆ ಬೆಂಬಲ ನೀಡಿ

  ಸಿನಿಮಾಗೆ ಧ್ವನಿ ನೀಡಿದ ನಂತರ ಚಿತ್ರದ ಬಗ್ಗೆ ಮಾತನಾಡಿರುವ ದರ್ಶನ್ ರಾಮಧಾನ್ಯ ಚಿತ್ರ ಇದೇ ತಿಂಗಳು ಬಿಡುಗಡೆ ಆಗುತ್ತಿದೆ. ಹೊಸ ರೀತಿಯ ಹಾಗೂ ಒಳ್ಳೆ ಪ್ರಯತ್ನಗಳಿಗೆ ಅವಕಾಶ ನೀಡಿ ಎಂದು ಸ್ನೇಹಿತನಿಗಾಗಿ ಮನವಿ ಮಾಡಿದ್ದಾರೆ.

  ಕುತೂಹಲ ಮೂಡಿಸಿರುವ ರಾಮಧ್ಯಾನ

  ಕುತೂಹಲ ಮೂಡಿಸಿರುವ ರಾಮಧ್ಯಾನ

  ರಾಮಧ್ಯಾನ ಸಿನಿಮಾವನ್ನ ದಶಮುಖ ವೆಂಚರ್ಸ್ ನಿರ್ಮಾಣ ಮಾಡಿದ್ದು ಟಿ ಎನ್ ನಾಗೇಶ ನಿರ್ದೇಶನ ಮಾಡಿದ್ದಾರೆ. ಬೆನಕರಾಜು ಕ್ಯಾಮೆರಾ ವರ್ಕ್ ಇರುವ ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನವಿದೆ . ಇನ್ನು ತಾರಾಗಣದಲ್ಲಿ ಯಶಸ್ ಸೂರ್ಯ, ನಿಮಿಕ ರತ್ನಾಕರ್, ಮಂಡ್ಯ ರಮೇಶ್, ಶಿವರಾಂ, ಅರುಣಾ ಬಾಲರಾಜ್ ಇನ್ನು ಅನೇಕರು ಅಭಿನಯಿಸಿದ್ದಾರೆ. ಇದೇ ತಿಂಗಳ 25 ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

  English summary
  Kannada actor Darshan lends his voice to Kannada movie Ramadhanya , actor Yasha Surya acting in Ramadhanya film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X