ಸ್ನೇಹಿತನಿಗಾಗಿ ಮತ್ತೆ ಸಹಾಯ ಮಾಡಿದ ದಾಸ ದರ್ಶನ್
Recommended Video

ನಟ ದರ್ಶನ್ ತಮ್ಮ ಸ್ನೇಹಿತರಿಗಾಗಿ ಯಾವುದೇ ಸಹಾಯ ಬೇಕಾದರು ಮಾಡುತ್ತಾರೆ. ತಾವು ಬೆಳೆಯುವುದರ ಜೊತೆಗೆ ತಮ್ಮ ಜೊತೆ ಇರುವವರನ್ನು ಸಹ ಬೆಳೆಸುವ ಗುಣ ಅವರಿಗಿದೆ. ಇನ್ನು ಸದ್ಯ ಮತ್ತೆ ದರ್ಶನ್ ತಮ್ಮ ಸ್ನೇಹಿತನಿಗಾಗಿ ಸಹಾಯ ಮಾಡಿದ್ದಾರೆ.
ನಟ ಯಶಸ್ ಸೂರ್ಯ ನಟನೆಯ 'ರಾಮಧಾನ್ಯ' ಸಿನಿಮಾದ ದರ್ಶನ್ ಧ್ವನಿ ನೀಡಿದ್ದಾರೆ. ಚಿತ್ರದ ಪ್ರಾರಂಭದ ಒಂದು ನಿಮಿಷ ಮತ್ತು ಕೊನೆಯ ಒಂದು ನಿಮಿಷ ಅವರ ಧ್ವನಿ ಬರಲಿದೆ. ಸಿನಿಮಾದ ಆಶಯವನ್ನು ದರ್ಶನ್ ತಮ್ಮ ಧ್ವನಿಯ ಮೂಲಕ ವಿವರಿಸಲಿದ್ದಾರೆ. ದರ್ಶನ್ ಅವರ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡಿರುವ ಯಶಸ್ ಸೂರ್ಯಗಾಗಿ ದರ್ಶನ್ ಈ ಸಹಾಯ ಮಾಡಿದ್ದಾರೆ.

ಮೊದಲು ದರ್ಶನ್ 'ರಾಮಧಾನ್ಯ' ಸಿನಿಮಾದ ಟೀಸರ್ ಅನ್ನು ನೋಡಿ ಇಷ್ಟ ಪಟ್ಟು ತಮ್ಮ ಧ್ವನಿ ನೀಡಿದ್ದಾರಂತೆ. ಇನ್ನು 'ರಾಮಧಾನ್ಯ' ಸಿನಿಮಾದ ಆಡಿಯೋವನ್ನು ಸಹ ದರ್ಶನ್ ಮೇ 9ಕ್ಕೆ ಬಿಡುಗಡೆ ಮಾಡಲಿದ್ದಾರೆ. ಚಿತ್ರದಲ್ಲಿ ಸಾಫ್ಟ್ ವೇರ್ ಇಂಜಿನಿಯರ್, ರಾಮ, ಕನಕದಾಸ ಸೇರಿ ನಾಲ್ಕು ಬೇರೆ ಬೇರೆ ಶೇಡ್ ಗಳಲ್ಲಿ ಯಶಸ್ ಸೂರ್ಯ ನಟಿಸುತ್ತಿದ್ದಾರೆ. ನಾಗೇಶ್ ಕುಮಾರ್ ಚಿತ್ರದ ಆಕ್ಷನ್ ಕಟ್ ಹೇಳಿದ್ದಾರೆ.
ಅಂದಹಾಗೆ, ಈ ಹಿಂದೆ ಧ್ರುವ ಸರ್ಜಾ ನಟನೆಯ 'ಭರ್ಜರಿ' ಸಿನಿಮಾಗೆ ಸಹ ದರ್ಶನ್ ತಮ್ಮ ಧ್ವನಿ ನೀಡಿದ್ದರು.


Click it and Unblock the Notifications











