ಯಶ್ ನಂತರ ಗಡ್ಡಧಾರಿ ಆದ ದರ್ಶನ್: ಇದರ ಹಿಂದಿದ್ದಾರೆ ಆ ಡೈರೆಕ್ಟರ್.!

Recommended Video

'KGF' ಬೀಟ್ ಮಾಡೋಕೆ ರೆಡಿಯಾದ ರಾಬರ್ಟ್..!?

ತುಂಬಾ ಜನ ನಟರು ಗಡ್ಡ ಬಿಟ್ಟು ಸಿನಿಮಾ ಮಾಡಿದ್ದಾರೆ. ಆದ್ರೆ, ಕೆಜಿಎಫ್ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಬಿಟ್ಟಿದ್ದ ಗಡ್ಡ ದೊಡ್ಡ ಸದ್ದು ಮಾಡಿತ್ತು. ಇದಾದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಇದು ಟ್ರೆಂಡ್ ಆಗಿದೆ. ಯಶ್ ಅಭಿಮಾನಿಗಳು ಗಡ್ಡ ಬಿಟ್ಟು ಕೆಜಿಎಫ್ ಟ್ರೆಂಡ್ ಮುಂದುವರಿಸುತ್ತಿದ್ದಾರೆ.

ಈ ನಡುವೆ ಗೋಲ್ಡನ್ ಸ್ಟಾರ್ ಗಣೇಶ್ 99 ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ಗಣೇಶ್ ಗಡ್ಡಧಾರಿ ಪಾತ್ರದಲ್ಲಿ ಕಾಣಿಸಿಕೊಂಡರು. ಆದ್ರೆ, ಗೋಲ್ಡನ್ ಸ್ಟಾರ್ ನಿಜವಾದ ಗಡ್ಡ ಬಿಟ್ಟಿಲ್ಲ ಎಂಬುದು ಕೆಲವು ಅಭಿಮಾನಿಗಳಿ ನಿರಾಸೆ ಉಂಟು ಮಾಡಿತ್ತು.

ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗಡ್ಡ ವಿಷ್ಯದಲ್ಲಿ ಸುದ್ದಿಯಾಗುತ್ತಿದ್ದಾರೆ. ಕುರುಕ್ಷೇತ್ರ, ಯಜಮಾನ ಚಿತ್ರಗಳ ನಂತರ ದರ್ಶನ್ ಅವರ ಲುಕ್ ಸ್ವಲ್ಪ ಬದಲಾಗುತ್ತಿದೆ. ಇಷ್ಟು ದಿನ ಇಲ್ಲದ ಈ ಗಡ್ಡ ಈಗ್ಯಾಕೆ ಎಂಬ ಕುತೂಹಲ ಕಾಡುತ್ತಿದೆ. ಅದಕ್ಕೆ ಕಾರಣ ಆ ಡೈರೆಕ್ಟರ್ ಮತ್ತು ಆ ಸಿನಿಮಾ. ಮುಂದೆ ಓದಿ.....

ರಾಬರ್ಟ್ ಗಾಗಿ ದರ್ಶನ್ ಗಡ್ಡ.!

ರಾಬರ್ಟ್ ಗಾಗಿ ದರ್ಶನ್ ಗಡ್ಡ.!

ಯಜಮಾನ ಮುಗಿದ ನಂತರ ದರ್ಶನ್ ಗಡ್ಡ ಬಿಟ್ಟಿದ್ದಾರೆ. ಇಷ್ಟು ದಿನ ಅದು ಒಡೆಯ ಸಿನಿಮಾಗೆ ಇರಬಹುದು ಎಂದುಕೊಂಡಿದ್ದರು. ಅದರ ಜೊತೆಗೆ ರಾಬರ್ಟ್ ಚಿತ್ರಕ್ಕೂ ತಯಾರಿ ನಡೆದಿದೆ ಎಂಬುದು ಈಗ ಬಹಿರಂಗವಾಗಿದೆ. ಹೌದು, ದರ್ಶನ್ ಗಡ್ಡ ಬಿಡುತ್ತಿರುವುದು ರಾಬರ್ಟ್ ಚಿತ್ರಕ್ಕಾಗಿ.

ಫೋಟೋಶೂಟ್ ಆಗಬೇಕಿದೆ

ಫೋಟೋಶೂಟ್ ಆಗಬೇಕಿದೆ

ಅಕ್ಷಯ ತೃತೀಯ ದಿನದಂದು ರಾಬರ್ಟ್ ಚಿತ್ರದ ಮುಹೂರ್ತ ನಡೆಯಲಿದೆ. ಅದಾದ ಬಳಿಕ ಭರ್ಜರಿ ಫೋಟೋಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಫೋಟೋಶೂಟ್ ಮುಗಿಯುತ್ತಿದ್ದಂತೆ ಸಿನಿಮಾ ಶೂಟಿಂಗ್ ಗೂ ಆರಂಭಿಸಿ ಆದಷ್ಟೂ ಬೇಗ ಮುಗಿಸಲು ಪ್ಲಾನ್ ಮಾಡಲಾಗಿದೆ.

ದರ್ಶನ್ ಈ ಲುಕ್ ಗೆ ಕಾರಣ ಡೈರೆಕ್ಟರ್

ದರ್ಶನ್ ಈ ಲುಕ್ ಗೆ ಕಾರಣ ಡೈರೆಕ್ಟರ್

ರಾಬರ್ಟ್ ಚಿತ್ರದ ಕಥೆ ಏನು ಎಂಬುದರ ಬಗ್ಗೆ ಸುಳಿವು ಕೂಡ ಸಿಕ್ಕಿಲ್ಲ. ಆದ್ರೆ, ದರ್ಶನ್ ಅವರ ಗೆಟಪ್ ನಲ್ಲಿ ಹೊಸತನ ನೋಡಬಹುದು ಎಂಬುದಕ್ಕೆ ಅವರ ಹೊಸ ಸ್ಟೈಲ್ ಕಾರಣವಾಗಿದೆ. ಡಿ ಬಾಸ್ ಗೆ ಇಂತಹದೊಂದು ಚಿತ್ರಕತೆ ರೆಡಿ ಮಾಡಿ, ವಿಭಿನ್ನ ಲುಕ್ ನಲ್ಲಿ ತೋರಿಸಬೇಕೆಂಬ ನಿರ್ಧಾರ ನಿರ್ದೇಶಕ ತರುಣ್ ಸುಧೀರ್ ಅವರದ್ದು.

ನಾಯಕಿ ಇಲ್ಲದೇ ಚಿತ್ರೀಕರಣಕ್ಕೆ ಹೊರಟ ರಾಬರ್ಟ್

ನಾಯಕಿ ಇಲ್ಲದೇ ಚಿತ್ರೀಕರಣಕ್ಕೆ ಹೊರಟ ರಾಬರ್ಟ್

ಸದ್ಯ ರಾಬರ್ಟ್ ಚಿತ್ರದ ಎಲ್ಲ ಪೂರ್ವ ತಯಾರಿ ಆಗಿದೆ. ಮುಹೂರ್ತ ಮುಗಿದ ಬಳಿಕ ನೇರವಾಗಿ ಚಿತ್ರೀರಣಕ್ಕೆ ಹೋಗುತ್ತಿದ್ದಾರೆ. ಆದ್ರೆ, ರಾಬರ್ಟ್ ಗೆ ನಾಯಕಿ ಯಾರು ಎಂಬುದು ಸದ್ಯದವರೆಗೂ ಆಯ್ಕೆಯಾಗಿಲ್ಲ. ಒಟ್ನಲ್ಲಿ, ಭಾರಿ ನಿರೀಕ್ಷೆಗಳೊಂದಿಗೆ ರಾಬರ್ಟ್ ಆರಂಭವಾಗುತ್ತಿದ್ದು, 2020ಕ್ಕೆ ಈ ಸಿನಿಮಾ ಬರೋದು ಪಕ್ಕಾ.

More from Filmibeat

English summary
Challenging star darshan have ready to go for robert shooting. d boss look is very different in this movie says source. the movie directed by tarun sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X