'ರಾಬರ್ಟ್' ಚಿತ್ರದ ದರ್ಶನ್ ಲುಕ್ ಲೀಕ್.!
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ರಾಬರ್ಟ್ ಚಿತ್ರದಲ್ಲಿ ಡಿ ಬಾಸ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಅಸಲಿ ಲುಕ್ ಹೊರಬಿದ್ದಿದೆ. ರಾಬರ್ಟ್ ಚಿತ್ರದ ದರ್ಶನ್ ನಿಜ ಗೆಟಪ್ ಎಂದು ಹೇಳಲಾಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ಅಧಿಕೃತವಲ್ಲದಿದ್ದರೂ ಚಿತ್ರತಂಡದಿಂದ ಯಾರಾದರೂ ಲೀಕ್ ಮಾಡಿರಬಹುದಾ ಎಂಬ ಅನುಮಾನ ಕಾಡ್ತಿದೆ. ಯಾಕಂದ್ರೆ, ಇತ್ತೀಚಿಗಷ್ಟೆ ಅಧಿಕೃತವಾಗಿ ಬಿಡುಗಡೆಯಾಗಿದ್ದ ಥೀಮ್ ಪೋಸ್ಟರ್ ಗೂ ಈ ಫೋಟೋಗೂ ಬಹಳ ಹೋಲಿಕೆ ಇದೆ. ಥೀಮ್ ಪೋಸ್ಟರ್ ನಲ್ಲಿ ಬೈಕ್ ಮೇಲಿ ಹಿಮ್ಮುಖವಾಗಿ ಕೂತಿದ್ದ ದರ್ಶನ್ ಗೆಟಪ್ ರಿಲೀಸ್ ಆಗಿತ್ತು. ಇದು ಅದರ ಅಸಲಿ ಫೋಟೋ ಎನ್ನುವಷ್ಟು ಪಕ್ಕಾ ಆಗಿದೆ.
ಆದರೆ ನಿರ್ದೇಶಕ ತರುಣ್ ಸುಧೀರ್ ಈ ಬಗ್ಗೆ ಹೇಳುವವರೆಗೂ ಇದನ್ನ ನಂಬುವಂತಿಲ್ಲ. ಈ ಮೊದಲೇ ಗೊತ್ತಿರುವಂತೆ ರಾಬರ್ಟ್ ಚಿತ್ರಕ್ಕಾಗಿ ಭರ್ಜರ ಫೋಟೋಶೂಟ್ ಮಾಡಲಾಗಿತ್ತು. ಈ ವೇಳೆ ಕ್ಲಿಕ್ಕಿಸಿರುವ ಫೋಟೋ ಇದು ಎನ್ನಲಾಗಿದೆ.

ಅಚ್ಚರಿ ಅಂದ್ರೆ ಈ ಫೋಟೋದಲ್ಲಿ ದರ್ಶನ್ ಜೊತೆ ಮರಿ ಟೈಗರ್ ವಿನೋದ್ ಪ್ರಭಾಕರ್ ಕೂಡ ಇದ್ದಾರೆ. ಹಾಗಾಗಿ, ರಾಬರ್ಟ್ ಸಿನಿಮಾದಲ್ಲೂ ವಿನೋದ್ ಪ್ರಭಾಕರ್ ಇರಬಹದಾ ಎಂಬ ಕುತೂಹಲ ಕಾಡ್ತಿದೆ.
ಈಗಾಗಲೇ ರಾಬರ್ಟ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ತರುಣ್ ಸುಧೀರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಹೆಬ್ಬುಲಿ ಖ್ಯಾತಿಯ ಉಮಾಪತಿ ಗೌಡ ನಿರ್ಮಿಸುತ್ತಿದ್ದಾರೆ. ಇನ್ನುಳಿದಂತೆ ಕಲಾವಿದರ ಬಗ್ಗೆ ಆಗಲಿ ಅಥವಾ ನಾಯಕಿ ಬಗ್ಗೆ ಆಗಲಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.


Click it and Unblock the Notifications











