ದಾಸನ 'ಲೂನಾ' ಟು 'ಲಂಬೋರ್ಗಿನಿ' ಪಯಣದ ಫ್ಲ್ಯಾಶ್ ಬ್ಲ್ಯಾಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಲಂಬೋರ್ಗಿನಿ ಕಾರಿನಲ್ಲಿ ಸುತ್ತಾಡ್ತಿದ್ದಾರೆ. ದರ್ಶನ್ ಸ್ನೇಹಿತರು, ಆಪ್ತರು ಎಲ್ಲರೂ ಮನೆಗೆ ಬಂದು ಈ ಕಾರನ್ನ ನೋಡಿಕೊಂಡು ಹೋಗ್ತಿದ್ದಾರೆ. ಇದುವರೆಗೂ ಕನ್ನಡದಲ್ಲಿ ಅತ್ಯಂತ ದುಬಾರಿ ಕಾರು ಹೊಂದಿರುವ ನಟ ಎಂದು ಗುರುತಿಸಿಕೊಳ್ಳುತ್ತಿದ್ದಾರೆ.
ನಿಮಗೆ ಗೊತ್ತಿರದ ಇನ್ನೊಂದು ವಿಚಾರ ಅಂದ್ರೆ, ದಾಸ ಈ ಲಂಬೋರ್ಗಿನಿ ಹತ್ತುವ ಮೊದಲು ಲೂನಾ ಬೈಕಿನಲ್ಲಿ ಜೀವನ ಆರಂಭಿಸಿದ್ದರು ಎನ್ನುವುದು ವಿಶೇಷ. ಅಂದು ಲೂನಾದಲ್ಲಿ ಓಡಾಡುತ್ತಿದ್ದ ಚಕ್ರವರ್ತಿ ಈಗ ದುಬಾರಿ ಲಂಬೋರ್ಗಿನಿ ಕಾರಿನಲ್ಲಿ ಓಡಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಈ ಲೂನಾ ಗಾಡಿ ಈಗಲೂ ದರ್ಶನ್ ಅವರ ಮನೆಯಲ್ಲಿದೆ. ಸುಮಾರು 39 ವರ್ಷಗಳ ಹಿಂದೆ ದರ್ಶನ್ ಗೆ, ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಈ ಬೈಕ್ ಕೊಡಿಸಿದ್ದರು. ಅಂದಿನ ಕಷ್ಟದ ದಿನಗಳನ್ನ ದರ್ಶನ್ ಇದೇ ಲೂನಾ ಬೈಕ್ ನಲ್ಲಿ ಕಳೆದಿದ್ದಾರೆ.
ಸದ್ಯ, ದರ್ಶನ್ ಅವರ ಮನೆ ಮುಂದೆ ಸುಮಾರು 8 ರಿಂದ 9 ಕಾರುಗಳಿವೆ. ಹೀಗಿದ್ದರೂ, ತಂದೆ ಕೊಡಿಸಿದ ಲೂನಾ ಬೈಕನ್ನ ಈಗಲೂ ಮನೆಯಲ್ಲಿ ಇಟ್ಕೊಂಡಿದ್ದಾರಂತೆ. ಆಗಾಗ ಈ ಬೈಕ್ ನಲ್ಲಿ ಸುತ್ತಾಡ್ತಾರೆ ಎಂದು ಸ್ವತಃ ದರ್ಶನ್ ಅವರೇ ಹೇಳಿಕೊಂಡಿದ್ದರು.


Click it and Unblock the Notifications











