Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹುಲಿ ದಿನಾಚರಣೆಯಲ್ಲಿ 'ಡಿ-ಬಾಸ್' ಸಾರಿದ್ರು ಉತ್ತಮ ಸಂದೇಶ
Recommended Video

ವಿಶ್ವ ಹುಲಿ ದಿನಾಚರಣೆಯನ್ನು ನಿನ್ನೆ(ಜುಲೈ 30) ಎಲ್ಲೆಡೆ ಆಚರಣೆ ಮಾಡಲಾಯಿತು. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿಯೂ ವಿಶ್ವ ಹುಲಿ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಿದ್ರು. ಸಮಾರಂಭದ ಮುಖ್ಯ ಅತಿಥಿಯಾಗಿ ಕನ್ನಡ ಸಿನಿಮಾರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿ ಆಗಿದ್ದರು.
ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ಡಿ ಬಾಸ್ ಇತ್ತೀಚಿನ ದಿನಗಳಲ್ಲಿ ಅರಣ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಈ ಮೂಲಕ ಸಾಮಾನ್ಯ ಜನರಿಗೆ ಪರಿಸರದ ಮೇಲಿನ ಕಾಳಜಿ ಹೆಚ್ಚಾಗಲಿ ಎನ್ನುವುದು ಅರಣ್ಯ ಅಧಿಕಾರಿಗಳು ಮತ್ತು ದರ್ಶನ್ ಅವರ ಉದ್ದೇಶವಾಗಿದೆ.
ನಿನ್ನೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ದರ್ಶನ್ ಈ ಮೂಲಕ ಎಲ್ಲರಿಗೂ ಉತ್ತಮ ಸಂದೇಶವನ್ನು ಸಾರಿದ್ದಾರೆ. ಈ ಮಾತನ್ನು ಕೇಳಿದ ಪ್ರತಿಯೊಬ್ಬರು ಹೌದು ನಾವು ಹೀಗೆ ಬದುಕಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ, ಹಾಗಾದರೆ ಡಿ ಬಾಸ್ ಕೊಟ್ಟ ಸಂದೇಶವೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ದರ್ಶನ್ ಪ್ರಕಾರ ಇವರೇ ಪರಿಸರ ಪ್ರೇಮಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜವಾದ ಪ್ರಾಣಿ ಪ್ರೇಮಿ ಯಾರು ಎನ್ನುವುದನ್ನು ತಿಳಿಸಿ ಹೇಳಿದ್ದಾರೆ. ಪ್ರಾಣಿ ಪಕ್ಷಿಗಳನ್ನ ಮನೆಯಲ್ಲಿ ಸಾಕಿಕೊಂಡರೆ ಅವರು ಪರಿಸರ ಪ್ರೇಮಿ ಆಗುವುದಿಲ್ಲ ಎನ್ನುವುದು ದರ್ಶನ್ ಅವರ ನಿರ್ಧಾರ.

ನಿಜವಾದ ಪರಿಸರ ಪ್ರೇಮಿ ಯಾರು?
ನಿಜವಾದ ಪರಿಸರ ಪ್ರೇಮಿ ಅವನ ಸುತ್ತಾ ಮುತ್ತ ಸಮಾಜವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವವನು. ಪ್ರಾಣಿ ಪಕ್ಷಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಪ್ಲಾಸ್ಟಿಕ್ ಮುಕ್ತವಾಗಿರುವಂತೆ ನೋಡಿಕೊಳ್ಳುವವನೇ ನಿಜವಾದ ಪರಿಸರ ಪ್ರೇಮಿ ಎನ್ನುವುದು ದರ್ಶನ್ ಅವರ ಮಾತು.

ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡೋಣ
ಈ ಮೂಲಕ ದರ್ಶನ್ ನಮ್ಮ ಸುತ್ತಾ ಮುತ್ತ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಿಕೊಳ್ಳೋಣ ಎನ್ನುವ ಸಂದೇಶವನ್ನು ಸಾರಿದ್ದಾರೆ. ದರ್ಶನ್ ಅವರ ಸ್ಪೂರ್ತಿ ಮಾತುಗಳಿಂದ ಅಭಿಮಾನಿಗಳು ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.

ದರ್ಶನ್ ಆಶ್ರಯದಲ್ಲಿ ಸಾಕಷ್ಟು ಪ್ರಾಣಿಗಳು
ಚಾಲೆಂಜಿಂಗ್ ಸ್ಟಾರ್ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳು ಆಶ್ರಯ ಪಡೆಯುತ್ತಿವೆ. ಇವುಗಳನ್ನು ನೋಡಿಕೊಳ್ಳು ಸಾಕಷ್ಟು ಜನರನ್ನು ಕೆಲಸಕ್ಕೆ ಇಟ್ಟಿದ್ದಾರೆ ದಾಸ ದರ್ಶನ್.