For Quick Alerts
  ALLOW NOTIFICATIONS  
  For Daily Alerts

  ನಟಿ ರಕ್ಷಿತಾಗೆ ಮಾತು ಕೊಟ್ಟ ದರ್ಶನ್, DKDಯಲ್ಲಿ ನಿಜ ಹೇಳಿದ ರಕ್ಷಿತಾ!

  |

  ಸಿನಿಮಾರಂಗ ಅಂತ ಬಂದಾಗ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹಲವು ಸ್ಟಾರ್‌ಗಳು ಬಂದು ಹೋಗುತ್ತಾರೆ. ಇನ್ನು ಕಾಲ ಕಾಲಕ್ಕೆ ಹಲವು ನಟ, ನಟಿಯರು ಮುನ್ನೆಲೆಗೆ ಬರುತ್ತಾರೆ. ಇನ್ನು ಕೆಲವರು ಜೋಡಿಯಾಗಿ ಹೆಸರು ಮಾಡುತ್ತಾರೆ. ಹಾಗೆ ಜೋಡಿಯಾಗಿ ಗಮನ ಸೆಳೆದವರಲ್ಲಿ ನಟ ದರ್ಶನ್ ಮತ್ತು ರಕ್ಷಿತಾ ಜೋಡಿ ಕೂಡ ಒಂದು.

  ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್ ಮತ್ತು ರಕ್ಷಿತಾ ನಟನೆಯ ಹಲವು ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಹಾಗಾಗಿ ಈ ಜೋಡಿಯನ್ನು ಒಟ್ಟಿಗೆ ಹಾಕಿ ಸಿನಿಮಾ ಮಾಡಬೇಕು ಎಂದು ನಿರ್ಮಾಪಕ, ನಿರ್ದೇಶಕರು ಒಂದು ಕಾಲದಲ್ಲಿ ತುದಿಗಾಲಲ್ಲಿ ನಿಲ್ಲುತ್ತಿದ್ದರು.

  ದರ್ಶನ್ ಸಿನಿ ಜರ್ನಿಗೆ 25 ವರ್ಷ: ಪಾರ್ಟಿಯಲ್ಲಿ ಮಿಂಚಿದ ತಾರೆಯರು!ದರ್ಶನ್ ಸಿನಿ ಜರ್ನಿಗೆ 25 ವರ್ಷ: ಪಾರ್ಟಿಯಲ್ಲಿ ಮಿಂಚಿದ ತಾರೆಯರು!

  ಈಗ ಈ ಜೋಡಿಯ ಬಗ್ಗೆ ಮಾತನಾಡಲು ಕಾರಣ ನಟಿ ರಕ್ಷಿತಾ. ರಕ್ಷಿತಾ ನಟ ದರ್ಶನ್ ಬಗ್ಗೆ ಹೊಸ ಹೇಳಿಕೆಯನ್ನು ಕೊಟ್ಟಿದ್ದಾರೆ. ರಕ್ಷಿತಾ ಕೊಟ್ಟ ಹೇಳಿಕೆ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಯಾಕೆಂದರೆ ದರ್ಶನ್ ರಕ್ಷಿತಾಗೆ ಕೊಟ್ಟ ಮಾತಿನ ಬಗ್ಗೆ ಹೇಳಿಕೊಂಡಿದ್ದಾರೆ.

  DKDಯಲ್ಲಿ ದರ್ಶನ್ ಸಂಭ್ರಮ!

  DKDಯಲ್ಲಿ ದರ್ಶನ್ ಸಂಭ್ರಮ!

  ಡ್ಯಾನ್ಸ್ ರಿಯಾಲಿಟಿ ಕಾರ್ಯಕ್ರಮ ಡಿಕೆಡಿಯಲ್ಲಿ ಆಗಾಗ ವಿಶೇಷ ಸಂಚಿಕೆ ಪ್ರಸಾರವಾಗುತ್ತವೆ. ಹಲವು ಸ್ಟಾರ್‌ಗಳ ಹೆಸರಲ್ಲಿ ಅವರ ಹಾಡುಗಳಿಗೆ ಸ್ಪರ್ಧಿಗಳು ನೃತ್ಯ ಮಾಡುತ್ತಾರೆ. ಈ ಬಾರಿ ನಟ ದರ್ಶನ್ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ದರ್ಶನ್ ಮತ್ತು ರಕ್ಷಿತಾ ಕಾಂಬಿನೇಶನ್‌ನ ಸುಂಟರಗಾಳಿ ಹಾಡಿಗೆ ಸ್ಪರ್ಧಿಗಳು ಇದರ ಸಣ್ಣ ಪ್ರೋಮೊ ತುಣುಕನ್ನು ಹರಿಬಿಡಲಾಗಿದೆ. ಇದರಲ್ಲಿ ನಟಿ ರಕ್ಷಿತಾ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ತನಗೆ ಕೊಟ್ಟ ಮಾತಿನ ಬಗ್ಗೆಯೂ ಮಾತನಾಡಿದ್ದಾರೆ.

  ರಕ್ಷಿತಾಗೆ ದರ್ಶನ್ ಕೊಟ್ಟ ಮಾತೇನು?

  ರಕ್ಷಿತಾಗೆ ದರ್ಶನ್ ಕೊಟ್ಟ ಮಾತೇನು?

  ದರ್ಶನ್ ಬಗ್ಗೆ ಡಿಕೆಡಿ ವೇದಿಕೆ ಮೇಲೆ ರಕ್ಷಿತಾ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ದರ್ಶನ್ ನನಗೆ ಯಾವಾಗ್ಲೂ ಒಂದು ಮಾತು ಹೇಳುತ್ತಾ ಇದ್ದರು. ಯಾವಾಗಲೂ ನೀನು ಖುಷಿಯಾಗಿ ಬದುಕಬೇಕು, ಕಷ್ಟ ಬಂದಾಗ ನಿನ್ನ ಬೆನ್ನ ಹಿಂದೆ ನನ್ನ ಕೈ ಯಾವಾಗ್ಲೂ ಇರುತ್ತೆ." ಎಂದು ದರ್ಶನ್ ಹೇಳಿದ್ದಾರೆ ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ. ಈ ಮೂಲಕ ದರ್ಶನ್ ಜೊತೆಗಿನ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ.

  ರಕ್ಷಿತಾ ದರ್ಶನ್ ಹಿಟ್ ಜೋಡಿ!

  ರಕ್ಷಿತಾ ದರ್ಶನ್ ಹಿಟ್ ಜೋಡಿ!

  ಸ್ಯಾಂಡಲ್‌ವುಡ್‌ನಲ್ಲಿ ನಟಿ ರಕ್ಷತಾ ಮತ್ತು ದರ್ಶನ್ ಅವ್ರದ್ದು ಹಿಟ್ ಜೋಡಿ. ಈ ಜೋಡಿ ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಕಲಾಸಿಪಾಳ್ಯ, ಮಂಡ್ಯ, ಅಯ್ಯ, ಸುಂಟರಗಾಳಿ ಸಿನಿಮಾಗಳಲ್ಲಿ ಈ ಜೋಡಿ ನಟಿಸಿದ್ದಾರೆ. ಈ ಸಿನಿಮಾಗಳು ಹಿಟ್ ಆದ ಕಾರಣ ಈ ಜೋಡಿಯೂ ಚಿತ್ರರಂಗದಲ್ಲಿ ಹಿಟ್ ಜೋಡಿಯಾಗಿ ಹೊರಹೊಮ್ಮಿದೆ. ಈ ಜೋಡಿ ಸಿನಿಮಾ ಬರುತ್ತೇ ಎಂದರೆ ಅಭಿಮಾನಿಗಳಿಗೂ ಹೆಚ್ಚಿನ ಕ್ರೇಜ್ ಇರುತ್ತದೆ.

  ಅಭಿನಯದಿಂದ ರಕ್ಷಿತಾ ದೂರ!

  ಅಭಿನಯದಿಂದ ರಕ್ಷಿತಾ ದೂರ!

  ಇನ್ನು ನಟಿ ರಕ್ಷಿತಾ ಬಗ್ಗೆ ಹೇಳಬೇಕು ಅಂದರೆ, ಸಿನಿಮಾರಂಗದಲ್ಲಿ ಸ್ಟಾರ್ ಆಗಿ ಮಿಂಚಿ, ಸದ್ಯ ಅಭಿನಯದಿಂದ ದೂರ ಉಳಿದಿದ್ದಾರೆ. ಇತ್ತೀಚೆಗೆ ಕಿರುತೆಯ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ನಿರ್ಮಾಪಕಿಯಾಗಿಯೂ ಬಡ್ತಿ ಹೊಂದಿದ್ದಾರೆ ನಟಿ ರಕ್ಷಿತಾ. ಏಕ್ ಲವ್ ಯಾ ಸಿನಿಮಾವನ್ನು ನಿರ್ಮಾಣ ಮಾಡುವುದರ ಜೊತೆಗೆ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಮತ್ತೆ ಬೆಳ್ಳಿ ತೆರೆಮೇಲೆ ರಕ್ಷಿತಾ ಕಮ್ ಬ್ಯಾಕ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  English summary
  Darshan Made Big Promise Actress To Rakshita, she Reveals it On DKD Stage, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X