ದರ್ಶನ್ ಮ್ಯಾನೇಜರ್ ನಿಂದ ಅರ್ಜುನ್ ಸರ್ಜಾ ಗೆ ಮೋಸ ?
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿಯಲ್ಲಿ ಸಾಕಷ್ಟು ವರ್ಷಗಳಿಂದ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡು ತೂಗುದೀಪ ಪ್ರೋಡಕ್ಷನ್ಸ್ ಹಾಗೂ ವಿತರಣೆಯ ಸಂಪೂರ್ಣ ಜವಾಬ್ದಾರಿಗಳನ್ನು ನೊಡುಕೊಳ್ಳುತ್ತಿದ್ದ ಮಲ್ಲಿಕಾರ್ಜುನ್, ದರ್ಶನ್ ಹೆಸರು ಬಳಸಿಕೊಂಡು ಸಾಕಷ್ಟು ಜನರಿಗೆ ಮೋಸ ಮಾಡಿರುವ ವಿಚಾರ ಕಳೆದ ಎರಡು ವಾರಗಳ ಹಿಂದೆಯೇ ತಿಳಿದು ಬಂದಿತ್ತು.
ಇನ್ನೇನು ಈ ವಿಚಾರವೆಲ್ಲಾ ತಣ್ಣಗಾಯ್ತು ಎಂದು ಕೊಳ್ಳುವಷ್ಟರಲ್ಲಿ ಮಲ್ಲಿಕಾರ್ಜುನ್ ಮತ್ತೆ ಕೆಲವರಿಗೆ ಮೋಸ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದೇ ವರ್ಷದ ಆರಂಭದಲ್ಲಿ ಅರ್ಜುನ್ ಸರ್ಜಾ ನಿರ್ಮಾಣ ಮಾಡಿ ನಿರ್ದೇಶನ ಮಾಡಿದ್ದ 'ಪ್ರೇಮ ಬರಹ' ಚಿತ್ರ ತೆರೆಗೆ ಬಂದಿತ್ತು. ಸಿನಿಮಾದ ವಿತರಣೆ ತೂಗುದೀಪ ಸಂಸ್ಥೆ ತೆಗೆದುಕೊಂಡಿತ್ತು.
ಮಲ್ಲಿಕಾರ್ಜುನ್ ಅವರೇ ವಿತರಣೆಯ ವಿಚಾರಗಳನ್ನು ನಿಭಾಯಿಸುತ್ತಿದ್ದ ಕಾರಣ ನಟ ಅರ್ಜುನ್ ಸರ್ಜಾ ಅವರ ಬಳಿಯೇ ವ್ಯವಹಾರವನ್ನು ಮಾಡಿದ್ದರು. ಮಲ್ಲಿಕಾರ್ಜುನ್ ಅರ್ಜುನ್ ಸರ್ಜಾ ಅವರಿಗೂ ಮೋಸ ಮಾಡಿದ್ದಾರಂತೆ, ಹಾಗಾದರೆ ಸರ್ಜಾ ಅವರಿಗೆ ಯಾವ ರೀತಿಯಲ್ಲಿ ಮೋಸ ಆಯ್ತು? ಈ ಬಗ್ಗೆ ಅರ್ಜುನ್ ಸರ್ಜಾ ಹೇಳುವ ಮಾತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಅರ್ಜುನ್ ಸರ್ಜಾಗೆ ವಂಚನೆ
ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದ 'ಪ್ರೇಮ ಬರಹ' ಸಿನಿಮಾವನ್ನು ತೂಗುದೀಪ ಸಂಸ್ಥೆಯ ಮೂಲಕ ವಿತರಣೆ ಮಾಡಲಾಗಿತ್ತು. ಈ ಸಮಯದಲ್ಲಿ ಬಂದ ಸಂಪೂರ್ಣ ಹಣವನ್ನು ಮಲ್ಲಿಕಾರ್ಜುನ್ ತೆಗೆದುಕೊಂಡು ಕಾಣೆಯಾಗಿದ್ದಾರೆ ಎನ್ನುವ ಸುದ್ದಿ ಮಾಧ್ಯಮದಲ್ಲಿ ವರದಿ ಆಗುತ್ತಿದೆ.

ಮೋಸದ ಬಗ್ಗೆ ಅರ್ಜುನ್ ಸರ್ಜಾ ಮಾತು
ದರ್ಶನ್ ಮ್ಯಾನೇಜರ್ ನಿಂದ ಮೋಸವಾಗಿದೆ ಎನ್ನುವ ವಿಚಾರ ಕೇಳಿ ಬರುತ್ತಿದ್ದ ಹಾಗೆ ಈ ಬಗ್ಗೆ ಅರ್ಜುನ್ ಸರ್ಜಾ ಅವರನ್ನು ವಿಚಾರಿಸಿದರೆ ಅವರು ಹೇಳುವುದು ಇಷ್ಟು. "ಎಲ್ಲರಿಗೂ ಮೋಸ ಮಾಡಿ ಹೋಗಿದ್ದಾರೆ. ದರ್ಶನ್ ಅವರಿಗೆ ಗೊತ್ತಿಲ್ಲದಂಗೆ ಹೋಗಿದ್ದಾರೆ. ದರ್ಶನ್ ಕೂಡ ನಂಬಿಕೊಂಡಿದ್ದರು. ನಮ್ಮ ಸಿನಿಮಾ ವಿತರಣೆ ಮಾಡಿ ಒಂದು ರೂಪಾಯಿ ನೀಡದೆ ತೆಗೆದುಕೊಂಡು ಹೋಗಿದ್ದಾರೆ".

ಈ ಬಗ್ಗೆ ಮಾತನಾಡದ ದರ್ಶನ್
ಮಲ್ಲಿಕಾರ್ಜುನ್ ಕಾಣೆ ಆಗಿರುವುದು ನಿಜ. ಆದರೆ ದರ್ಶನ್ ಹೆಸರಿನಲ್ಲಿ ಸುತ್ತಾ ಮುತ್ತ ಇರುವವರಿಗೆ ಮಾತ್ರ ಮೋಸ ಮಾಡಿದ್ದಾರಾ? ಅಥವಾ ದರ್ಶನ್ ಅವರಿಗೂ ದೋಖಾ ಮಾಡಿದ್ದಾರಾ ಎನ್ನುವುದರ ಬಗ್ಗೆ ಇಲ್ಲಿಯ ತನಕ ದರ್ಶನ್ ಸ್ಪಷ್ಟನೆ ನೀಡಿಲ್ಲ.

ಎಲ್ಲಿಯೂ ದೂರು ದಾಖಲಾಗಿಲ್ಲ
ಮಲ್ಲಿಕಾರ್ಜುನ್ ತಲೆ ಮರೆಸಿಕೊಂಡಿದ್ದಾರೆ. ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಎಲ್ಲಿಯೂ ಈ ಬಗ್ಗೆ ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲದೆ ಎಲ್ಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.


Click it and Unblock the Notifications











