'ಡಿ' ಪರಿವಾರದಿಂದ ದರ್ಶನ್ ಆಪ್ತನಿಗೆ ಕೊಕ್: ಕಾರಣ ಬಿಚ್ಚಿಟ್ಟ ಸೀನಣ್ಣ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್ ಮಲ್ಲಿಕಾರ್ಜುನ ಅವರು, ಕಳೆದ ಕೆಲವು ತಿಂಗಳ ಹಿಂದೆ ಸಂಪರ್ಕಕ್ಕೆ ಸಿಗದೆ ದೂರವಾಗಿದ್ದರು. ದರ್ಶನ್ ಅವರ ಹೆಸರು ಬಳಸಿಕೊಂಡು ಇಂಡಸ್ಟ್ರಿಯಲ್ಲಿ ಕೆಲವರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪವೂ ಇವರ ಮೇಲೆ ಬಂದಿತ್ತು.
ಮಲ್ಲಿಕಾರ್ಜುನ್ ಅವರು ಕಾಣೆಯಾದ ಬಳಿಕ ಆಪ್ತ ಶ್ರೀನಿವಾಸ್ ಅವರ ಆ ಜಾಗಕ್ಕೆ ಬಂದರು. ಡಿ ಬಾಸ್ ಗೆ ಆಪ್ತರಾಗಿದ್ದ ಸೀನ ಅವರನ್ನ ಈಗ ದರ್ಶನ್ ತೂಗುದೀಪ ಅವರಿಗೆ ಸಂಬಂಧಪಟ್ಟ ಎಲ್ಲ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಸರಿಸಲಾಗಿದೆ ಎಂಬ ವಿಷಯ ಬಹಿರಂಗವಾಗಿತ್ತು.
ಆದರೆ, ಇದಕ್ಕೆ ನಿಖರವಾದ ಕಾರಣ ಗೊತ್ತಿರಲಿಲ್ಲ. ದರ್ಶನ್ ಅವರ ಅಧಿಕೃತ ಅಭಿಮಾನಿ ಸಂಘ ಡಿ ಕಂಪನಿ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಈ ಬಗ್ಗೆ ಪ್ರಕಟಣೆ ನೀಡಿತ್ತು. ಮುಂದೆ ಓದಿ...

ಡಿ ಕಂಪನಿ ಕೊಟ್ಟಿದ್ದ ಪ್ರಕಟಣೆ
''ನಮ್ಮ ಡಿ ಬಾಸ್ ಬಳಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ (ಸೀನ) ರವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಸರಿಸಲಾಗಿದೆ. ಅವರ ಜೊತೆ ಡಿ ಬಾಸ್ ರವರ ಹೆಸರಲ್ಲಿ ಯಾವುದೇ ವ್ಯವಹಾರ ಮಾಡದಿರಿ. ಇಂತಿ ನಿಮ್ಮ ಡಿ ಕಂಪನಿ'' ಎಂದು ಪೋಸ್ಟ್ ಹಾಕಿದ್ದರು.

ಅನುಮಾನದ ಹುತ್ತ ಬೆಳೆದಿತ್ತು
ದಿಢೀರ್ ಅಂತ ಶ್ರೀನಿವಾಸ್ ಅವರ ಕುರಿತು ಇಂತಹದೊಂದು ಸುದ್ದಿ ಹೊರಬಿದ್ದ ಬೆನ್ನಲ್ಲೆ, ಅರೇ ದರ್ಶನ್ ಅವರಿಗೆ ಇವರು ಏನು ಮಾಡಿದ್ರಪ್ಪಾ ಎಂಬ ಚರ್ಚೆ ಆರಂಭವಾಯಿತು. ಆದ್ರೆ, ಸ್ಪಷ್ಟ ಕಾರಣ ಗೊತ್ತಿರಲಿಲ್ಲ. ಇದೀಗ, ಸ್ವತಃ ಶ್ರೀನಿವಾಸ್ ಅವರೇ ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾತನಾಡಿದ್ದಾರೆ.

ಶ್ರೀನಿವಾಸ್ ಏನು ಹೇಳಿದ್ದಾರೆ?
''ದರ್ಶನ್ ತೂಗುದೀಪ ಅಭಿಮಾನಿಗಳು ಮತ್ತು ಎಲ್ಲಾ ಮೀಡಿಯಾ ಸಂಸ್ಥೆಗಳಿಗೂ ನನ್ನ ನಮಸ್ಕಾರಗಳು. ನನಗೂ ಮತ್ತು ದರ್ಶನ್ ತೂಗುದೀಪರವರಿಗೂ ಕೆಲಸದ ವಿಷಯವಾಗಿ ಮನಸ್ತಾಪ ಬಂದಿರುವುದು ನಿಜ. ಆದ ಕಾರಣ ನಾನು ದಿನಾಂಕ 18-09-2019 ರಿಂದ ಅವರ ಬಳಿ ಕೆಲಸ ಬಿಟ್ಟಿರುತ್ತೇನೆ. ನನ್ನ ಮೇಲೆ ಯಾರೂ ಸಹ ಇಲ್ಲಸಲ್ಲದ ಆರೋಪ ಹೊರಿಸಬೇಡಿ. ನನಗೂ ಕುಟುಂಬ ಇದೆ. ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿಯೇ ಕೆಲಸ ಮಾಡಿಕೊಂಡು ಇದ್ದೇನೆ'' ಎಂದು ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.

ಹಲವು ವರ್ಷಗಳಿಂದ ಜೊತೆಯಲ್ಲಿದ್ದ ಸೀನ
ಅಂದ್ಹಾಗೆ, ಸೀನ ಅವರು ಡಿ ಬಾಸ್ ಜೊತೆ ಹಲವು ವರ್ಷಗಳಿಂದ ಜೊತೆಯಲ್ಲಿದ್ದರು. ಸೀನ ಅವರು ಮ್ಯಾನೇಜರ್ ಆಗಿರಲಿಲ್ಲ. ದರ್ಶನ್ ಅವರ ಸಹಾಯಕರಾಗಿದ್ದರು. ದರ್ಶನ್ ಅವರ ಕುಟುಂಬದ ಸದಸ್ಯನಂತೆ ಇದ್ದರು. ಡಿ ಬಾಸ್ ಹೋಗುತ್ತಿದ್ದ ಕಡೆಯಲ್ಲೆಲ್ಲ ಜೊತೆಯಲ್ಲೆ ಇರ್ತಿದ್ದರು. ಆದ್ರೀಗ, ಅಂತರ ಪಡೆದುಕೊಂಡಿದ್ದಾರೆ.


Click it and Unblock the Notifications











