ತೆಲುಗು ಚಿತ್ರರಂಗದ ವಿರುದ್ಧ ದರ್ಶನ್ ಅಸಮಾಧಾನ: ಫಿಲಂ ಛೇಂಬರ್‌ಗೆ ದೂರು ಸಾಧ್ಯತೆ

ತೆಲುಗು ಚಿತ್ರರಂಗದವರ ಸ್ವಪಕ್ಷಪಾತ ನೀತಿ ಬಗ್ಗೆ ನಟ ದರ್ಶನ್ ಅಸಮಧಾನಗೊಂಡಿದ್ದಾರೆ. ತೆಲುಗು ಚಿತ್ರರಂಗದ ಇಬ್ಬಗೆ ನೀತಿ ವಿರುದ್ಧ ಫಿಲಂ ಛೇಂಬರ್‌ಗೆ ದೂರು ನೀಡುವ ಸಾಧ್ಯತೆಯೂ ಇದೆ.

ಕರ್ನಾಟಕದಲ್ಲಿ ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮಗಳು, ತಕರಾರುಗಳು ಇಲ್ಲ. ಆದರೆ ಕನ್ನಡ ಸಿನಿಮಾಗಳು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಕೆಲವು ಅಲಿಖಿತ ನಿಯಮಗಳನ್ನು ವಿಧಿಸಲಾಗಿದೆ. ಇದು ದರ್ಶನ್ ಅಸಮಾಧಾನಕ್ಕೆ ಕಾರಣ.

ತೆಲುಗಿನ ಯಾವುದೇ ಸಿನಿಮಾ ಬಿಡುಗಡೆ ಇದ್ದು. ಅದೇ ಸಮಯದಲ್ಲಿ ಕನ್ನಡದ ಯಾವುದಾದರು ಸಿನಿಮಾಗಳು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸಿದರೆ ಅದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ತೆಲುಗಿನ ಸಣ್ಣ ಬಜೆಟ್ ಸಿನಿಮಾಗಳ ಸಿನಿಮಾ ಬಿಡುಗಡೆ ಇದ್ದರೂ ಸಹ ಕನ್ನಡದ ಸಿನಿಮಾಗಳನ್ನು ತಡೆ ಹಿಡಿಯಲಾಗುತ್ತಿದೆ. ತೆಲುಗು ಡಬ್ ವರ್ಷನ್‌ಗಳಿಗೆ ಸಹ ಅಡ್ಡಿಪಡಿಸಲಾಗುತ್ತಿದೆ.

ಫಿಲಂ ಛೇಂಬರ್‌ಗೆ ದರ್ಶನ್ ದೂರು?

ಫಿಲಂ ಛೇಂಬರ್‌ಗೆ ದರ್ಶನ್ ದೂರು?

ನಾಳೆ (ಜನವರಿ 28) ರಂದು ಬೆಳಿಗ್ಗೆ 11 ಗಂಟೆ ವೇಳೆಗೆ ನಟ ದರ್ಶನ್ ಅವರು ತೆಲುಗು ಸಿನಿಮಾರಂಗದ ಸ್ವಪಕ್ಷಪಾತದ ವಿರುದ್ಧ ಫಿಲಂ ಛೇಂಬರ್‌ ನಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.

ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ತೆರೆಗೆ

ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ತೆರೆಗೆ

ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಮಾರ್ಚ್ 11 ರಂದು ಬಿಡುಗಡೆ ಆಗಲಿದೆ. ಅದೇ ದಿನ ತೆಲುಗಿನ ಮೂರು ಸಿನಿಮಾಗಳು ತೆರೆಗೆ ಬರಲಿವೆ. ಹಾಗಾಗಿ 'ರಾಬರ್ಟ್' ಸಿನಿಮಾದ ಬಿಡುಗಡೆಗೆ ತಡೆ ನೀಡಲಾಗಿದೆ ಎನ್ನಲಾಗುತ್ತಿದೆ.

ಫಿಲ್ಮೀಬೀಟ್ ಜೊತೆ ನಿರ್ಮಾಪಕ ಉಮಾಪತಿ ಮಾತು

ಫಿಲ್ಮೀಬೀಟ್ ಜೊತೆ ನಿರ್ಮಾಪಕ ಉಮಾಪತಿ ಮಾತು

ಈ ಬಗ್ಗೆ 'ರಾಬರ್ಟ್' ಸಿನಿಮಾದ ನಿರ್ಮಾಪಕ ಉಮಾಪತಿ ಅವರನ್ನು ಫಿಲ್ಮೀಬೀಟ್ ಸಂಪರ್ಕಿಸಿದಾಗ. 'ಈ ಬಗ್ಗೆ ನಾಳೆ ಎಲ್ಲರಿಗೂ ಗೊತ್ತಾಗಲಿದೆ. ರಾತ್ರೋ-ರಾತ್ರಿ ಸಂಗತಿಗಳು ಬದಲಾಗಬಹುದು, ಬದಲಾಗದೆಯೂ ಇರಬಹುದು. ಎಲ್ಲ ವಿಷಯಗಳ ಬಗ್ಗೆ ನಾಳೆ ಮಾಧ್ಯಮಗಳಿಗೆ ತಿಳಿಸುತ್ತೇವೆ' ಎಂದರು.

Recommended Video

ಪೊಗರು, ರಾಬರ್ಟ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ | Filmibeat Kannada
ನಿಯಮ ಪಾಲಿಸಲಾಗುತ್ತಿಲ್ಲ

ನಿಯಮ ಪಾಲಿಸಲಾಗುತ್ತಿಲ್ಲ

ಇತರ ಭಾಷೆ ಸಿನಿಮಾಗಳು ಬಿಡುಗಡೆ ಆದ ಕೆಲವು ವಾರಗಳ ನಂತರ ಕರ್ನಾಟಕದಲ್ಲಿ ಬಿಡುಗಡೆ ಆಗಬೇಕು ಎಂಬ ನಿಯಮ ಕೆಲ ವರ್ಷಗಳ ಮುಂದೆ ಇತ್ತು. ನಂತರ ಅದರ ಪಾಲನೆ ನಿಂತುಹೋಯಿತು. ತೆಲುಗು ಸೇರಿದಂತೆ ಇತರ ಭಾಷೆ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆ ಆಗಲು ಯಾವುದೇ ನಿಯಮಾವಳಿಗಳು ಈಗಿಲ್ಲ. ಅಥವಾ ಪಾಲಿಸಲಾಗುತ್ತಿಲ್ಲ.

More from Filmibeat

English summary
Actor Darshan may give complaint against Telugu movie industry to Film chamber.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X