ನೀವು ಸ್ಟಾರ್, ನೀವು ಚೆನ್ನಾಗಿರಬೇಕು: ಗಡ್ಡಪ್ಪ ಭೇಟಿ ಮಾಡಿದ ದರ್ಶನ್
Recommended Video

ಮಂಡ್ಯದಲ್ಲಿ ಪ್ರಚಾರ ಮಾಡುತ್ತಿರುವ ನಟ ದರ್ಶನ್, ಇಂದು ಶ್ರೀರಂಗಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತಯಾಚನೆ ಮಾಡಿದರು. ಇದೇ ವೇಳೆ ಹಿರಿಯ ನಟ, ತಿಥಿ ಖ್ಯಾತಿಯ ಗಡ್ಡಪ್ಪ ಅವರ ಊರಿಗೆ ಭೇಟಿ ನೀಡಿದ ದರ್ಶನ್, ಅವರ ಯೋಗಕ್ಷೇಮ ವಿಚಾರಿಸಿದರು.
ನಿಮ್ಮ ಮತವನ್ನ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಹಾಕಿ ಎಂದು ಮನವಿ ಮಾಡಿಕೊಂಡರು. ಅದಕ್ಕೆ ಗಡ್ಡಪ್ಪ ಕೂಡ 'ನನ್ನ ವೋಟ್ ಸುಮಲತಾಗೆ ಹೋಗಿ' ಎಂದರು.
ಇನ್ನು ಗಡ್ಡಪ್ಪ ಅವರ ಬಳಿ ಮಾತನಾಡುತ್ತಿದ್ದಾಗ ಕೆಲವು ಅಭಿಮಾನಿಗಳು ದರ್ಶನ್ ಅವರಿಗೆ ಹೂವಿನ ಹಾರ ಹಾಕಲು ಮುಂದಾದರು. ಆ ಹಾರವನ್ನ ತೆಗೆದುಕೊಂಡ ದರ್ಶನ್, ಗಡ್ಡಪ್ಪ ಅವರಿಗೆ ಹಾಕಿ, ನೀವು ಸ್ಟಾರ್ ನೀವು ಚೆನ್ನಾಗಿರಬೇಕು' ಎಂದರು.

ಬಳಿಕ ಮಾತನಾಡಿದ ಗಡ್ಡಪ್ಪ 'ದರ್ಶನ್ ಅವರ ಬಂದು ಸುಮಲತಾ ಅವರಿಗೆ ಮತ ಕೇಳಿದ್ರು. ನಾನು ಅವರಿಗೆ ವೋಟ್ ಹಾಕೋದು. ನಾನು ಕೂಡ ಅವರ ಪರವಾಗಿ ಪ್ರಚಾರ ಮಾಡ್ತಿದ್ದೀನಿ' ಎಂದು ತಿಳಿಸಿದರು.
ಏಪ್ರಿಲ್ 14 ರಂದು ಮದ್ದೂರ್ ಮತ್ತು ಏಪ್ರಿಲ್ 15 ರಂದು ಪಾಂಡವಪುರದಲ್ಲಿ ಪ್ರಚಾರ ಮಾಡಲಿರುವ ನಟ ದರ್ಶನ್, ಏಪ್ರಿಲ್ 16 ರಂದು ಬೃಹತ್ ಜಾಥ ನಡೆಸಲಿದ್ದಾರೆ.


Click it and Unblock the Notifications











