For Quick Alerts
  ALLOW NOTIFICATIONS  
  For Daily Alerts

  ಕಿಡ್ನಿ ವೈಫಲ್ಯದಿಂದ ಬಳಲುತಿದ್ದ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಡಿ ಬಾಸ್

  |
  ಕಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಗುವನ್ನು ಭೇಟಿ ಮಾಡಿದ ದರ್ಶನ್ | DARSHAN THOGUDEEPA | FILMIBEAT KANNADA

  ಕಷ್ಟ ಎಂದವರ ಪಾಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಅಭಯಹಸ್ತ ಚಾಚುತ್ತಾರೆ. ಸಾಕಷ್ಟು ಜನರ ಕಷ್ಟಕ್ಕೆ ನೆರವಾಗುವ ದರ್ಶನ್ ಇತ್ತೀಚಿಗೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಪೋರನ ಆಸೆ ಈಡೇರಿಸುವ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಸಹಾಯದ ಗುಣದಿಂದನೆ ಅಭಿಮಾನಿಗಳ ಹೃದಯಕ್ಕೆ ತೀರ ಹತ್ತಿರವಾಗಿರುವ ದಾಸ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ.

  ಇಂದು ಸಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿ ಆ ಪೋರನ ಮುಖದಲ್ಲಿ ನಗು ಮೂಡಿಸಿದ್ದಾರೆ. ಹೌದು, ಸಾವು ಬದುಕಿನ ನಡುವೆ ಹೋರಾಡುತ್ತಿರುವ ಡಿ ಬಾಸ್ ಪುಟ್ಟ ಅಭಿಮಾನಿ ರತನ್ ನನ್ನು ಭೇಟಿಯಾಗಿ ಆತನ ಬಹುದಿನದ ಕನಸನ್ನು ಈಡೇರಿಸಿದ್ದಾರೆ.

  ಕನ್ವರ್ ಲಾಲ್ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲ್ಫಿ.!ಕನ್ವರ್ ಲಾಲ್ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲ್ಫಿ.!

  ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರತನ್ ಗೆ ದರ್ಶನ್ ಅಂದರೆ ತುಂಬಾ ಇಷ್ಟವಂತೆ. ಒಮ್ಮೆಯಾದರು ದರ್ಶನ್ ಅವರನ್ನು ಭೇಟಿ ಮಾಡಬೇಕೆನ್ನುವುದು ಆಸೆಯಂತೆ. ಬಾಲಕನ ಆಸೆ ಪಡುತ್ತಿರುವ ಸುದ್ದಿ ದರ್ಶನ್ ಗೆ ಗೊತ್ತಾಗುತ್ತಿದ್ದಂತೆ ಆ ಪುಟ್ಟ ಪೋರನಿಗಾಗಿ ಸಮಯ ಮೀಸಲಿಡಲು ನಿರ್ಧರಿಸಿದ್ದಾರೆ.

  ಹಾಸನದಿಂದ ರತನ್ ಕುಟುಂಬವನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ದರ್ಶನ್ ನೀವಾಸಕ್ಕೆ ಬಂದ ರತನ್ ಕುಟುಂಬದವರ ಜೊತೆ ಒಂದಿಷ್ಟು ಸಮಯ ಕಾಲಕಳೆದಿದ್ದಾರೆ. ದರ್ಶನ್ ಭೇಟಿಯಾಗುತ್ತಿದಂತೆ ರತನ್ ಸಂತಸ ಹೇಳತೀರದು. ಕಟುಂಬದವರಿಗೆ ಮತ್ತು ಬಾಲಕನಿಗೆ ದರ್ಶನ್ ಧೈರ್ಯ ತುಂಬಿದ್ದಾರೆ. ರತನ್ ತಂದೆ ಆಟೋ ಓಡಿಸುತ್ತಾರೆ. ತಂದೆಯ ಆಟೋ ಮೇಲೂ ದರ್ಶನ್ ಅವರ ಫೋಟೋವಿದೆ. ಹೀಗೆ ದರ್ಶನ್ ಸಾಕಷ್ಟು ಜನರ ಕಷ್ಟಕ್ಕೆ ನೆರವಾಗಿದ್ದಾರೆ.

  Read more about: darshan ದರ್ಶನ್
  English summary
  Kannada actor Darshan meets kidney failure fan and he fulfilled his small fan dream.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X