For Quick Alerts
  ALLOW NOTIFICATIONS  
  For Daily Alerts

  ರಿಷಬ್ ಶೆಟ್ಟಿ ಭೇಟಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್; ಕಾರಣವೇನು?

  By ಫಿಲ್ಮ್ ಡೆಸ್ಕ್
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗೆ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿಯನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ರಿಷಬ್ ಶೆಟ್ಟಿ, ಚಾಲೆಂಜಿಂಗ್ ಸ್ಟಾರ್ ಗೆ ಸಿನಿಮಾ ಮಾಡ್ತಿದ್ದಾರಾ? ಸೈಲೆಂಟ್ ಆಗಿ ಸಿನಿಮಾ ಮಾತುಕತೆ ನಡೆಯುತ್ತಿದೆಯಾ? ಎಂದು ಯೋಚಿಸುತ್ತಿದ್ದೀರಾ. ಇಬ್ಬರು ಸಿನಿಮಾ ಮಾಡಿದರೂ ಅಚ್ಚರಿ ಇಲ್ಲ.

  ರಿಷಬ್ ಶೆಟ್ಟಿ ಮತ್ತು ತಂಡ ಸದ್ಯ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಮೈಸೂರಿನಲ್ಲಿ ಭರ್ಜರಿಯಾಗಿ ಚಿತ್ರೀಕರಣ ಮಾಡುತ್ತಿರುವ ತಂಡವನ್ನು ದರ್ಶನ್ ಸಹಜವಾಗಿ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.

  ರಿಷಬ್ ಶೆಟ್ಟಿಯ ಹೊಸ ಸಿನಿಮಾದಿಂದ ಹೊರನಡೆದ ನಿರ್ದೇಶಕ

  ಸಾಮಾನ್ಯವಾಗಿ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದರೆ ದರ್ಶನ್ ಚಿತ್ರೀಕರಣ ಸೆಟ್ ಗೆ ಹೋಗಿ ಭೇಟಿಯಾಗಿ ಮಾತುಕತೆ ನಡೆಸುತ್ತಾರೆ. ಚಿತ್ರತಂಡದ ಜೊತೆ ಕಾಲಕಳೆದು ತಂಡಕ್ಕೆ ಶುಭಕೋರಿ ವಾಪಸ್ ಆಗುತ್ತಾರೆ. ಹಾಗೆ ಹರಿಕಥೆ ಅಲ್ಲ ಗಿರಿಕಥೆತಂಡವನ್ನು ಭೇಟಿಯಾಗಿದ್ದಾರೆ. ದರ್ಶನ್ ಮತ್ತು ನಿರ್ಮಾಪಕ ಸಂದೇಶ್ ನಾಗರಾಜ್ ಇಬ್ಬರು ರಿಷಬ್ ಶೆಟ್ಟಿ ಮತ್ತು ತಂಡವನ್ನು ಭೇಟಿಯಾಗಿದ್ದಾರೆ.

  ದರ್ಶನ್ ಭೇಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಇತ್ತೀಚಿಗಷ್ಟೆ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ದೊಡ್ಡ ಬದಲಾವಣೆ ಆಗಿದೆ. ಚಿತ್ರದಿಂದ ನಿರ್ದೇಶಕ ಗಿರಿಕೃಷ್ಣ ಹೊರನಡೆದಿದ್ದಾರೆ. ಅನಾರೋಗ್ಯದ ಕಾರಣ ನಿರ್ದೇಶಕ ಗಿರಿಕೃಷ್ಣ ಸಿನಿಮಾದ ಹೊರನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

  Ragini Dwivedi ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ | Filmibeat Kannada

  ಇದೀಗ ಚಿತ್ರಕ್ಕೆ ಹೊಸ ನಿರ್ದೇಶಕರು ಎಂಟ್ರಿ ಕೊಟ್ಟಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಇಬ್ಬರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಾಗುತ್ತಿದೆ. ರಿಷಬ್ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯ ಜೊತೆಗೆ ನಿರ್ದೇಶನದಲ್ಲೂ ನಿರತರಾಗಿದ್ದಾರೆ.

  English summary
  Challenging star Darshan meets Rishab Shetty And team in Mysuru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X