Darshan: ಅಂಗವಿಕಲ ಅಭಿಮಾನಿಯ ಭೇಟಿಯಾಗಿ ಸ್ಪೂರ್ತಿ ತುಂಬಿದ ದರ್ಶನ್
ನಟ ದರ್ಶನ್, ಅಭಿಮಾನಿಗಳ ಪಾಲಿಗೆ ದೇವರಿದ್ದಂತೆ. ದರ್ಶನ್‌ಗೂ ಸಹ ಅಭಿಮಾನಿಗಳೆಂದರೆ ಕುಟುಂಬದವರೇ ಇದ್ದಂತೆ. ಅಭಿಮಾನಿಗಳನ್ನು 'ಸೆಲೆಬ್ರಿಟಿ'ಗಳೆಂದೇ ಕರೆಯುವುದು ದರ್ಶನ್ ಅಭ್ಯಾಸ.
ತಮ್ಮ ಅಭಿಮಾನಿಗಳು ಅತಿರೇಕದ ವರ್ತನೆ ತೋರಿಸದಾಗ ನೇರವಾಗಿ ಗದರುವ ಸಲುಗೆಯನ್ನು ದರ್ಶನ್ ಇಟ್ಟುಕೊಂಡಿದ್ದಾರೆ. ಅಂತೆಯೇ ಅಭಿಮಾನಿಗಳು ಕಷ್ಟದಲ್ಲಿದ್ದಾಗ ಕೈ ಚಾಚುವ ಗುಣವನ್ನೂ ಹೊಂದಿದ್ದಾರೆ. ಆರ್ಥಿಕ ಸಹಾಯ ಮಾತ್ರವಲ್ಲ ನೈತಿಕ ಸಹಾಯವನ್ನೂ ಮಾಡುತ್ತಾರೆ ದರ್ಶನ್. ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ.
ದಾವಣೆಗೆರೆಯ ಮಧು ನಟ ದರ್ಶನ್‌ರ ಅಪ್ಪಟ ಅಭಿಮಾನಿ ಆದರೆ ಅವರಿಗೆ ಅನಾರೋಗ್ಯ ಜೊತೆಗೆ ಅಂಗವೈಕಲ್ಯ. ಮಧು ಅವರನ್ನು ಭೇಟಿ ಮಾಡಿದ ದರ್ಶನ್, ಮಧುಗೆ ಸ್ಪೂರ್ತಿ ತುಂಬಿವ ಮಾತುಗಳನ್ನಾಡಿದ್ದಾರೆ. ''ನಮ್ಮ ಕಡೆ ಗಾದೆ ಹೇಳುತ್ತಾರೆ, 'ಗಟ ಇದ್ರೆ ಮಠಗಳು ಅದೆಷ್ಟೊ' ಅಂತೆ. ಹಾಗೆ ಮನುಷ್ಯ ಇದ್ರೆ ಏನು ಬೇಕಾದರೂ ಸಾಧನೆ ಮಾಡಬಹುದು. ಮೊದಲು ನೀವು ಗಟ್ಟಿಯಾಗಬೇಕು'' ಎಂದಿದ್ದಾರೆ ದರ್ಶನ್.
Recommended Video


ಅಭಿಮಾನಿಯನ್ನು ಕಾರಿನಲ್ಲಿಯೇ ಕುಳ್ಳಿರಿಸಿ ಆತ್ಮೀಯತೆಯಿಂದ ಬಾಗಿ ಮಾತನಾಡಿರುವ ದರ್ಶನ್, ''ಯಾಕೆ ಇಷ್ಟು ಸಣ್ಣ ಆಗಿಬಿಟ್ಟಿರಿ. ಆರೋಗ್ಯ ಸರಿಯಾಗಿ ನೋಡಿಕೊಳ್ಳಬೇಕು ತಾನೆ. ಮೊದಲು ಆರೋಗ್ಯದ ಕಡೆ ಗಮನಕೊಡಿ. ಇನ್ನೇನೂ ಯೋಚನೆ ಮಾಡಲು ಹೋಗಬೇಡಿ. ಮೊದಲು ಆರೋಗ್ಯವಂತರಾಗಿ ಮತ್ತೆ ನಾವೆಲ್ಲ ಒಟ್ಟಿಗೆ ಸಿಗೋಣ. ಆರೋಗ್ಯದ ಹೆಚ್ಚು ಗಮನ ಕೊಡಿ. ಯಾವುದಕ್ಕೂ ಚಿಂತೆ ಮಾಡಬೇಡಿ'' ಎಂದಿದ್ದಾರೆ ನಟ ದರ್ಶನ್.
ದರ್ಶನ್ ಪ್ರೀತಿಯಿಂದ ಕೈ ಕುಲುಕಿ ಆತ್ಮೀಯವಾಗಿ ಮಾತನಾಡಿದ್ದಕ್ಕೆ ಅಭಿಮಾನಿ ಮಧು ಭಾವುಕರಾಗಿಬಿಟ್ಟಿದ್ದಾರೆ. ಅವರ ಬಾಯಿಂದ ಮಾತುಗಳೇ ಹೊರಡಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿವೆ.


Click it and Unblock the Notifications











