ಚಿತ್ರೀಕರಣದಿಂದ ದೂರ ಇರುವ ದರ್ಶನ್ ಗೆ ಪದೇ-ಪದೇ ನೆನಪಾಗ್ತಿದೆ ಇಡ್ಲಿ-ವಡೆ!
ನಟ-ನಟಿಯರಿಗೆ ಕ್ಯಾಮೆರಾ ದೇವರಿಗೆ ಸಮಾನ. ಎಷ್ಟೋ ಮಂದಿ ನಟ-ನಟಿಯರು ಸೆಟ್‌ಗೆ ಬಂದ ಕೂಡಲೇ ಕ್ಯಾಮೆರಾ ಗೆ ಕೈಮುಗಿದ ನಂತರವೇ ಶಾಟ್‌ಗೆ ತಯಾರಾಗುತ್ತಾರೆ. ಅದರಲ್ಲಿ ದರ್ಶನ್ ಸಹ ಒಬ್ಬರು.
ಚಿತ್ರೀಕರಣದ ಸೆಟ್ ಅನ್ನು, ಕ್ಯಾಮೆರಾವನ್ನು ಅಷ್ಟಾಗಿ ಆರಾಧಿಸುವ, ಪ್ರೀತಿಸುವ ದರ್ಶನ್, ಚಿತ್ರೀಕರಣದ ಸೆಟ್‌ಗೆ ಬಂದು ಸರಿ ಸುಮಾರು ಎಂಟು ತಿಂಗಳಾಗುತ್ತಾ ಬಂತು.
ಕೊರೊನಾ ಲಾಕ್‌ಡೌನ್ ಕಾರಣದಿಂದ ಎಲ್ಲಾ ಚಿತ್ರೀಕರಣಗಳು ಬಂದ್ ಆದ ಕಾರಣ, ಚಿತ್ರೀಕರಣ ಸೆಟ್‌ನಿಂದಲೇ ದೂರವೇ ಇದ್ದಾರೆ ದರ್ಶನ್. ಅವರ ವೀರಮದಕರಿ ನಾಯಕ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ಚಿತ್ರೀಕರಣಗಳು ಸ್ಥಗಿತಗೊಂಡಿದ್ದು, ಇನ್ನಷ್ಟೆ ಆರಂಭಗೊಳ್ಳಬೇಕಿದೆ.

ಗೆಳೆಯನ ಸಿನಿಮಾಕ್ಕೆ ಶುಭಕೋರಲು ಆಗಮಿಸಿದ್ದ ದರ್ಶನ್
ತಮ್ಮ ಆಪ್ತ ಧ್ರವನ್ ಅವರ ಮೊದಲ ಸಿನಿಮಾ 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಸಿನಿಮಾದ ಮುಹೂರ್ತ ಸಮಾರಂಭಕ್ಕೆ ದರ್ಶನ್ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್, ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ ಚಿತ್ರೀಕರಣ ಸೆಟ್ ನಲ್ಲಿ ಯಾವುದನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಇಡ್ಲಿ-ವಡೆ-ಸಾಂಬಾರ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ದರ್ಶನ್
ಚಿತ್ರೀಕರಣ ಸೆಟ್‌ನಲ್ಲಿ ನೀಡಲಾಗುವ 'ಇಡ್ಲಿ-ವಡೆ'ಯನ್ನು ನಟ ದರ್ಶನ್ ಬಹಳವಾಗಿ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಸೆಟ್‌ನಲ್ಲಿ ನೀಡಲಾಗುವ ಇಡ್ಲಿ-ವಡೆ ಸಾಂಬಾರ್ ದರ್ಶನ್‌ಗೆ ಬಹಳ ಇಷ್ಟವಂತೆ. ಬಹು ತಿಂಗಳ ಬಳಿಕ ಚಿತ್ರೀಕರಣಗಳು ನಿಧಾನಕ್ಕೆ ಆರಂಭವಾಗುತ್ತಿದೆ. ಇದು ಬಹಳ ಸಂತೋಶ ನೀಡಿದೆ ಎಂದಿದ್ದಾರೆ ದರ್ಶನ್.

ಎಲ್ಲವೂ ಸರಿಹೋದ ನಂತರ ರಾಬರ್ಟ್ ಬಿಡುಗಡೆ: ದರ್ಶನ್
ಇದೇ ಸಮಯದಲ್ಲಿ 'ರಾಬರ್ಟ್' ಸಿನಿಮಾ ಬಿಡುಗಡೆ ಬಗ್ಗೆಯೂ ಮಾತನಾಡಿರುವ ದರ್ಶನ್, 'ರಾಬರ್ಟ್ ಸಿನಿಮಾ ಪೂರ್ಣವಾಗಿ ತಯಾರಾಗಿದೆ, ಪರಿಸ್ಥಿತಿ ಸರಿಹೋದ ಬಳಿಕ ಸಿನಿಮಾ ಬಿಡುಗಡೆ ಆಗಲಿದೆ ಎಂದಿದ್ದಾರೆ ದರ್ಶನ್.
Recommended Video

ವೀರಮದಕರಿ ನಾಯಕ ಚಿತ್ರೀಕರಣ ಪ್ರಾರಂಭವಾಗಬೇಕಿದೆ
ರಾಬರ್ಟ್ ಸಿನಿಮಾಕ್ಕಾಗಿ ನಟ ಜಗಪತಿ ಬಾಬು ಕೆಲವು ದಿನಗಳ ಹಿಂದಷ್ಟೆ ಡಬ್ಬಿಂಗ್ ಮುಗಿಸಿದ್ದಾರೆ. ಇನ್ನು ದರ್ಶನ್ ಅಭಿನಯಿಸುತ್ತಿರುವ ವೀರಮದಕರಿ ನಾಯಕ ಸಿನಿಮಾದ ಚಿತ್ರೀಕರಣ ಎರಡು ಷೆಡ್ಯೂಲ್ ಮುಗಿದಿದ್ದು, ಲಾಕ್‌ಡೌನ್ ಕಾರಣ ಸ್ಥಗಿತಗೊಂಡಿದ್ದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ.


Click it and Unblock the Notifications











