'ಕುರುಕ್ಷೇತ್ರ' ಸಿನಿಮಾ ವೀಕ್ಷಿಸಿದ ದರ್ಶನ್ ತಾಯಿ, ಸಹೋದರ ದಿನಕರ್

Recommended Video

Kurukshetra Movie: ಕುರುಕ್ಷೇತ್ರ' ಸಿನಿಮಾ ವೀಕ್ಷಿಸಿದ ದರ್ಶನ್ ತಾಯಿ, ಸಹೋದರ ದಿನಕರ್

ನಿನ್ನೆ (ಶುಕ್ರವಾರ) ಬಿಡುಗಡೆಯಾಗಿರುವ 'ಕುರುಕ್ಷೇತ್ರ' ಸಿನಿಮಾಗೆ ಪ್ರೇಕ್ಷಕರಿಂದ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳು ಮಾತ್ರವಲ್ಲದೆ ದರ್ಶನ್ ಕುಟುಂಬವೂ ಸಿನಿಮಾ ನೋಡಿ ಖುಷಿ ಪಟ್ಟಿದೆ.

ದರ್ಶನ್ ತಾಯಿ ಮೀನಾ ತೂಗುದೀಪ್, ಸಹೋದರ, ನಿರ್ದೇಶಕ ದಿನಕರ್ ತೂಗುದೀಪ್, ದಿನಕರ್ ಪತ್ನಿ ಮಾನಸ ಹಾಗೂ ದಿನಕರ್ ಮಕ್ಕಳು ಸಿನಿಮಾವನ್ನು ನೋಡಿದ್ದಾರೆ. ದರ್ಶನ್ ದುರ್ಯೋಧನ ಪಾತ್ರದಲ್ಲಿ ನೋಡಿ ಸಂತಸಗೊಂಡಿದ್ದಾರೆ.

Darshan Mother Watched Kurukshetra Kannada Movie

ಇತ್ತೀಚಿಗಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಕೂಡ ಸಿನಿಮಾವನ್ನು ವೀಕ್ಷಣೆ ಮಾಡಿದ್ದರು. ಈಗ ಅವರ ಇಡೀ ಕುಟುಂಬವೇ ಸಿನಿಮಾ ನೋಡಿದೆ. ಮೊದಲ ಬಾರಿಗೆ ದರ್ಶನ್ ಪೌರಾಣಿಕ ಸಿನಿಮಾ ಮಾಡಿದ್ದು, ಅವರಿಗೂ ಚಿತ್ರದ ಮೇಲೆ ನಿರೀಕ್ಷೆ ಇತ್ತು.

ಪ್ರಮುಖವಾಗಿ ದರ್ಶನ್ ದುರ್ಯೋಧನ ಪಾತ್ರವನ್ನು ನಿರ್ವಹಿಸುವ ರೀತಿಗೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದೆ. ದರ್ಶನ್ ಸಿನಿ ಕೆರಿಯರ್ ನಲ್ಲಿ ಬಂದ ಬೆಸ್ಟ್ ಪಾತ್ರ ಇದಾಗಿದೆ.

ಕುರುಕ್ಷೇತ್ರ ಸಿನಿಮಾ ಹೇಗಿದೆ ?

ಕನ್ನಡದಲ್ಲಿ ಪೌರಾಣಿಕ ಸಿನಿಮಾ ಬಂದು ಎಷ್ಟೋ ಕಾಲ ಆಗಿದೆ. ಹಾಗಾಗಿ, ಒಂದು ಒಳ್ಳೆಯ ಅನುಭವ, ಸಿನಿಮಾ ನೋಡಿದ ಮೇಲೆ ಆಗುತ್ತದೆ. ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ಇದ್ದರೂ, ಯಾವುದು ಹೆಚ್ಚು ಕಿರಿಕಿರಿ ಎನಿಸುವುದಿಲ್ಲ. ಚಿತ್ರಮಂದಿರದ ಒಳಗೆ ದರ್ಶನ್ ಅಭಿಮಾನಿಯಾಗಿ ಹೋದರೂ, ಪೌರಾಣಿಕ ಚಿತ್ರದ ಪ್ರೇಮಿಯಾಗಿ ಹೋದರೂ, ಅಥವಾ ಸಾಮಾನ್ಯ ಪ್ರೇಕ್ಷಕನಾಗಿ ಹೋದರೂ ಸಿನಿಮಾ ಎಲ್ಲರನ್ನು ರಂಜಿಸುತ್ತದೆ.

More from Filmibeat

English summary
Actor Darshan's mother watched kurukshetra kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X